UNIVERSAL LIBRARY ೧೧ OU 19864 AdVddl | IVSHAINN ಮಕ್ಕಳ ಮಂಛೌಸನ್‌ ಇಂಗ್ಲಿಸಿನಲ್ಲಿ ಪ್ರಸಿದ್ಧವಾದ ಈ ಕಥೆಯನ್ನು ಮಕ್ಕಳಿಗಾಗಿ ಸಂಗ್ರಹಿಸಿದೆ ಸಂಪಾದಕ ಜಿ. ಫಿ. ರಾಜರತ್ನಂ ಸತ್ಯಶೋಧನ ಪ್ರಕಟನ ಮಂದಿರ ಹೋಟಿ, ಬೆಂಗಳೂರು alc! [ಹತ್ತಾಣೆ (ಎಲ್ಲ ಹಕ್ಕುಗಳೂ ಸಂಪಾದಕರದು) ಜಿ.ಪಿ. ರಾಜರತ್ನಂ ಅವರ 3 ಶಿಶು ಸಾಹಿತ್ಯ ಬಾಲ ಸಾಹಿತ್ಯ ತುತ್ಮೂರಿ ಗೌತಮ ಬುದ್ಧ ಕಡಲೆಪುರಿ ಶ್ರೀರಾಮಚಂದ್ರ ಚುಟಕ ಅಶೋಕಮ್‌ೌರ್ಯ ಗುಲಗಂಜಿ ಶ್ರೀಹರ್ಷ ಫೆನೆಹಾಲು ಯೇಸುಕಿಸ ಕಲ್ಲುಸಕ್ಕರೆ ನರಿಯ ಬಾಲ ಕೋಳಿ ಕಳ್ಳ ದಾನವೀರ ವಿಶ್ವಂತರ ಮೆರವಣಿಗೆ ಪಂಚಾಯುಧ ತಾರೆ ಮಣಿಕಂಠ ಕಣ್ಣಿಗೆ ಹೆಬ್ಬ | ತೆನಾಲಿ ರಾಮೆ ಮಕ್ಕಳ ಗಾಂಧಿ ಮಕ್ಕಳ ಮಂಛೌಸನ್‌ ಗಿಳಿಮರಿಗಳ ಗಾಂಧಿ ಪುಟಾಣಿ ಪಂಚತಂತ್ರ ಐದರಿಂದ ಹೆದಿನ್ನೆದರ ವರೆಗಿನ ಮಕ್ಕಳಿಗೆ ಶುಚಿಯಾದ ಸ್ವಚ್ಛವಾದ ಸಚಿತ್ರವಾದ ಸ್ವಾರಸ್ಯವಾದ ಸಾಹಿತ್ಯ ಸತ್ಯಶೋಧನ ಪುಸ್ತಕ ಭಂಡಾರ ರೋಟಿ : jy 2 ೨ 2 3 ತಿ 8ರ ಕ ಇ ಔ ೯ ೯ ಜಿ ೮೫ ಈ ಧಿ ಒಳಗಿನ ಕಥೆಗಳ ಪಬ್ಬಿ ನನ್ನ ಕಥೆ ಸಿಂಹೆ ಮೊಸಳೆಗಳ ಸಂಹಾರ ತೋಳ ಕುದುರೆಯಾದದ್ದು ಕಣ್ಣಿನಿಂದ ಕಡಿ ಕಾರಿದ್ದು ಚೆರಿಹೆಣ್ಣಿನೆ ಜಿಂಕೆ ನನ್ನ ಬಳ್ಳಿ ಮನೆಯ ಹುದುರೆ ನಾನು ಚಂದ್ರ ಲೋಕಕ್ಕೆ ಹೋಗಿದ್ದೆ ತುತ್ತೂರಿಯ ಘಟ್ಟ ಮಹಾ ಮತ್ಸ್ಯ್ಯದ ಹೊಟ್ಟಿ ಯಲ್ಲಿ ಸಮುದ್ರದ ಕುದುರೆ ಧ್ರುವಥ ಸರಡಿಗಳ ಧ್ವಂಸ ನಾನು ಹಕ್ಕಿಯಂತೆ ಹಾರಿದ್ದು ನನ್ನ ಬೇಟೆ ನಾಯಿ ಚಂದ್ರಲೋಕದ ಪರಿಚಯ ಮಂಛೌಸನನ ಅಪ್ಪ ಪುಟಿ ೧೩ ೧೬ ೧೯ ೨೩. ೩೧ ೩೪ ಶ೬ ೪೦ ೪೨1 ೪೭ ೫೧ ೫೮ “app ೫ ೮ ೫ಚ 6D ಚಿತ್ರಗಳ ಪಟ್ಟ ಆಗ ಕತ್ತಿಯನ್ನು ಮೇಲೆತ್ತಿದೆ ಚೆರಿಗಿಡದ ಜಿಂಕೆ ಕುದುರೆ ನೀರು ಕುಡಿಯಿತು ಕುದುರೆಯ ಬೆನ್ನಿನ ಮೇಲೆ ಬಳ್ಳಿಯ ಮನೆ ಚಂದ್ರಲೋಕದಿಂದ ಇಳಿದೆ ಸಮುದ್ರದ ಕುದುರೆ ಸಾಧುವಾಯಿತು ಹಡಗು ಮೇಲೆ ಬಂತು ಚಂದ್ರಲೋಕ ನಿವಾಸಿ ನಾಯಿ ನಕ್ಷತ್ರ ನಿವಾಸಿ ೧೦ ಎ೨೦ ೨೫% ೨೭ ೩೦ ೩೭ ಅ ೫೪ ೫೭ ಮಕ್ಷಳ ಮಂಛಾಸನ್‌ ನನ್ನ ಕಥೆ ನನ್ನ ಹೆಸರು " ಮಂಛೌಸನ್‌'. "ಬ್ಯಾರನ್‌ ಮಂಚ್‌ ಹೌಸನ್‌' ಎಂದು ನನ್ನನ್ನು ಕರೆಯುತ್ತಾರೆ. ನಮ್ಮ ದೇಶಗಳಲ್ಲಿ " ಬ್ಯಾರನ್‌ ಎಂದರೆ ನಿಮ್ಮ ದೇಶದಲ್ಲಿ " ಪಾಳೆಯಗಾರ? ಎಂದ ಹಾಗೆ. ನಮ್ಮ ದೇಶ ಹಾಲೆಂಡ್‌. ನನಗೆ ಚಿಕ್ಕಂದಿನಿಂದಲೂ ಊರೂರು ಸುತ್ತುವುದು ಎಂದರೆ ಪರಮಪ್ರೀತಿ. ನಾನೂ ಹೋದ ಹೋದ ಕಡೆಯಲ್ಲೆಲ್ಲ ಅನೇಕ ಅದ್ಭುತವಾದ ಸಾಹಸ ಕಾರ್ಯಗಳನ್ನು ಮಾಡಿದ್ದೇನೆ. ನನ್ನ ಸಾಹಸಕೃತ್ಯಗಳನ್ನು ಇತರರಿಗೆ ವರ್ಣಿಸಿ ಹೇಳುವ ಅಭ್ಯಾಸ ನಾನು ಹುಟ್ಟಿದಾಗಿನಿಂದಲೂ ನನಗೆ ಇದೆ. ಆದರೆ ನಾನು ಹೇಳಿದ ಕತೆಗಳನ್ನು ಕೇಳಿದವರು ಯಾರೂ ಅವು ನಿಜವೆಂದು ನಂಬುವುದಿಲ್ಲ. ಶುದ್ಧ ಬುರುಡೆ, ಬೊಗಳೆ, ಉಡಾಫ, ತರಗು ಬಂಡಿ ಎಂದು ಅನೇಕ ರೀತಿಯಾಗಿ ಅದನ್ನು ಹಾಸ್ಯಮಾಡುತ್ತಾರೆ. ಅದಕ್ಕೆ ನಾನೇನು ಮಾಡಲಿ? " ನಂಬಿದರೆ ನಂಬಿ, ಬಿಟ್ಟರೆ ಬಿಡಿ? ವಿಂದುಕೊಂಡು, ಕೇಳಿದವರು ಸಿಕ್ಕಿದರೆ ನನ್ನ ಪಾಡಿಗೆ ನಾನು ನನ್ನ ಸಾಹಸಗಳನ್ನು ವರ್ಣಿಸುತ್ತೇನೆ. ಆದರೂ ನನ್ನ ಅದ್ಭುತ ಕಾರ್ಯಗಳನ್ನು ಮೆಚ್ಚಿಕೊಂಡು, ಅವು ಸತ್ಯವೆಂದು ಸಾಕ್ಷಿ ಹೇಳುವುದಕ್ಕೆ ಮೂರು ಜನ ಮಹಾ ಪುರುಷರು ಸದಾ ಸಿದ್ಧವಾಗಿರುವರೆಂದು ತಿಳಿಸಲು ನನಗೆ ತುಂಬ ಸಂತೋಷವಾಗುತ್ತದೆ. ಪ್ರಸಿದ್ಧರಾದ ಆ ಮೂವರ ಹೆಸರುಗಳನ್ನು ನೀವೂ ಕೇಳಿರಬಹುದು. ೬ ಮಕ್ಕಳ ಮಂಛೌಸನ್‌ ಮೊದಲನೆಯವನು ಅರಬ್ಬೀದೇಶದ ಸಿಂದಬಾದ ನಾವಿಕ. ಇವನೂ ನನ್ನ ಹಾಗೆಯೇ ದೇಶದೇಕಾಂತರಗಳನ್ನೆಲ್ಲ ತಿರುಗಿ, ತಾನು ಶಂಡದ್ದನ್ನು ಹೇಳಿದರೆ, ಅವನ ಕತೆಗಳನ್ನು ಯಾರೂ ನಂಬದೆ ಹೋದರು. ಈ ಸಿಂದಬಾದ ನನ್ನ ಕತೆಗಳನ್ನು ನಂಬುತ್ತಾನೆ. ಎರಡನೆಯವನು ಇಂಗ್ಲೆಂಡು ದೇಶದ ಗಲಿವರ ಎಂಬವನು. ಇವನು ಹಿಂದು ಸಲ ಲಿಲಿಪುಟ್‌ ಎಂಬ ದೇಶಕ್ಕೆ ಹೋಗಿದ್ದಾಗ, ಅಲ್ಲಿನ ಜನ ತುಂಬೇಗಿಡಕ್ಕೆ ಏಣಿ ಹಾಕಿಕೊಂಡು ಹತ್ತುವುದನ್ನು ನೋಡಿದ್ದ. ಅವರಲ್ಲಿ ಐವತ್ತು ಜನರನ್ನು ತನ್ನ ಒಂದು ಅಂಗೈಯಲ್ಲಿ ಎತ್ತಿಕೊಂಡಿದ್ದ. ಇವನೇ ಇನ್ನೊಮ್ಮೆ ಬ್ರಾಬ್‌ಡಿಂಗ್‌ನಾಗ್‌ ಎಂಬ ದೇಶಕ್ಕೆ ಹೋಗಿದ್ದ. ಅಲ್ಲಿನ ಜನ ನೆಲದ ಮೇಲೆ ನಿಂತುಕೊಂಡೇ ತೆಂಗಿನಕಾಯಿ ಕೀಳುತ್ತಿದ್ದರು. ಅವರ ಕೈಗಳ ಉಗುರಿನ ಮೇಲೆ ಈ ಗಲಿವರ ಜಾರುಗುಪ್ಪೆ ಆಟವಾಡಿದ್ದ. ಇವನು ಅದನ್ನೆಲ್ಲಾ ವರ್ಣಿಸಿದಾಗಲೂ ಯಾರೂ ನಂಬಲಿಲ್ಲ. ಇಂಥವನು ನನ್ನ ಕತೆ ಗಳನ್ನು ಸತ್ಯವೆಂದು ಹೇಳುತ್ತಾನೆ. ಮೂರನೆಯವನು ಪರ್ಷಿಯಾದೇಶದ ಅಲ್ಲಾವುದ್ದೀನ್‌. ಅದ್ಭುತ ದೀಪವನ್ನು ಸಂಪಾದಿಸಿ, ಅದರ ಸಹಾಯದಿಂದ ಮಹಾ ಭೂತವೊಂದನ್ನು ಕೈವಶಪಡಿಸಿಕೊಂಡ್ಕು ಅದರ ಮೂಲಕವಾಗಿ ಚೀನಾದೇಶದ ಚಕ್ರವರ್ತಿಯ ಸ್ವಂತ ಮಗಳನ್ನು ಮದುವೆಯಾದ ಈ ಮಹಾಪುರುಷ ನನ್ನ ಕತೆಗಳು ತನ್ನ ಕಣ್ಣಾಣೆಗೂ ನಿಜವೆಂದು ಸಾರಿ ಸಾರಿ ಹೇಳುತ್ತಾನೆ. ಇಂತಹ ಮಹಾಪುರುಷರ ಮಾತಿಗೆ ಕೂಡ ಬೆಲೆ ಕೊಡದೆ, ನಾನು ಹೇಳುವ ಸಂಗತಿಗಳನ್ನು ಸುಳ್ಳು ಎಂದು ತಳ್ಳಿ ಹಾಕುವು ದಾದರೆ, ಅಂಥವರನ್ನು ಮೆಚ್ಚಿಸುವುದು ದೇವರಿಗೆ ಕೂಡ ಸಾಧ್ಯವಿಲ್ಲ. ಆದ್ದರಿಂದ್ಕ ನನ್ನ ಪದ್ಧತಿಯ ಪ್ರಕಾರ, "ನಂಬಿದರೆ ನಂಬಿ, ನನ್ನ ಕಥೆ ೬ ಬಿಟ್ಟರೆ ಬಿಡಿ' ಎಂದುಕೊಂಡು, ನನಗೆ ಸಂಭವಿಸಿರುವ ಅನೇಕಾನೇಕ ಅದ್ಭುತ ಕಾರ್ಯಗಳಲ್ಲಿ ಕೆಲವನ್ನು ಮಕ್ಕಳಾದ ನಿಮಗೆ ಹೇಳುತ್ತೇನೆ. ಸಿಂಹ ಮೊಸಳೆಗಳ ಸಂಹಾರ ನನಗೆ ಚಿಕ್ಕಂದಿನಿಂದಲೂ ದೇಶ ದೇಶ ತಿರುಗಾಡುವ ಹುಚ್ಚು ಬಹಳ. ನನಗೆ ಮಾತ್ರವಲ್ಲ, ನನ್ನ ತಂದೆಯನರಿಗೂ ಹಾಗೆಯೇ. ಆದರೆ ಮಾತ್ರ ಅವರು ನನ್ನ ಪ್ರಯಾಣಗಳಿಗೆ ಸುಲಭವಾಗಿ ಒಬ್ಬಿಗೆ ಕೊಡುತ್ತಿರಲಿಲ್ಲ ಒಂದು ಸಲ ನನ್ನ ಚಿಕ್ಕಪ್ಪನ ಮಗ ಸಿಂಹಳ ದ್ವೀಪದಿಂದ ನಮ್ಮೂರಿಗೆ ಬಂದು, ಹಿಂದಿರುಗುವಾಗ ನಮ್ಮ ತಂದೆ ಯನ್ನು ಒಡಂಬಡಿಸಿ, ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋದ. ನಮ್ಮ ಹಾಲೆಂಡಿನಿಂದ ಸಿಂಹಳಕ್ಕೆ ಹೋಗಬೇಕಾದರೆ ಸಮುದ್ರದ ಮೇಲೆ ಹಡಗಿನಲ್ಲಿ ಹಾಯ್ದು ಹೋಗಬೇಕು. ಆ ಮಾರ್ಗದಲ್ಲಿ ಎಷ್ಟೋ ದ್ವೀಪಗಳು ಸಿಕ್ಕುತ್ತವೆ. ಅವುಗಳಲ್ಲಿ ಒಂದು ದ್ವೀಪದ ಹತ್ತಿರ ಬಂದಾಗ ನಡೆದ ಒಂದು ಅದ್ಭುತವನ್ನು ಹೇಳುತ್ತೇನೆ: ಆ ದ್ವೀಪದಲ್ಲಿ ಒಂದು ವಿಚಿತ್ರ! ಏನೆಂದರೆ ಬಿರುಗಾಳಿ ಜೋರಾಗಿ ಬೀಸಿದಾಗ, ನೆಲದಲ್ಲಿ ಬೇರು ಬಿಟ್ಟುಕೊಂಡಿದ್ದ ಮರ ಗಳಲ್ಲ ಬೇರುಗಳನ್ನು ಸಡಿಲಮಾಡಿಕೊಂಡು, ನೆಲದಿಂದ ಮೇಲ ಕೈದ್ದು, ಐದು ಮೈಲಗಳ ಎತ್ತರದಲ್ಲಿ, ಬಿರುಗಾಳಿ ಬೀಸುತ್ತಿರುವ ವರೆಗೂ ಹಾರಾಡುತ್ತಿರುವುವು. ಬಿರುಗಾಳಿ ನಿಂತ ಮೇಲೆ, ನೇರವಾಗಿ ಕೆಳಗಿಳಿದು ಬಂದು, ಮೊದಲಿನ ಹಾಗೆಯೇ ತಮ್ಮ ತಮ್ಮ ಹಳ್ಳಗಳಲ್ಲಿ ಬೇರು ಬಿಟ್ಟು ಬಲವಾಗಿ ನಿಂತುಕೊಳ್ಳುವುವು. ಹೀಗೆ ಆ ದ್ವೀಪದ ದೊಡ್ಡ ಮರಗಳು ಬಿರುಗಾಳಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಈ ಉಪಾಯ ಮಾಡಿಕೊಂಡಿದ್ದುವು. ೮ ಮಕ್ಕಳೆ ಮಂಛೌಸನ್‌ ನಾವು ಹೋದ ಸಮಯದಲ್ಲೂ ಹೀಗೇ ಒಂದು ಬಿರುಗಾಳಿ ಎದ್ದಿತು; ಮರಗಳೂ ಐದು ಮೈಲಿ ಮೇಲಕ್ಕೆ ಎದ್ದು, ಸಣ್ಣಿ ಹಕ್ಕಿಯ ಪುಕ್ಕಗಳ ಹಾಗೆ ಹಾರಾಡುತ್ತಿದ್ದುವು. ಬಿರುಗಾಳಿ ನಿಂತಾಗ ಅವುಗಳೆಲ್ಲಾ ಮೊದಲಿನ ಹಾಗೆಯೇ ನೆಲದಲ್ಲಿ ನಿಂತು ಕೊಳ್ಳಲು ಕೆಳಗಿಳಿದುವು. ಎಲ್ಲಾ ಮರಗಳೂ ತಮ್ಮ ತಮ್ಮ ಹಳ್ಳೆಗಳಲ್ಲಿ ನೆಟ್ಟುಕೊಂಡುವು. ಆದರೆ ಒಂದು ಮರ ಮಾತ್ರ ನೇರವಾಗಿ ನಿಲ್ಲಲಾರದೆ ಅಡ್ಡವಾಗಿ ದೊಪ್ಪನೆ ಬಿತ್ತು. ಅದು ಹಾಗೆ ಬಿದ್ದುದಕ್ಕೆ ಕಾರಣ ಇಷ್ಟೆ : ಆ ದ್ವೀಪದ ಒಬ್ಬ ರೃತನೂ ಅವನ ಹೆಂಡತಿಯೂ ತಮ್ಮ ಹಸುವಿಗೆ ಹುಲ್ಲು ಕುಯ್ದು ತರಬೇ ಕೆಂದು ಆ ಮರದ ಮೇಲೆ ಹತ್ತಿದ್ದರು. ಆ ದ್ವೀಪದಲ್ಲಿ ಹುಲ್ಲು ಮರಗಳ ತುದಿಯಲ್ಲೇ ಬೆಳೆಯುತ್ತಿತ್ತು. ಅದನ್ನು ಕುಯ್ದು ತರಬೇಕೆಂದು ಅವರು ಮರವನ್ನು ಹತ್ತಿದ ಸ್ವಲ್ಪ ವೇಳೆಯಲ್ಲಿಯೇ ಬಿರುಗಾಳಿ ಎದ್ದಿತು. ಅವರು ಕೆಳಗೆ ಇಳಿಯುವುದರೊಳಗಾಗಿ ಆ ಮರ ಇತರ ಮರಗಳ ಜೊತೆಗೆ ಮೇಲೆದ್ದು ಐದು ಮೈಲಿ ಎತ್ತರ ಹೋಗಿಬಿಟ್ಟಿತ್ತು. ಬಿರುಗಾಳಿ ನಿಂತು, ಮರಗಳು ಕೆಳ ಗಿಳಿದಾಗ, ಈ ಮರ ಮಾತ್ರ ಅವರಿಬ್ಬರ ಭಾರದಿಂದ ನೇರವಾಗಿ ಬೀಳದೆ ಹಖಿರೆಯಾಗಿ ಮಗುಚಿಕೊಂಡಿತು. ಆದರೆ ಆ ಮರ ಹಾಗೆ ಮಗುಚಿಕೊಂಡದ್ದರಿಂದ ಅವರಿಬ್ಬರಿಗೂ ಏನೂ ಗಾಯ ವಾಗಲಿಲ್ಲ. ಆ ದ್ವೀಪದ ಮುಖಂಡನಾದ ನಾಯಕ ಮಾತ್ರ ಆ ಮರದ ಅಡಿಯಲ್ಲಿ ಸಿಕ್ಕಿಕೊಂಡು ಅಪ್ಪಚ್ಚಿಯಾಗಿ ಹೋದ. ಅವನು ಸತ್ತು ಹೋದುದಕ್ಕೆ ಆ ದ್ವೀಪದವರು ಯಾರೂ ಏನೂ ಸಂಕಟ ಪಡಲಿಲ್ಲ. ಅವನು ಆ ಜನರನ್ನು ಬಹಳವಾಗಿ ಪೀಡಿಸುತ್ತಿದ್ದ ನಂತೆ. ಆದ್ದರಿಂದ ಆ ದ್ವೀಪದ ಜನ ಅವನು ಸತ್ತದ್ದಕ್ಕೆ ಸಂತೋಷಪಟ್ಟು, ಅವನು ಸಾಯುವ ಹಾಗೆ ಮರ ಬೀಳುವುದಕ್ಕೆ ಕಾರಣರಾದ ಆ ಸಿಂಹ ಮೊಸಳೆಗಳ ಸಂಹಾರ ¢ ರೈ ತನನ್ನೊ ಅವನ ಹೆಂಡತಿಯನ್ನೂ ತಮಗೆ ನಾಯಕರನ್ನಾಗಿ ಆರಿಸಿಕೊಂಡರು. ಇದಿಷ್ಟನ್ನೂ ನಾನು ಹಡಗಿನಲ್ಲಿ ಹೋಗುತ್ತಿರುವಾಗಲೇ ನೋಡಿದೆವು. ನಾವು ಅಲ್ಲಿ ನಿಲ್ಲಲಿಲ್ಲ; ನೇರವಾಗಿ ಸಿಂಹಳಕ್ಕೆ ಹೋದೆವು. ಅಲ್ಲಿಯೇ ನಾನು ಸಿಂಹವನ್ನೂ ಮೊಸಳೆಯನ್ನೂ ಒಬ್ಬಿಗೆ ಸಂಹಾರಮಾಡಿದ್ದು. ನಾವು ಸಿಂಹಳಕ್ಕೆ ಹೋಗಿ ಹತ್ತು ಹದಿನೈದು ದಿನಗಳಾಗಿರ ಬಹುದು; ನನ್ನ ಚಿಕ್ಕಪ್ಪನ ಮಗ " ಬೇಟೆಗೆ ಹೋಗೋಣ, ಬಾ” ನಿಂದು ಕರದ. ಇಬ್ಬರೂ ಬೇಟೆಗೆ ಹೊರಟೆವು. ಅವನಂತೂ ನನಗಿಂತ ಗಟ್ಟಿಮುಟ್ಟಾದ ಆಸಾಮಿ, ಸಿಂಹಳದ ಬೆಟ್ಟಕಾಡುಗಳ ಲ್ಲೆಲ್ಲ ಸುತ್ತಾಡಿ ಅಭ್ಯಾಸವಿತ್ತು. ಆದ್ದರಿಂದ ಅನನು ಮುಂದೆ ಮುಂದೆ ಹೋದ. ನಾನು ಹಿಂದೆ ನಿದಾನವಾಗಿ ಬರುತ್ತಿದ್ದೆ. ಹೋಗುತ್ತಿರುವಾಗ ಬಲಗಡೆ ಒಂದು ಆಳವಾದ ಕೊಳ ಸಿಕ್ಕಿತು. ಅದರ ನೀರನ್ನೇ ನೋಡುತ್ತಿರುವಾಗ ಹಿಂದುಗಡೆ ಏನೋ ಶಬ್ದವಾದ ಹಾಗಾಗಲು, ತಿರುಗಿ ನೋಡಿದರೆ, ಒಂದು ಮಹಾ ಭಯಂಕರವಾದ ಸಿಂಹಳದ ಸಿಂಹ ನನ್ನ ಹಿಂದುಗಡೆ ನಿಂತು ಗುರ್ರೆನ್ನುತ್ತಿತ್ತು. ನನಗಂತೂ ತುಂಬಾ ಭಯವಾಯಿತು. ಕೈಯಲ್ಲೇನೋ ಕತ್ತಿಯಿತ್ತು, ಬಂದೂಕವೂ ಇತ್ತು. ಆದರೆ ಸಿಂಹವನ್ನು ಕತ್ತಿಯಿಂದ ಎದುರಿಸಲು ನನಗೆ ಧೈರ್ಯ ಸಾಲದು. ಬಂದೂಕದಿಂದ ಹೊಡೆಯೋಣನೆಂದರೆ, ನನ್ನ ಹತ್ತಿರ ದೊಡ್ಡ ಗುಂಡು ಇರಲಿಲ್ಲ, ಹಕ್ಕಿಗಳನ್ನು ಹೊಡೆಯುವ ಸಣ್ಣ ಚರೆ ಇತ್ತು. ಓಡಿಹೋಗೋಣ ಎಂದು ಮುಂದೆ ನೋಡಿದರೆ, ಅದುವರೆಗೆ ಇಲ್ಲದಿದ್ದ ಒಂದು ದೊಡ್ಡ ಮೊಸಳೆ ಆ ಎಂದು ಬಾಯಿ ತೆರೆದು ಕೊಂಡು ನನ್ನನ್ನು ನುಂಗುವುದಕ್ಕೆ ಸಿದ್ಧವಾಗಿ ಬರುತ್ತಿತ್ತು. ಗಿಂ ಮಕ್ಕಳ ಮಂಛೌಸನ್‌ ಏನು ಮಾಡಲಿ? ಹಿಂದೆ ಸಿಂಹ! ಮುಂದೆ ಮೊಸಳೆ! ಬಲಗಡೆ ಆಳವಾದ ಕೊಳ! ಎಡಗಡೆ ನೋಡಿದರೆ, ಅಡಿಯೇ ಕಾಣದಷ್ಟು ಆಳವಾದ ಕಮರಿ! ಪ್ರಪಾತ! ಆಗ ಬೇರೆ ಏನು ಮಾಡುವುದಕ್ಕೂ ತೋಚದೆ, "ದೇವರೇ ಗತಿ!” ಎಂದುಕೊಂಡು, ದೊಪ್ಪನೆ ನೆಲದ ಮೇಲೆ ಮುಖ ಅಡಿಯಾಗಿ ಬಿದ್ದು ಕೊಂಡುಬಿಟ್ಟಿ. a ಜಾ ತ 2 ಛೆ y 4 4 + ಎಳ ತೆ ತ್‌ rN ಳು 9 ಕೋಕಾ ವಾಸ ಕ ವ 5 wt ಶಾ ಚಕಾ ಫಾ ಹಾ ಸ ಮ 4 Ce « ಕಣರ ಇಷಾ. ಸಮ ಯಾ ದಾಯ ಇ ೪... ಚ A KR PB ಬಾಲ್ಯ. ಲ ಕ್‌ ನಲು ಪಮದದ್ದು ಇ ಮತ್‌ ಎ pe ಜ್ರ ಸಿ ಯು _ ಹಾ ಷ್‌ Tvs 4 ಆ ಹ. & ೧ ಬಟರ - ಆಗ ಕತ್ತಿಯನ್ನು ಮೇಲೆತ್ತಿದೆ ಸಿಂಹ ಮೊಸಳೆಗಳ ಸಂಹಾರ ಗಿಗಿ ಅದೆಷ್ಟು ಹೊತ್ತು ಹಾಗೆ ಬಿದ್ದಿದ್ದೆನೋ ನನಗೆ ಜ್ಞಾಪಕ ವಿಲ್ಲ. ನನ್ನ ಹತ್ತಿರ ಎಲ್ಲಿಯೋ ಯಾವುದೋ ವಿಚಿತ್ರವಾದ ಶಬ್ದ, ಗಂಟಲಿನಲ್ಲಿ ಏನಾದರೂ ಸಿಕ್ಕಿಕೊಂಡಾಗ ನುಂಗುವುದಕ್ಕಾಗದೆ ಮಾಡುವ ಶಬ್ದ ಕೇಳಿಬಂದಿತು. ಆಗ ಎದ್ದು ನೋಡಿದರೆ, ಸಿಂಹದ ತಲೆ ಮೊಸಳೆಯ ಬಾಯಲ್ಲಿ ಬಲವಾಗಿ ಸಿಕ್ಕಿಕೊಂಡಿತ್ತು. ನನ್ನನ್ನು ನುಂಗಬೇಕೆಂದು ಎದುರಿಗೆ ಮೊಸಳೆ ಬಾಯಿ ತೆರೆದುಕೊಂಡು ಬರುತ್ತಿದ್ದಾಗ, ನನ್ನನ್ನು ತಿನ್ನಬೇಕೆಂದು ಎದುರು ದಿಕ್ಕಿನಿಂದ ಬರುತ್ತಿದ್ದ ಸಿಂಹ ನನ್ನಮೇಲೆ ಹಾರಿರಬೇಕು; ಅದೇ ಸಮಯದಲ್ಲಿ ನಾನು ದಪಕ್ಕನೆ ಕೆಳಗೆ ಮಲಗಿದುದರಿಂದ ಸಿಂಹ ತನ್ನ ಆಯ ತಪ್ಪಿ ನೆಗೆದು, ಅದರ ತಲೆ ಮೊಸಳೆಯ ಬಾಯೊಳಕ್ಕೆ ಸಿಕ್ಕಿರಬೇಕು. ಅಂತೂ ಸಿಂಹ ತನ್ನ ತಲೆಯನ್ನು ಬಿಡಿಸಿಕೊಳ್ಳಲಾರದೆ ಗೆಂಟಿಲ ಲ್ಲಿಯೇ ಗೊರ್ರೆನ್ನುತ್ತಿತ್ತು; ಮೊಸಳೆ ಅದರ ತಲೆಯನ್ನು ಬಿಡಲು ಒಲ್ಲದೆ ತಾನೂ ಗುರ್ರೆನ್ನುತ್ತಿತ್ತು. ಆಗ ನಾನು "ದೇವರೇ ನನ್ನನ್ನು ಕಾಪಾಡಿದ'ನೆಂದುಕೊಂಡು ಎದ್ದು, ಕೆಳಗೆ ಬಿದ್ದಿದ್ದ ಕತ್ತಿಯನ್ನು ಎತ್ತಿಕೊಂಡು ಒಂದೇ ಏಟಗೆ ಸಿಂಹದ ಕುತ್ತಿಗೆಯನ್ನು ಕತ್ತರಿಸಿಬಿಟ್ಟೆ. ಸಿಂಹ ಸತ್ತು, ಅದರ ದೇಹ ನನ್ನ ಕಾಲಿನ ಬಳಿ ಬಿತ್ತು. ಕತ್ತರಿಸಿ ಹೋದ ಸಿಂಹದ ತಲೆ ಯನ್ನು ಮೊಸಳೆ ಒಂದೇ ತುತ್ತಿಗೆ ನುಂಗಲು ಯತ್ತಿ ಸಿದಾಗ ಅದು ಗಂಟಲಲ್ಲಿ ಸಿಕ್ಕಿಕೊಂಡಿತು. " ಇದೇ ಸಮಯ? ಎಂದು ನಾನು ನನ್ನ ಬಂದೂಕದ ಹಿಂಭಾಗದಿಂದ ಹೊಡೆದು ಆ ತಲೆಯನ್ನು ಇನ್ನೂ ಒಳಕ್ಕೆ ತುರುಕಿದೆ. ಮೊಸಳೆ ಉಸಿರು ಕಟ್ಟಿಕೊಂಡು ಅಲ್ಲೇ ಸತ್ತುಹೋಯಿತು. ಹೀಗೆ ನನ್ನನ್ನು ನಾಶಮಾಡಬೇಕೆಂದು ಬಂದ ಎರಡು ದುಷ್ಟಜಂತುಗಳೂ ಒಂದು ಒಂದರ ಕೈಯಿಂದ ತಾನಾಗಿಯೇ ನಾಶವಾದುವು. ೧೨ ಮಕ್ಕಳ ಮಂಛೌಸನ್‌ ಆ ವೇಳೆಗೆ ನನ್ನ ಚಿಕ್ಕಪ್ಪನ ಮಗ ನನ್ನನ್ನು ಹುಡುಕಿಕೊಂಡು ಬಂದ. ಇಬ್ಬರೂ ಸೇರಿ ಆ ಸಿಂಹದ ಚರ್ಮವನ್ನು ಸುಲಿದೆವು. ಆ ವೇಳೆಗೆ ಊರಿನಿಂದ ನಮಗೋಸ್ಕರ ಗಾಡಿ ಬಂದಿತ್ತು. ಮೊಸಳೆ ಯನ್ನು ಅದರ ಮೇಲೆ ಮನೆಗೆ ಸಾಗಿಸಿಕೊಂಡು ಹೋಗಿ, ಅದರ ಒಳಗಿನ ರಕ್ತ ಮಾಂಸವನ್ನೆಲ್ಲಾ ತೆಗೆದು, ಹತ್ತಿಯನ್ನು ತುಂಬಿ, ನಿಜವಾದ ಮೊಸಳೆಯ ಹಾಗೆಯೇ ಮಾಡಿಟ್ಟ ವು. ಸಿಂಹದ ಚರ್ಮ ದಿಂದ ಎಂಟು ಹತ್ತು ಹೊಗೆಸೊಪ್ಪಿನ ಚೀಲಗಳನ್ನು ಮಾಡಿದೆವು. ಹಾಲೆಂಡಿಗೆ ಹಿಂದಿರುಗಿದಮೇಲೆ, ಅಲ್ಲಿನ ಸಾಹುಕಾರರು ಕೆಲವರು ಆ ಚೀಲಗಳನ್ನು ಸಾವಿರಾರು ಚಿನ್ನದ ನಾಣ್ಯ ಕೊಟ್ಟು ಕೊಂಡುಕೊಂಡರು. ವಸ್ತುಸಂಗ್ರಹಾಲಯದವರು ನನ್ನ ಹತ್ತಿ ತುಂಬಿದ ಮೊಸಳೆಯನ್ನು ತಾವು ಕೊಂಡುಕೊಂಡು ಅಲ್ಲಿ ಪ್ರದರ್ಶ ನಕ್ಕೆ ಇಟ್ಟಿದ್ದಾರೆ. ಯಾರಾದರೂ ಬಂದರೆ, ಅವರಿಗೆ ಅದರ ಕಥೆ ಹೇಳುತ್ತಾರೆ. ಕೆಲವು ಸಲ ಆ ಕಥೆಗೆ ಬಣ್ಣ ಕಟ್ಟುತ್ತಾರೆ ಮೂಲಕ್ಕೆ ಇಲ್ಲದ ರೆಕ್ಕೆಪುಕ್ಕಗಳನ್ನು ಜೋಡಿಸುತ್ತಾರೆ. ಉದಾ ಹರಣೆಗೆ "" ಸಿಂಹ ಮೊಸಳೆಯ ಬಾಯಿಗೆ ಹಾರಿ, ಬಾಲದ ಕಡೆ ಯಿಂದ ಓಡಿಹೋಗುತ್ತಿದ್ದಾಗ ನಮ್ಮ ಬ್ಯಾರನ್‌ ಒಂದೇ ಏಟಗೆ ಸಿಂಹದ ಕತ್ತು ಕತ್ತರಿಸಿದ ಹಾಗೆ ಕತ್ತರಿಸುವಾಗ ಮೊಸಳೆಯ ಬಾಲ ಕೂಡ ಇಷ್ಟು ಉದ್ದ ಕತ್ತರಿಸಿ ಹೋಯಿತು. ನಾವು ಹೊಸದಾಗಿ ತೇಪೆ ಹಾಕಿದ್ದೇನೆ” ಎನ್ನುತ್ತಾರೆ. ಇನ್ನೂ ಒಂದೊಂದು ಸಲ "“ ಮೊಸಳೆ ತನ್ನ ಬಾಲ ಕತ್ತರಿಸಿ ಹೋಯಿ ತಲ್ಲಾ ಎಂಬ ರೋಷದಿಂದ ನಮ್ಮ ಬ್ಯಾರನ್ನಿನ ಕೈಯಲ್ಲಿದ್ದ ಕತ್ತಿ ಯನ್ನು ಕಿತ್ತುಕೊಂಡು ನುಂಗಿಬಿಟ್ಟತು. ಆ ನುಂಗಿದ ಕತ್ತಿಯ ಮೊನೆ ಅದರ ಎದೆಗೆ ಚುಚ್ಚಿ ಕೊಂಡು ಅದು ಸತ್ತು ಹೋಯಿತು” ಎನ್ನುತ್ತಾರೆ. ಸಿಂಹ ಮೊಸಳೆಗಳ ಸಂಹಾರ ೧೩ ಕೆಲವು ಜನರಿಗಂತೂ ಸುಳ್ಳು ಹೇಳುವುದು ಎಂದರೆ ಲಶ್ಷ್ಯವೇ ಇಲ್ಲ. ನೀರು ಕುಡಿದಷ್ಟು ಸುಲಭ. ಆದರೂ ಕೇಳಿದ ಜನ ಅದನ್ನು ನಂಬುತ್ತಾರೆಯೇ ಹೊರತು ನಾನು ನಿಜ ಹೇಳಿದರೆ ಮಾತ್ರ "ಬಿಡುತಾನೆ ಬುರುಡೆ! ಎಂದು ನಗುತ್ತಾರೆ. ಏನು ಮಾಡುವುದು? ತೋಳ ಕುದುರೆಯಾದದ್ದು ಒಂದು ಸಲ ನಾನು ಇಟಲಿ ದೇಶದಿಂದ ರಷ್ಯಾದೇಶಕ್ಕೆ ಹೋಗಬೇಕಾಯಿತು. ಆಗ ಚಳಿಗಾಲ. ದಾರಿಯ ಉದ್ದಕ್ಕೂ ತುಂಬ ಹಿಮ, ಮಂಜು. ನಡೆಯುವುದು ಕಷ್ಟವೆಂದು ಕುದುರೆ ಯನ್ನು ಏರಿಹೋದೆ. ಚಳಿಗಾಲವಾದುದರಿಂದ ಮ್ಬೆ ಮುಚ್ಚುವಂತೆ ನಾಲ್ಕಾರು ಅಂಗಿಗಳನ್ನು ತೊಟ್ಟು ಒಂದು ದಪ್ಪವಾದ ಉಣ್ಣೆಯ ನಿಲುವಂಗಿಯನ್ನು ಹಾಕಿಕೊಂಡಿದ್ದೆ. ಪೋಲೆಂಡ್‌ ದೇತವನ್ನು ನಾನು ಸವಿಸಾಪಿಸುತ್ತಿರುವಾಗ ಬಟ್ಟೆಯೇ ಇಲ್ಲದೆ ಬೆತ್ತಲೆಯಾದ ಬಡನನೊಬ್ಬನು ಚಳಿಯಲ್ಲಿ ನಡುಗುತ್ತ ಬಿದ್ದುಕೊಂಡಿದ್ದ. ಅವನ ಅವಸ್ಥೆಯನ್ನು ಕಂಡು ನನಗೆ ತುಂಬ ಮರುಕವಾಯಿತು. ನನ್ನ ಉಣ್ಣೆಯ ನಿಲುನಂಗಿಯನ್ನೇ ತೆಗೆದು ಅವನ ಮೈಗೆ ಹೊದಿಸಿದೆ. ಆಗ ಆಕಾಶದಿಂದ ಯಾವುದೋ ಧ್ವನಿ " ನಿನ್ನ ಧರ್ಮವನ್ನು ದೇವರು ಮೆಚ್ಚಿದ್ದಾನೆ. ಇದರಿಂದ ನಿನಗೆ ಕಷ್ಟಕಾಲದಲ್ಲಿ ಅನುಕೂಲವಾಗುತ್ತದೆ'' ಎಂದು ನನ್ನನ್ನು ಆಶೀರ್ವದಿಸಿತು. ಹಾಗೆಯೇ ಮುಂದೆ ಹೋಗುತ್ತಿರುವಾಗ ರಾತ್ರೆಯಾಯಿತು, ಕತ್ತಲು ಕನಿದುಕೊಂಡಿತು. ಹತ್ತಿರ ಯಾವುದೂ ಹಳ್ಳಿ ಕಾಣಿಸ ಲಿಲ್ಲ. ಸುತ್ತ ಬರಿಯ ಮಂಜು ಕವಿದುಕೊಂಡು ದಾರಿಯೂ ಮುಚ್ಚಿ ಹೋಗಿತ್ತು. ನನಗೋ ಬಹಳ ಆಯಾಸವಾಗಿತ್ತು. ಕುದುರೆ ೧೪ ಮಕ್ಕಳ ಮಂಛೌಸನ್‌ ಯಿಂದ ಇಳಿದು, ಅದನ್ನು ಪಕ್ಕದಲ್ಲಿದ್ದ ಒಂದು ಕಲ್ಲಿನ ಗೂಟಕ್ಕೆ ಕಟ್ಟಿಹಾಕಿ, ನನ್ನ ಪಿಸ್ತೂಲುಗಳನ್ನು ಪಕ್ಕದಲ್ಲಿಟ್ಟುಕೊಂಡು, ಅಲ್ಲೇ ಕುದುರೆಯ ಮಗ್ಗುಲಲ್ಲಿ ಮಂಜಿನಮೇಲೆ ಮಲಗಿಕೊಂಡು ನಿದ್ರೆಮಾಡಿದೆ. ಬೆಳಗಾಗುವವರೆಗೆ ನನಗೆ ಎಚ್ಚರವೇ ಆಗಲಿಲ್ಲ. ಎಚ್ಚರವಾದಾಗ ಕಣ್ಣು ಬಿಟ್ಟು ನೋಡಿದರೆ ನಾನು ಯಾವುದೋ ಹಳ್ಳಿಯ ನಡುವೆ ಮಲಗಿದ್ದೇನೆ; ಸುತ್ತಲೂ ಸಮಾಧಿಯ ಕಲ್ಲು ಗಳಿವೆ; ಪಕ್ಕದಲ್ಲಿ ಒಂದು ಕ್ರೈಸ್ತ ದೇವಾಲಯವಿದೆ ; ನನ್ನ ಕುದುರೆ ಮಾತ್ರ ಎಲ್ಲೂ ಕಾಣಿಸಲಿಲ್ಲ. " ಇದೇನಿದು ಆಶ್ಚರ್ಯ! ಎಂದು ನಾನು ಕಣ್ಣು ಹೊಸಗಿಕೊಳ್ಳುತ್ತಿರುವಾಗಲೇ ಎಲ್ಲಿಯೋ ಮೇಲುಗಡೆಯಿಂದ ಕುದುರೆ ಕೆನೆದ ಶಬ್ದ ಕೇಳಿಬಂತು. ತಲೆ ಎತ್ತಿ ನೋಡಿದರೆ, ಪಕ್ಕದ ಕ್ರೈಸ್ತದೇವಾಲಯದ ಗೋಪುರದ ತುದಿಯಲ್ಲಿ ನನ್ನ ಕುದುರೆ ಕಟ್ಟಿಬಿದ್ದು ಒದ್ದಾಡುತ್ತಿದೆ! ಆಗ ನನಗೆ ಅರ್ಥವಾಯಿತು: ರಾತ್ರೆಯೆಲ್ಲ ಹಿಮಬಿದ್ದು ಆ ದೇವಸ್ಥಾನ ಗೋಪುರ ಸಮೇತ ಹಿಮದಲ್ಲಿ ಹೂತುಹೋಗಿತ್ತು; ನಾನು ತಿಳಿ ಯದೆ ಗೋಪುರವನ್ನೇ ಗೂಟನೆಂದುಕೊಂಡು ಕುದುರೆಯನ್ನು ಕಟ್ಟಿದ್ದೆ; ಹಗಲಾಗುತ್ತ ಹಿಮ ಕರಗಿಹೋಗಿ, ನಾನು ಕೆಳಗಿಳಿದು ನೆಲಕ್ಕೆ ಬಂದಿದ್ದೆ, ನನ್ನ ಕುದುರೆ ಮಾತ್ರ ಇನ್ನೂ ಹಾಗೇ ಮೇಲೆಯೇ ಇತ್ತು. "" ಅದೇನೋ ಸರಿಯೆ. ಆದರೆ ಕುದುರೆಯನ್ನು ಬಿಚ್ಚುವುದು ಹೇಗೆ?” ಎಂದುಕೊಂಡು, ನನ್ನ ಪಿಸ್ತೂಲಿನಿಂದ ಕುದುರೆಯನ್ನು ಕಟ್ಟಿದ ಹಗ್ಗಕ್ಕೆ ಹೊಡೆದು, ಕುದುರೆಯನ್ನು ಕೆಳಗಿಳಿಸಿ, ಮುಂದಕ್ಕೆ ಹೋದೆ. ಆದರೆ ಒಂದು ವಿಷಯ ಮಾತ್ರ, ನಾನು ಒಪ್ಪಿಕೊಳ್ಳಬೇಕು. ಈಗ ನೆನೆದುಕೊಂಡರೂ ನನಗೆ ನಾಚಿಕೆಯಾಗುತ್ತದೆ. ಅದೇನೆಂದರೆ, ರಾತ್ರೆಯೆಲ್ಲ ಕಟ್ಟಹಾಕಿದ್ದ ಕುದುರೆಗೆ ಬೆಳಗ್ಗೆ ಒಂದು ಹಿಡಿ ಹುರುಳಿ ತೋಳ ಕುದುರೆಯಾದದ್ದು ೧೫ ಕೂಡ ತಿನ್ನಿಸದೆ, ಮರೆತು, ಹಾಗೆಯೇ ಅದನ್ನು ಹತ್ತಿಕೊಂಡು ಹೋದೆ. ರಷ್ಯಕ್ಕೆ ಬಂದ ಮೇಲೆ ಮಾತ್ರ ನಾನು ಕುದುರೆಯೇರುವು ದನ್ನು ಬಿಟ್ಟು, ರಷ್ಯಾದಲ್ಲಿ ಪ್ರಚಾರದಲ್ಲಿರುವ "ಸ್ಲೆಡ್ಡ್‌' ಎಂಬ ಹಿಮದ ಗಾಡಿಯನ್ನು ಉಪಯೋಗಿಸತೊಡಗಿದೆ. ಒಂದು ಸಲ ಅಂಥ ಗಾಡಿಗೆ ಕುದುರೆಯನ್ನು ಕಟ್ಟಿಕೊಂಡು ಹಎಿಡಿಸುತ್ತಿದ್ದೇನೆ. ಸೆಯಿಂಟ್‌ ಪೀಟರ್ಸ್‌ಬರ್ಗ್‌ ನಗರದ ಹೊರಗಿನ ಕಾಡುಗಳಲ್ಲಿ ಬರುತ್ತಿರುವಾಗ ನಮ್ಮ ಗಾಡಿಯ ಜಂದೆ ಒಂದು ಭಯಂಕರವಾದ ತೋಳ ಬರುತ್ತಿದ್ದುದನ್ನು ಕಂಡೆ. ಹೀಗೆ ತೋಳಗಳು ಬಂದು ಮನುಷ್ಯರನ್ನೂ ಕುದುರೆಗಳನ್ನೂ ಕೊಂದು ತಿನ್ನುವುದು ಆ ದೇಶದಲ್ಲಿ ಬಹಳ ಸಾಮಾನ್ಯ. ನಾನೂ ಮರಣಭಯದಿಂದ ನನ್ನ ಕುದುರೆಯನ್ನು ಆದಷ್ಟೂ ವೇಗವಾಗಿ ಓಡಿಸಿದೆ. ಆದರೆ ತೋಳ ಹೆಚ್ಚು ಹೆಚ್ಚು ಹತ್ತಿರ ಬರುತ್ತಿದ್ದು ದನ್ನು ಕಂಡು, ನಾನು " ದೇವರು ಮಾಡಿದ ಹಾಗಾಗಲಿ' ಎಂದುಕೊಂಡು ಗಾಡಿಯಲ್ಲಿ ಹಾಗೇ ಬಗ್ಗಿ ಮಲಗಿಕೊಂಡೆ. ನಾನು ಎಣಸಿಕೊಂಡಿದ್ದ ಹಾಗೆಯೇ ತೋಳ ನನ್ನ ಮೇಲೆ ನೆಗೆದು ಕುದುರೆಯ ಬೆನ್ನ ಮೇಲೆ ಕಚ್ಚಿಕೊಂಡಿತು. ಕುದುರೆ ಜೀವಭಯದಿಂದ ಹುಚ್ಚುಹುಚ್ಚಾಗಿ ಓಡಿತು. ಹತ್ತು ಹೆಜ್ಜೆ ಓಡುವುದರೊಳಗಾಗಿ ತೋಳ ಕುದುರೆಯ ಹಿಂಭಾಗದ ಅರ್ಧವನ್ನೆಲ್ಲಾ ಗಬಗಬನೆ ನುಂಗಿ, ಮುಂಭಾಗಕ್ಕೆ ಮೂತಿ ಯಿಟ್ಟಿತ್ತು. ಅದೇ ಸಮಯದಲ್ಲಿ ನಾನು ಕೈಯಲ್ಲಿದ್ದ ಚಾವಟಿ ಯಿಂದ ತೋಳದ ಬೆನ್ನಿಗೆ ಒಂದು ಬಿಟ್ಟಿ. ತೋಳ ಬೆಚ್ಚಿ ಮುಂದೆ ನುಗ್ಗಿತು. ಹಾಗೆ ನುಗ್ಗಿದ ಜೋರಿಗೆ ಕುದುರೆಯ ಸತ್ತ ದೇಹ ಕಳಚಿಕೊಂಡು ಕೆಳಗೆ ಬಿದ್ದು, ಕುದುರೆಯ ಸ್ಥಾನದಲ್ಲಿ ತೋಳ ಕಟ್ಟುಗಳಿಗೆ ಸಿಕ್ಕಿಕೊಂಡಿತು. ನಾನು ಅದನ್ನು ಹಾಗೇ ೧೬ ಮೆಕ್ಕಳ ಮೆಂಛೌಸನ್‌ ಓಡಿಸಿಕೊಂಡು ಸೆಯಿಂಟ್‌ ಪೀಟರ್ಸ್‌ಬರ್ಗಿಗೂ ಬಂದೆ. ಕ್ರೂರ ಪ್ರಾಣಿಯಾದ ತೋಳ ಕುದುರೆಯ ಹಾಗೆ ಹಿಮದ ಗಾಡಿಯನ್ನು ಎಳೆದುಕೊಂಡು ಬಂದುದನ್ನು ನೋಡಿ ಆ ಊರಿನವರೆಲ್ಲ ತುಂಬ ಆಶ್ಚರ್ಯಪಟ್ಟರು. ಕಣ್ಣಿನಿ ೦ದ ಕಡಿ ಕಾರಿದ್ದು ನಾನು ರಷ್ಯದಲ್ಲಿದ್ದಾಗ ಒಬ್ಬ ದೊಡ್ಡಮಸುಷ್ಯರ ಬಂಗಲೆ ಯಲ್ಲಿದ್ದೆ. ಅಲ್ಲಿ ನನ್ನ ಕೊಠಡಿಯ ಹೊರಗಡೆ ಇದ್ದ ನಿಕಾಲ ವಾದ ಸರೋವರದಲ್ಲಿ ಕಾಡುಬಾತುಗಳು ಬೇಕಾದಹಾಗೆ ಇದ್ದುವು. ಒಂದುದಿನ ಬೆಳಗ್ಗೆ ಅಲ್ಲಿ ಎರಡು ಬಲಿತ ಬಾತುಗಳನ್ನು ಕಂಡೆ. ಅವುಗಳನ್ನು ಬೇಟಿಯಾಡಬೇಕೆಂದು ಬಂದೂಕವನ್ನು ಕೈಗೆತ್ತಿ ಕೊಂಡು ಅವಸರವಾಗಿ ಹೊರಟಾಗ, ಬಾಗಿಲವಾಡಕ್ಕೆ ನನ್ನ ಮೂಗು ತಗಲಿತು. ತಗಲಿದ ಜೋರಿಗೆ ಕಣ್ಣುಗಳಿಂದ ಕಡಿ ಸಿಡಿಯಿತು. ಅದರಲ್ಲಿ ಒಂದು ಕಿಡಿ ಪಕ್ಕದಲ್ಲಿದ್ದ ಮೇಜಿನಮೇಲೆ ಬಿದ್ದು, ಅದರ ಮರ ಅಂಗೈಯ ಅಗಲ ಸುಟ್ಟುಹೋಯಿತು. ನಾನು ಕೆಳಗೆ ಹೋಗುವ ವೇಳೆಗೆ ಕಾಡುಬಾತುಗಳು ಎದ್ದು ಹಾರುತ್ತಿದ್ದುವು. ಬಂದೂಕನ್ನು ಬೇಗ ಹೆಗಲಿಗೆ ಎತ್ತಿ ಗುರಿ ಯಿಟ್ಟಿ. ಆದರೆ ಬಾಗಿಲನಾಡಕ್ಕೆ ನಾನು ಢಿಕ್ಕಿ ಹೊಡೆದಾಗ, ನನ್ನ ಬಂದೂಕದ ಕುದುರೆ ಕಿತ್ತುಹೋಗಿತ್ತು. ಬರುವ ಅವಸರ ದಲ್ಲಿ ನಾನು ಮದ್ದನ್ನು ಸುಡುವುದಕ್ಕೆ ಬೇಕಾದ ಕೇಪನ್ನು ಮರೆತು ಬಂದಿದ್ದೆ. ಪುನಃ ಹಿಂದಿರುಗಿ ಹೋಗಿ ಬರುವುದಕ್ಕೆ ಸಮಯ ವಿರಲಿಲ್ಲ. ಬಂದೂಕದ ನಳಿಗೆಯಲ್ಲಿ ಮದ್ದು ಗುಂಡು ಹಾಕಿ, ಗುರಿಯಿಟ್ಟು, 'ಎಡಮುಷ್ಟಿಯಿಂದ ಮೂಗಿನ ಮೇಲೆ ಬಲವಾಗಿ ಒಂದು ಗುದ್ದು ಕೊಟ್ಟಿ. ಕಣ್ಣುಗಳಿಂದ ಕಿಡಿ ಹಾರಿತು. ಅದರಲ್ಲಿ ಕಣಿ ಠಿಂದ ಕಿಡಿ ಕಾರಿದು ೧೭ 2 ಎ ಒಂದು ಕಿಡಿ ಮದ್ದಿಗೆ ತಗುಲಿ, ಅದರಿಂದ ಗುಂಡು ಸಿಡಿದು, ಆಕಾಶ ದಲ್ಲಿ ಹಾರುತ್ತಿದ್ದ ಹದಿನ್ಸೆದು ಬಾತುಗಳನ್ನೂ ಇಪ್ಪತ್ತೈದು ಇತರ ಹಕ್ಕಿಗಳನ್ನೂ ಕೊಂದು ಕೆಳಕ್ಕೆ ಕೆಡನಿತು. ಅದೇ ರಷ್ಯದಲ್ಲಿ ಹೀಗೇ ಇನ್ನೊಂದು ಸಲ ಬಂದೂಕ ಹಿಡಿದು ಬೇಟೆಗಾಗಿ ಕಾಡಿಗೆ ಹೋದೆ. ಎದುರಿಗೆ ಒಂದು ಮರದ ಹತ್ತಿರ ಒಂದು ನರಿ ನಿಂತಿತ್ತು. ಅದರ ಚರ್ಮ ತುಂಬ ಸುಂದರ ವಾಗಿತ್ತು. ಬಂದೂಕದಿಂದ ಅದನ್ನು ಹೊಡೆದರೆ ಅನ್ಯಾಯವಾಗಿ ಚರ್ಮ ಕೆಟ್ಟು ಹೋಗುತ್ತದೆ ಎಂದುಕೊಂಡು, ಒಂದು ಉಪಾಯ ಮಾಡಿದೆ. ಕೈಯಲ್ಲಿದ್ದ ಬಂದೂಕಕ್ಕೆ ಮದ್ದು ತುಂಬಿ, ಅದರ ಮುಂದೆ ಒಂದು ಮೊಳೆಯನ್ನು ಇಟ್ಟು, ಬಂದೂಕ ಹಾರಿಸಿದೆ. ಮೊಳೆ ಹಾರಿ, ನರಿಯ ಬಾಲವನ್ನು ತಾಕ್ಕಿ ಅದನ್ನು ಮರಕ್ಕೆ ಜೋಡಿಸಿ ಹಿಡಿಯಿತು. ನರಿ ತಪ್ಪಿಸಿಕೊಳ್ಳಲಾಗದಂತೆ ಸಿಕ್ಕಿಬಿದ್ದು ದನ್ನು ಕಂಡು, ನಾನು ಹತ್ತಿರ ಹೋಗಿ, ಕೈಯಲ್ಲಿದ್ದ ಚಾವಟ ಯಿಂದ ನಾಲ್ಕು ಏಟು ಬಿಗಿದೆ. ನನ್ನ ಏಟುಗಳನ್ನು ತಡೆಯ ಲಾರದೆ ನರಿಯ ಜೀವ ಅದರ ದೇಹವ ನ್ನು ಬಿಟ್ಟು ಓಡಿ ಹೋಯಿತು. ನನಗಂತೂ ಬಹಳ ಒಳ್ಳಯ ನರಿಯ ಚರ್ಮ ದೊರಕಿತು. ಕೆಲವು ಸಲ ನಾವು ತಪ್ಪ್ಪಮಾಡಿದರೂ ನಮ್ಮ ಅದೃಷ್ಟ ನೆಮ ನ್ನು ಕೈಬಿಡದೆ ಕಾಪಾಡುತ್ತದೆ. ಜಾತಕ ಒಂದು ಸಲ ನಾನು ಕಾಡಿನೊಳಗೆ ಹೋಗುತ್ತಿರುವಾಗ ಎರಡು ಕಾಡು ಹಂದಿಗಳನ್ನು ಕಂಡೆ. ಹಿಂದುಗಡೆಯದು ಮುದಿ, ಮುಂದುಗಡೆ ಯದಕ್ಕೆ ಇನ್ನೂ ಚಿಕ್ಕ ಪ್ರಾಯ. ಮುದಿಹಂದಿ ಪ್ರಾಯದ ಹಂದಿಯ ಬಾಲವನ್ನು ಬಾಯಲ್ಲಿ ಕಚ್ಚಿಕೊಂಡು ಅದನ್ನು ಹಿಂಬಾಲಿಸುತ್ತಿತ್ತು, ನಾನು "ಈ ದಿನ ಎರಡು ಹಂದಿ ನನಗೆ ಇ ೧೮ ಮಕ್ಕಳ ಮಂಛೌಸನ್‌ ಸಿಕ್ಕಿತು' ಎಂದುಕೊಂಡು ಸಂತೋಷದಿಂದ ಬಂದೂಕವನ್ನು ಗುರಿ ಯಿಟ್ಟು ಹೊಡೆದೆ. ನನ್ನ ಗುರಿ ಏಕೋ ತಪ್ಪಿ ಹೋಗಿ, ಮುಂದಿನ ಹಂದಿಯ ಬಾಲವನ್ನು ಮಾತ್ರ ಕತ್ತರಿಸಿತು. ಮುಂದಿದ್ದ ಹಂದಿ ಹೆದರಿಕೊಂಡು ಓಡಿಹೋಯಿತು. ಹಿಂದಿದ್ದ ಹಂದಿ ಮಾತ್ರ, ಕತ್ತರಿಸಿದ ಬಾಲವನ್ನು ಹಾಗೇ ಕಚ್ಚಿಕೊಂಡು ಅಲ್ಲೇ ನಿಂತಿತ್ತು. ನಾನು ಹತ್ತಿರ ಹೋದಾಗಲೂ ಅದು ಚಲಿಸಲಿಲ್ಲ. ಇದೇನು ವಿಚಿತ್ರ ಎಂದು ನೋಡಿದರೆ ಆ ಮುದಿಹಂದಿಗೆ ಕಣ್ಣು ಕುರುಡು! ಆದ್ದರಿಂದಲೇ ದಾರಿ ಸರಿಯಾಗಿ ಕಾಣುವುದಿಲ್ಲವೆಂದು ಇನ್ನೊಂದು ಹಂದಿಯ ಬಾಲವನ್ನು ಕಚ್ಚಿಕೊಂಡು ಅದು ಹೋದ ಕಡೆ ಹೋಗು ತ್ತಿತ್ತು. ಈಗ ಆ ಬಾಲ ನಿಂತುಬಿಟ್ಟಿ ದ್ದರಿಂದ ತಾನೂ ನಿಂತು ಬಿಟ್ಟಿತ್ತು. ಸರಿ ನಾನೇನು ಮಾಡಲಿ? ಕತ್ತರಿಸಿ ಹೋದ ಆ ಬಾಲವನ್ನು ಕೈಯಲ್ಲಿ ಹಿಡಿದು ನಡೆದೆ. ಮುದಿಹಂದಿ ಮುಂದಿನ ಹಂದಿಯೇ ತನ್ನನ್ನು ನಡೆಯಿಸಿಕೊಂಡು ಹೋಗುತ್ತಿದೆ ಎಂದು ಕೊಂಡು ಸ್ವಲ್ಪವೂ ತೊಂದರೆ ಮಾಡದೆ ನಾಯಿಮರಿಯ ಹಾಗೆ ನನ್ನ ಹಿಂದೆಯೇ ಬಂತು. ಮನೆಗೆ ಬಂದಮೇಲೆ, ನಾವು ಅದನ್ನು ತಿಂದು ಮುಗಿಸಿಬಟ್ಟವು. ನಮಗೆ ಹಂದಿಯ ಮಾಂಸನೆಂದರೆ ನಿಮಗೆ ಹಲಸಿನಹಣ್ಣು ಇದ್ದ ಹಾಗೆ. ಕಾಡುಹಂದಿಗಳ ವಿಷಯ ಹೇಳುತ್ತಿರುವಾಗಲೇ ಇನ್ನೊ ೦ದು ಕತೆಯನ್ನೂ ಹೇಳಿಬಿಡುತ್ತೇನೆ. ಈ ಕಾಡುಹಂದಿಗಳು ವ ಭಯಂಕರವಾದ ಪ್ರಾಣಿಗಳು, ಕೆಂಡದಂಥ ಕೋಪ. ಅವು ಕಣ್ಣು ಮುಚ್ಚಿಕೊಂಡು ನುಗ್ಗಿ ಸೀಳಿಬಿಡುವುದಕ್ಕೆ ತಮ್ಮ ಕೋರೆ ದಾಡೆಗಳನ್ನು ಸದಾ ಸಿದ್ಧಪಡಿಸಿಕೊಂಡಿರುತ್ತವೆ. ಅಂಥ ಒಂದು ಕಾಡುಹಂದಿ ಒಂದು ಸಲ ನನಗೆ ಕಾಡಿನಲ್ಲಿ ಎದುರಾಯಿತು. ಆ ಸಲವೂ ನನ್ನ ಅದೃಷ್ಟಕ್ಕೆ ಸರಿಯಾಗಿ ನನ್ನ ಕೈಯಲ್ಲಿ ಬಂದೂಕ ಕಣಿ ನಿಂದ ಕಿಡಿ ಕಾರಿದು ೧೯ 2 ಎ ವಿರಲಿಲ್ಲ. ಹಂದಿ ನನ್ನನ್ನು ಕಂಡು, ನನ್ನ ಕಡೆಗೆ ನುಗ್ಗಿದೊಡ ನೆಯೀ ನಾನು ನನ್ನ ಹಿಂದೆ ಇದ್ದ ಒಂದು ದೊಡ್ಡ ಮರದ ಹಿಂದೆ ಅವಿತುಕೊಂಡೆ. ಹಂದಿ ಕಣ್ಣು ಮುಚ್ಚಿ ಕೊಂಡು ಬಂದ ರಭಸ ದಲ್ಲಿ ಆ ಮರಕ್ಕೆ ಢಿಕ್ಕಿ ಹೊಡೆಯಿತು. ಅದರ ಚೂಪಾದ ಕೋರೆ ಹಲ್ಲು ಮರದ ಈಕಡೆ ಹೊಕ್ಕು ಆಕಡೆ ಹೊರಗೆ ಬಂತು. ನಾನೂ ಥಟಕ್ಕನೆ ನೆಲದ ಮೇಲಿದ್ದ ಕಲ್ಲೊಂದನ್ನು ಎತ್ತಿಕೊಂಡು, ಅದರ ಹಲ್ಲಿನ ತುದಿಗೆ ಹೊಡೆದೂ ಹೊಡೆದೂ ಅದನ್ನು ಬಗ್ಗಿ ಸಿಬಿಟ್ಟೆ. ಹಂದಿ ತನ್ನ ಕೋರೆದಾಡೆಯಿಂದಲೇ ಮರಕ್ಕೆ ಸಿಕ್ಕಿಬಿತ್ತು. ಆ ಮೇಲೆ ನಾನು ನಿದಾನವಾಗಿ ಊರಿಗೆ ಹೋಗಿ, ಅಲ್ಲಿಂದ ಹಗ್ಗ ವನ್ನೂ ಗಾಡಿಯನ್ನೂ ತಂದು, ಆ ಹಂದಿಯನ್ನು ಸಾಗಿಸಿಕೊಂಡು ಹೋದೆ. ಚೆರಿಹಣ್ಣಿನ ಜಿಂಕೆ ಅನೇಕ ಸಲ ನನಗೆ ಅದೃಷ್ಟ ಅನುಕೂಲವಾಗಿದೆಯೆಂದು ಹಂದೆಯೇ ಹೇಳಿದ್ದೇನೆ. ಅದಕ್ಕೆ ಇನ್ನೊಂದು ಉದಾಹರಣೆ ಹೇಳುತ್ತೇನೆ, ಕೇಳಿ. ಒಂದು ಸಲ ಎಂದಿನ ಹಾಗೆಯೇ ಬೇಟೆಗೆ ಹೋಗಿ, ತೆಗೆದು ಕೊಂಡು ಹೋಗಿದ್ದ ಮದ್ದು ಗುಂಡುಗಳೆಲ್ಲಾ ಮುಗಿದು ಮನೆಗೆ ಬರುವಾಗ ಎದುರಿಗೆ ಹಿಂದು ಸೊಗಸಾದ ಜಿಂಕೆಯನ್ನು ನೋಡಿದೆ. ಏನು ಎತ್ತರ! ಎಷ್ಟು ದಪ್ಪ! ಕೊಂಬು ಎಷ್ಟು ವಿಕಾಲ! ಆದರ ಅನ್ಯಾಯ, ಏನು ಮಾಡುವುದು? ಮದ್ದಿಲ್ಲ, ಗುಂಡಿಲ್ಲ. ಆದರೂ ಬಿಡಲಿಲ್ಲ. ಮದ್ದಿನ ಚೀಲನನ್ನೆಲ್ಲಾ ಕೆರೆದು, ಇದ್ದಷ್ಟು ಪುಡಿ ಯನ್ನು ಬಂದೂಕಿಗೆ ತುಂಬಿದೆ. ಗುಂಡು ಇರದಿದ್ದರೂ ನನ್ನ ಜೇಬಿನಲ್ಲಿ ಚೆರಿಹಣ್ಣುಗಳು ತುಂಬಿದ್ದುವು. ನೀವು ನೇರಿಳೆಹಣ್ಣು ೨೦ ಮಕ್ಕಳ ಮಂಛೌಸನ ತಿನ್ನುವ ಹಾಗೆ ನಾವು ಈ " ಚೆರಿ? ಎಂಬ ಹಣ್ಣನ್ನು ತಿನ್ನುತ್ತೇವೆ. ಇದರ ಒಳಗೆ ನಿಮ್ಮ ನೆಲ್ಲಿಯಬೀಜದ ಹಾಗೆ ಗಟ್ಟಿಯಾದ ಬೀಜ ವಿದೆ. ಇಂಥ ಚೆರಿಹಣ್ಣೂಂದನ್ನು ಬೇಗ ಬಾಯಿಗೆ ಹಾಕಿಕೊಂಡು, ಗಬಗಬನೆ ಅದರ ತಿರುಳನ್ನು ತಿಂದು, ಅದರ ಬೀಜವನ್ನು ಗುಂಡಿಗೆ ಗ್‌ ~ ಸ ಚ) ಜ್‌ ಬ hy 1 Ja | ನ್‌್‌ ಸ Nu WW ET ಹ ನ?) Y x / ಟೀ ಕ Pr ಟೆ AY ಶ್ರ NAS Ih 8 ಆಯ ಟೀ f N | ಸ hy 4 SN AH K Wy 1 \ ಬ ಬಗ್ಗಿ ify / Ip) \ N Bf \ 6 ಜಾ y 0 ಲೆ ಕ್ಕಿ 3 NM po BN \ Ke f ERT A ಯ Lx ಚಿರಿಗಿಡದ ಜಿಂಕೆ ಚೆರಿಹಣ್ಣಿನ ಜಿಂಕೆ ೨೧ ಬದಲಾಗಿ ಬಂದೂಕಕ್ಕೆ ಹಾಕಿದೆ. ಸರಿಯಾಗಿ ಗುರಿಯಿಟ್ಟು, ಜಿಂಕೆಯ ಎರಡು ಕೊಂಬುಗಳ ನಡುವೆ, ನಡುನೆತ್ತಿಗೆ ತಾಕುವಂತೆ ಹೊಡೆದೆ. ಏಟೇನೋ ತಗುಲಿತು; ಆದರೆ ಜಿಂಕೆ ಮಾತ್ರ ನಿಲ್ಲದೆ ಓಡಿಹೋಯಿತು. ಜಿಂಕೆ ಸತ್ತು ಬೀಳುವುದೆಂದು ನಾನೂ ನಿರೀಕ್ಷಿ ಸಿರಲಿಲ್ಲವಾದ ಕಾರಣ ಅದನ್ನೇನೂ ಅಷ್ಟ್ರಾಗಿ ಮನಸ್ಸಿಗೆ ಹಚ್ಚಿ ಕೊಳ್ಳಲಿಲ್ಲ. ಒಂದೆರಡು ವರ್ಷ ಕಳೆದ ಮೇಲೆ ನಾನು ಪುನಃ ಅದೇ ಕಾಡಿಗೆ ಹೋಗಬೇಕಾಗಿ ಬಂತು. ಆಗ ನನ್ನ ಜೊತೆಯಲ್ಲಿದ್ದವರು ನನಗೆ ಒಂದು ವಿಚಿತ್ರವಾದ ಜಿಂಕೆಯನ್ನು ತೋರಿಸಿದರು. ಅದು ಉಳಿದ ಜಿಂಕೆಗಳ ಹಾಗೆಯೇ ಇದ್ದರೂ ಅದರ ಎರಡು ಕೊಂಬು ಗಳ ನಡುವೆ, ನಡುನೆತ್ತಿಯಲ್ಲಿ, ಒಂದು ಚೆರಿವೃಕ್ಷ ಬೆಳೆದಿತ್ತು; ಅದರ ತುಂಬ ಚೆರಿಹಣ್ಣುಗಳು ಗೊಂಚಲುಗೊಂಚಲಾಗಿದ್ದು ವು. ಆಗ, ಎರಡು ವರ್ಷದ ಕೆಳಗ ನಾನು ಚೆರಿಬೀಜದಿಂದ ಒಂದು ಜಿಂಕೆಯ ನೆತ್ತಿಗೆ ಹೊಡೆದುದು ನೆನಸಾಯಿತು. ಅದೇ ಜಿಂಕೆಯೇ ಇದು ಎಂದು ದೃಢವಾಯಿತು. "ಅದೃಷ್ಟವೆಂದರೆ ಹೀಗಿರಬೇಕು!’ ಎಂದುಕೊಂಡು, ಈ ಸಲ ಮದ್ದು ಗುಂಡು ತುಂಬಿ ಸಿದ್ಧವಾಗಿದ್ದ ಬಂದೂಕವನ್ನು ಗುರಿಹಿಡಿದು ಹೊಡೆದೆ ಈ ಸಲ ಜಿಂಕೆ ತಪ್ಪಿಸಿ ಕೊಳ್ಳಲಿಲ್ಲ. ಆ ದಿನ ರಾತ್ರೆ ಜಿಂಕೆಯ ಮಾಂಸವನ್ನೂ ಚೆರಿಹಣ್ಣು ಗಳನ್ನೂ ಯಥೇಚ್ಛವಾಗಿ ತಿಂದೆವು. ಅದೇಕೋ ಕಾಣೆ, ನನ್ನ ಹತ್ತಿರ ಮದ್ದು ಗುಂಡು ಮುಗಿದು ಹೋಗಿರುವಾಗಲೇ ಕಾಡುಮೃಗಗಳು ನನಗೆ ಎದುರಾಗುತ್ತವೆ. ಒಂದುಸಲ ಹೀಗೇ ಒಂದು ಕಾಡುಕರಡಿಯ ಕೈಗೆ ಸಿಕ್ಕಿ ಕೊಂಡಿದ್ದೆ. ಜೇಬಿನಲ್ಲಿದ್ದ ಎರಡು ಚಕಮುಕಿ ಕಲ್ಲಿನ ಚೂರು ಹೊರತು ನನ್ನ ಹತ್ತಿರ ಯಾವ ಆಯುಧವೂ ಇರಲಿಲ್ಲ. ಕರಡಿಯೋ, ಗುಹೆಯ ೨೨ ಮಕ್ಕಳ ಮಂಛೌಸನ್‌ ಹಾಗೆ ಬಾಯಿ ತೆರೆದುಕೊಂಡು ನನ್ನನ್ನು ಒಂದೇ ಬಾರಿಗೆ ನುಂಗಿ ಬಿಡುವಂತೆ ಬರುತ್ತಿತ್ತು. ಏನು ಮಾಡಲಿ? "ದೇವರೇ ಗತಿ! ಎಂದುಕೊಂಡು ಹಿಂದು ಚಕಮುಕಿ ಚೂರನ್ನು ಕರಡಿಯ ಬಾಯಿಗೆ ಗುರಿಯಿಟ್ಟು ಎಸೆದೆ. ಕರಡಿ ಅದನ್ನು ಗಬಕ್ಕನೆ ನುಂಗಿ ಇನ್ನೂ ಹತ್ತಿರ ಬಂತು. ಇನ್ನೊಂದು ಚಕಮುಕಿ ಚೂರನ್ನೂ ಎಸೆದೆ. ಕರಡಿ ಅದನ್ನೂ ಗಬಕ್ಕನೆ ನುಂಗಿತು. ಈ ಎರಡನೆಯ ಚಕಮುಕಿ ಚೂರು ಕರಡಿಯ ಹೊಟ್ಟೆಯಲ್ಲಿದ್ದ ಮೊದಲನೆಯ ಚೂರಿಗೆ ತಾಗಿ ದೊಡನೆಯೇ ದೊಡ್ಡದಾಗಿ ಬೆಂಕಿ ಹತ್ತಿಕೊಂಡಿತು. ಕರಡಿ ತನ್ನ ಹೊಟ್ಟಿಯುರಿಯಿಂದ ತಾನೇ ಸುಟ್ಟು ಬೂದಿಯಾಗಿ ಹೋಯಿತು. ಇನ್ನೊಂದು ಸಲ ಹೀಗೇ ನಾನು ಬರಿಗೈ ಯಲ್ಲಿ ಹೋಗು ತ್ತಿರುವಾಗ ಒಂದು ತೋಳ ಇದಕ್ಕಿದ್ದ ಹಾಗೆ ಮೇಲೆ ಎಗರಿತು. ನಾನೂ ಏನೂ ಯೋಚಿಸದೆ, ನನ್ನ ಪ್ರಾಣರಕ್ಷಣೆ ಮಾಡಿಕೊಳ್ಳ ಬೇಕೆಂದು ಬಲದೋಳನ್ನು ಮುಂದೆ ಚಾಚಿದಾಗ ತೋಳ ನನ್ನ ಇಡಿಯ ತೋಳನ್ನೇ ನುಂಗಿಬಿಟ್ಟತು. ಆದರ ಬಾಯಿ ನನ್ನ ಭುಜದ ಹತ್ತಿರ ಬಂದಿತ್ತು, ನನ್ನ ಕೈ ಅದರ ಬಾಲದ ಹತ್ತಿರಕ್ಕೆ ತಾಕಿತ್ತು. ತೋಳನ ಬಾಯಿಂದ ನನ್ನ ತೋಳನ್ನು ನಾನು ತೆಗೆ ಯುವಂತಿರಲಿಲ್ಲ. ತೆಗೆದರೆ ತೋಳ ನನ್ನನ್ನು ಸೀಳಿಬಿಡುವುದು ಖಂಡಿತ. ಆದ್ದರಿಂದ ಒಂದು ಉಪಾಯಮಾಡಿದೆ. ನಾವು ಅಂಗಿಯ ತೋಳುಗಳನ್ನು ಒದರಬೇಕಾದರೆ ಒಳಗೆ ಕೈಹಾಕಿ, ಒಳಭಾಗವನ್ನು ಹೊರಗಡೆಗೆ ಎಳೆಯುವ ಹಾಗೆ ತೋಳದ ಬಾಲವನ್ನು ಒಳಗಿ ನಿಂದಲೇ ಬಿಗಿಯಾಗಿ ಹಿಡಿದು ಅದರ ಬಾಯ ಮೂಲಕವಾಗಿ ಎಳೆದುಬಿಟ್ಟೆ. ತೋಳದ ಒಳಭಾಗವೆಲ್ಲಾ ಹೊರಗೆ ಬಂದುಬಿಟ್ಟಿತು. ಹೀಗೆ ತೋಳ ಸತ್ತಿತು, ನಾನು ಬದುಕಿಕೊಂಡೆ. ಚಿರಿಹಣ್ಣಿನ ಜಿಂಕೆ ೨೩. ಇನ್ನೊಂದು ಸಲ ಹೀಗೇ ಹಿಂದು ಹುಚ್ಚುನಾಯಿ ಊರ ಬೀದಿಯಲ್ಲಿ ಅಟ್ಟಿಸಿಕೊಂಡು ಬಂತು. ಎಲ್ಲರೂ ಓಡಿಹೋದರೂ ನಾನು ಮಾತ್ರ ಓಡಲಿಲ್ಲ. ಧೈರ್ಯವಾಗಿ ನಿಂತ್ಕು ಹುಚ್ಚುನಾಯಿ ಹತ್ತಿರ ಬಂದಾಗ, ನನ್ನ ಅಂಗಿಯನ್ನು ಅದರ ಮೇಲೆ ಎಸೆದು, ನಾನು ಮನೆಯ ಒಳಕ್ಕೆ ಹೋಗಿ, ಬಾಗಿಲು ಹಾಕಿಕೊಂಡೆ. ನಾಯಿ ನನ್ನ ಅಂಗಿಯನ್ನು ಚೆನ್ನಾಗಿ ಕಚ್ಚಿ, ಹೊರಟುಹೋಯಿತು. ಸೇವಕನನ್ನು ಕಳುಹಿಸಿ, ಆ ಅಂಗಿಯನ್ನು ತರಿಸಿಕೊಂಡು, ಇತರ ಅಂಗಿಗಳ ಜೊತೆಯಲ್ಲಿ ತೂಗುಹಾಕಿದೆ. ಇದ್ದಕ್ಕಿದ್ದ ಹಾಗೆ ಅರ್ಧ ರಾತ್ರೆಯಲ್ಲಿ ನನ್ನ ಸೇವಕ ಬಂದು, "" ಸಾಮಿ! ನಿಮ್ಮ ಅಂಗಿಗೆ ಹುಚ್ಚು ಹಿಡಿದಿದೆ! ಎಂದು ಕೂಗಿಕೊಂಡ. ಹೋಗಿ ನೋಡಿದರೆ, ಹುಚ್ಚುನಾಯಿ ಕಡಿದ ಆ ಅಂಗಿಗೆ ನಿಜವಾಗಿಯೂ ಹುಚ್ಚೇ ಹಿಡಿದುಬಿಟ್ಟತ್ತು. ಅದು ಇತರ ಅಂಗಿಗಳನ್ನೆಲ್ಲಾ ಕಚ್ಚಿ ಕಚ್ಚಿ ಹರಿದುಹಾಕುತ್ಮಿತ್ತು! ಏನು ಮಾಡಲಿ? " ಹುಚ್ಚರ ಸಹವಾಸ!” ಎಂದು ಸುಮ್ಮನೆ ಇದ್ದು ಬಿಟ್ಟೆ. ನನ್ನ ಬಳ್ಳಿಮನೆಯ ಕುದುರೆ ಒಂದು ಸಲ ಲಿಥ್ಲ್ರೇನಿಯಾ ದೇಶದಲ್ಲಿ ನಮ್ಮ ಸ್ನೇಹಿತರ ಮನೆಗೆ ಹೋಗಿದ್ದೆ. ಒಳಗೆ ಹೆಂಗಸರೂಡನೆ ಮೇಜಿನ ಸುತ್ತಲೂ ಟೀ ಕುಡಿಯುತ್ತ ಕುಳಿತುಕೊಂಡಿದ್ದೆ ವು. ಹೊರಗಡೆ ಅಂಗಳದಲ್ಲಿ ಗಂಡಸರು ಕೆಲವರು ಸದಾಗಿ ಬಂದಿದ್ದ ಒಂದು ಕುದುರೆ ಯನ್ನು ಪರಿಶೀಲಿಸುತ್ತಿದ್ದರು. ಇದ್ದಕ್ಕಿದ್ದ ಹಾಗೆಯೇ ಹೊರಗಡೆ ik ಅಯ್ಯೋ! ಅಮ್ಮಾ!” ಎಂಬ ಕೂಗು ಕೇಳಿ ಬಂತು. "ಏನಾ ಯಿತೋ ಏನೋ? ಎಂದು ನಾನು ಎದ್ದು ಹೊರಗೆ ಹೋದೆ. ಕುದುರೆ ಯಾರ ಕೈಗೂ ಸಿಕ್ಕದೆ ತುಂಬ ತಂಟೆಮಾಡುತ್ತಿತ್ತು. ೨೪ ಮಕ್ಕಳ ಮಂಭೌಸನ" ಮಹಾ ಮಹಾ ಸವಾರರೆಲ್ಲರೂ ಅದರ ಹತ್ತಿರ ಹೋಗಲು ಹೆದರಿ ಹಿಂಜರಿಯುತ್ತಿದ್ದರು. ನಾನೂ ಹತ್ತಿರ ಹೋಗಲೇ ಇಲ್ಲ. ದೂರ ದಿಂದಲೇ ನೆಗೆದು, ಹಾರಿ, ಕುದುರೆಯ ಬೆನ್ನಮೇಲೆ ಕುಳಿತು ಕೊಂಡೆ. ಕುದುರೆ ಕುರಿಮರಿಯ ಹಾಗೆ ಸಾಧುವಾಯಿತು. ಒಂದು ಸುತ್ತು ಅಂಗಳದ ಸುತ್ತ ತಿರುಗಿಸಿದೆ. ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಶ್ಚರ್ಯಪಟ್ಟರು. ಇನ್ನೂ ಕೆಲವು ಚಮತ್ಕಾರ ಗಳನ್ನು ತೋರಿಸಬೇಕೆಂದು ಕುದುರೆಯನ್ನು ಹಿಡಿಸಿ, ಹಜಾರದ ಕಿಟಕಿಯನ್ನು ದಾಟಿಸಿ, ಹೆಂಗಸರು ಟೀ ಕುಡಿಯುತ್ತಿದ್ದ ಅಂಗಳಕ್ಕೆ ಬಂದು, ಕುದುರೆಯನ್ನು ಮೇಜಿನಮೇಲೆ ನಡೆದಾಡಿಸಿದೆ. ಕುದುರೆ ಬಹಳ ಎಚ್ಚರಿಕೆಯಿಂದ ಹೆಜ್ಜೆ ಎತ್ತಿ ಇಡುತ್ತಾ, ಒಂದು :ಚೂರು ಪಾತ್ರೆಯನ್ನೂ ಒಡೆಯದ ಹಾಗ್ಕೆ ಮೇಜಿನ ಆ ಕಡೆಯಿಂದ ಈ ಕಡೆಗೂ ಈ ಕಡೆಯಿಂದ ಆ ಕಡೆಗೂ ಹತ್ತು ಸಲ ಹಿಡಿಯಾಡಿತು. ಮೊದಲ ಸಲ ಕುದುರೆಯನ್ನು ಕಂಡಾಗ ಹೆದರಿಕೆಯಿಂದ ಚೀರಿದ ಹೆಂಗಸರು ಕೂಡ ಅದರ ಮೈಯನ್ನು ಸವರಿ, "ಭಲೆ! ಭೇಷ್‌! ಎಂದರು, ಅನಂತರ, ಅಂತಹ ಕುದುರೆಯನ್ನು ಪಡೆಯುವುದಕ್ಕೆ ನಾನೇ ಪರಮ ಯೋಗ್ಯನೆಂದು ಅವರು ಅಭಿಪ್ರಾಯಪಟ್ಟು ಅದನ್ನು ನನಗೇ ಕೊಟ್ಟರು. ನಾನು ಟರ್ಕಿ ದೇಶದವರ ಮೇಲೆ ಯುದ್ಧಕ್ಕೆ ಹೋದಾಗ ಪ್ರ ಕುದುರೆಯನ್ನು ಏರಿಕೊಂಡೇ ಹೋದದ್ದು. ಈ: ಕುದುರೆ ಯಿಂದಲೇ ಹೋದ ಹೋದ ಕಡೆಯಲ್ಲೆಲ್ಲ ನನಗೆ ಜಯ ಲಭಿಸಿದ್ದು. ಒಂದುಸಲ ಈ ಕುದುರೆಯನ್ನು ಏರಿಕೊಂಡು ನಾನು ಶತ್ರುಗಳನ್ನು ಬೆನ್ನಟ್ಟಿದೆ. ಬಹುಬೇಗ ನನ್ನ ಜೊತೆಯವರೆಲ್ಲ ಹಿಂದೆ ಉಳಿದು ಹೋದರು. ನಾನೂ ಶತ್ರುಗಳನ್ನು ಅಟ್ಟ ಬರುವ ಭರದಲ್ಲಿ ಅವರ ಊರಿನವರೆಗೂ ಬಂದುಬಿಟ್ಟದ್ದ. ನಾನು ಕೋಟಿಯ ಮಹಾ ನನ್ನ ಬಳ್ಳಿಮನೆಯ ಕುದುರೆ ೨೫ ದ್ವಾರವನ್ನು ದಾಟುವ ವೇಳೆಗೆ ಅವರು ದಿಡ್ಡಿಯ ಬಾಗಿಲನ್ನು ಮೇಲಿನಿಂದ ಇಳಿಬಿಡುತ್ತಿದ್ದರೂ ನಾನು ವೇಗದಿಂದ ಊರೊಳಕ್ಕೇ ನುಗ್ಗಿದೆ. ಊರಿನ ಮಧ್ಯಕ್ಕೆ ಬಂದು ಸುತ್ತಲೂ ನೋಡಿದರೆ, ಸುದುರೆ ನೀರು ಕಂಡಿಯಿತು, ೨೬ ಮಕ್ಕಳ ಮಂಛೌಸನ್‌ ಶತ್ರುಗಳೂ ಯಾರೂ ಕಾಣಲಿಲ್ಲ, ಮಿತ್ರರೂ ಯಾರೂ ಕಾಣಲಿಲ್ಲ. ಅಷ್ಟು ದೂರದಿಂದ ಹಿಡಿಬಂದು ಆಯಾಸಗೊಂಡಿರುವ ಕುದುರೆಗೆ ಇಷ್ಟು ನೀರಾದರೂ ಕುಡಿಸೋಣನೆಂದು ಪಕ್ಕದಲ್ಲಿಯೇ ಇದ್ದ ನೀರಿನ ತೊಟ್ಟಿಯ ಹತ್ತಿರಕ್ಕೆ ನಿದಾನವಾಗಿ ಕರೆದುಕೊಂಡು ಹೋದೆ. ಕುದುರೆ ನೀರು ಕುಡಿಯಿತು, ಕುಡಿಯಿತು, ಕುಡಿಯಿತು. ಅದು ಅಷ್ಟು ನೀರು ಕುಡಿದುದನ್ನು ನಾನು ಅದುವರೆಗೆ ಕಂಡಿರ ಲಿಲ್ಲ. ಅಷ್ಟರಲ್ಲೆ "ಯಾರಾದರೂ ಬಂದರೋ ಏನೋ’ ಎಂದು ಹಿಂದಿರುಗಿ ನೋಡಿದೆ. ನೋಡಿದರೆ ಇದೇನು ಆಶ್ಚರ್ಯ! ನನ್ನ ಕುದುರೆಗೆ ಎರಡು ಹಿಂಗಾಲುಗಳೂ ಇಲ್ಲವೇ ಇಲ್ಲ! ಅಷ್ಟೇ ಅಲ್ಲ, ಕುದುರೆಯ ಹಿಂಭಾಗದ ಅರ್ಧ ಮೈಯೇ ಇಲ್ಲ! ಆದ್ದರಿಂದಲೇ ಕುದುರೆ ಬಾಯಿಂದ ಕುಡಿದ ನೀರೆಲ್ಲಾ ಹೊಟ್ಟೈಯಿಂದ ಹಾಗೇ ಸುರಿದು ಹೋಗುತ್ತಿದೆ! ಆಗ, "ಕುದುರೆಯ ಇನ್ನರ್ಧ ಮೈ ಬಿನಾಗಿರಬಹುದು?'? ಎಂದುಕೊಂಡು, ಅದನ್ನು ಹುಡುಕುತ್ತ ಬಂದ ದಾರಿಯಲ್ಲೇ ಹಿಂದಿರುಗಿ, ಕೋಟಿಯ ದಿಡ್ಡೀಬಾಗಿಲಿನವರೆಗೂ ಬಂದಿ. ಕೆಳಗೆ ಬಿದ್ದ ದಿಡ್ಡೀಬಾಗಿಲನ್ನು ಮೇಲಕ್ಕೆತ್ತಿ ನೋಡಿದೆ. ಕುದುರೆಯ ಹಿಂಭಾಗದ ಅರ್ಧಮೈ ಅಲ್ಲಿ ಆ ಬಾಗಿಲಿನ ಆಚೆ ಇನ್ನೂ ವಿಲ ವಿಲನೆ ಒದ್ದಾಡುತ್ತ ಬಿದ್ದಿತ್ತು. "ಓಹೋ! ನಾನು ಬರುವ ವೇಳೆಗೆ ಬಾಗಿಲು ಇಳಿಯಬಿಡುತ್ತಿದ್ದರೂ ನಾನು ಅವಸರದಲ್ಲಿ ಮುಂದೆ ಹೋದೆ. ಬಾಗಿಲು ಕುದುರೆಯ ಬೆನ್ನಮೇಲೆ ಬಿತ್ತು. ಆದ್ದರಿಂದ ಕತ್ತರಿಸಿದ ಹಿಂಭಾಗ ಅಲ್ಲಿಯೇ ಹೊರಗೆ ಬಿತ್ತು. ಕುದುರೆಯ ಉಳಿದರ್ಧ ಊರೊಳಕ್ಕೆ ಹಕೋಯಿತು' ಎಂದು ಆಗ ನನಗೆ ತಿಳಿಯಿತು. ಒಡನೆಯೆ ಆ ಒದ್ದಾಡುತ್ತಿದ್ದ ಅರ್ಥವನ್ನು ಎತ್ತಿ, ನಿಂತಿದ್ದ ಅರ್ಧಕ್ಕೆ ಜೋಡಿಸಿ, ಅಲ್ಲಿಯೇ ಕಂದಕದ ಪಕ್ಕದಲ್ಲಿದ್ದ ನನ್ನ ಬಳ್ಳಿ ಮನೆಯ ಕುದುರೆ ೨೭ ಕೆಲವು ಮೂಲಿಕೆಗಳನ್ನು ಇಟ್ಟು ಬಲವಾಗಿ ಕಟ್ಟಿದೆ. ಒಂದೆರಡು ವಾರಗಳಲ್ಲಿ ಎರಡು ಅರ್ಧಗಳೂ ಕೂಡಿಕೊಂಡವು. ಗಾಯ ವಾಸಿ ಯಾಯಿತು. ಅಷ್ಟೇ ಅಲ್ಲ. ಸಂಧಿಸಿದ ಕಡೆಯಲ್ಲಿ ಕಟ್ಟಿದ್ದ ಮೂಲಿಕೆ ಲ್‌ ತ್‌ ಕುದುರೆಯ ಬೆನ್ನಿನ ಮೇಲೆ ಬಳ್ಳಿಯ ಮನೆ ೨೮ ಮಕ್ಕಳ ಮಂಭೌಸನ್‌ ಗಳು ಅಲ್ಲೇ ಬೇರುಬಿಟ್ಟು ಬೆಳೆದು, ಕುದುರೆಯ ಬೆನ್ನ ಮೇಲೆಯೇ ಒಂದು ಬಳ್ಳಿಯ ಮನೆ ನಿರ್ಮಾಣವಾಗಿತ್ತು. ಆ ಕಾಲದಿಂದ ನಾನು ಕುದುರೆಯ ಮೇಲೆ ಹೋಗುವಾಗ ಬಿಸಿಲಿದ್ದರೆ, ಈ ಬಳ್ಳಿಯ ಮನೆ ನನಗೆ ತಂಪಾದ ನೆರಳು ಕೊಡುತ್ತದೆ. ನಾನು ಚಂದ್ರಲೋಕಕ್ಕೆ ಹೋಗಿದ್ದೆ ಟರ್ಕಿ ದೇಶದೊಡನೆ ನಮಗೆ ಯುದ್ಧ ನಡೆದಾಗ ನಾನು ಶತ್ರುಗಳನ್ನು ಅವರ ಪಟ್ಟಿಣದೊಳಕ್ಕೆ ಅಟ್ಟಿಸಿಕೊಂಡು ಹೋದುದೂ ಅಲ್ಲಿ ಕತ್ತರಿಸಿಹೋದ ನನ್ನ ಕುದುರೆಯನ್ನು ನಾನು ಪ್ರನಃ ಪಡೆದು ಕೊಂಡದ್ದೂ ನಿಮಗೆ ತಿಳಿದೇ ಇದೆ. ಆದರೆ ಅಲ್ಲಿಯೇ ನಾನು ಓಕ್ಕಿಜನರ ಕೈಗೆ ಸೆರೆಸಿಕ್ಕಿ ದೆನೆಂಬುದು ಬಹುಶಃ ನಿಮಗೆ ತಿಳಿದಿರ ಲಾರದು. ನಿಜ, ನಾನು ಸೆರೆ ಸಿಕ್ಕಿದೆ. ಟರ್ಕಿಯ ಸುಲ್ಮಾನನ ಅರಮನೆ ಯಲ್ಲಿ ನನ್ನನ್ನು ಗುಲಾಮನನ್ನಾಗಿ ನೇಮಿಸಿಕೊಂಡರು. ನನಗೆ ಅವರು ನೇಮಿಸಿದ ಕೆಲಸವಾದರೂ ವಿಚಿತ್ರವಾಗಿತ್ತು. ಅರಮನೆಯ ಖಾಸಾ ಜೇನುನೊಣಗಳ ಹಿಂಡನ್ನು ನಾನು ಪ್ರತಿದಿವಸವೂ ಅಟ್ಟಿ ಕೊಂಡು ಹೋಗಿ, ಅರಮನೆಯ ತೋಟಗಳಲ್ಲಿ ಅವುಗಳಿಗೆ ಹೂವು ಮೇಯಿಸಿಕೊಂಡು, ರಾತ್ರೆಯಾಗುವುದರೊಳಗಾಗಿ ಅವುಗಳನ್ನು ಅರಮನೆಗೆ ಕರೆದು ತರಬೇಕಾಗಿತ್ತು. ಹಿಂಡಿನಲ್ಲಿ ಒಂದು ಜೀನು ಹುಳು ಕಳೆದುಹೋಗಿದ್ದರೂ ನನ್ನ ತಲೆ ಹೋಗುತ್ತಿತ್ತು. ನಾನು ಇಂತಹ ಕಷ್ಟತರವಾದ ಕಾರ್ಯವನ್ನು ದಿನವೂ ಮಾಡಬೇಕಾಗಿತ್ತು. ಹೀಗೆಯೇ ನಡೆಯುತ್ತಿರುವಾಗ, ಒಂದು ಸಂಜೆ ಹಿಂಡನ್ನು ಮನೆಗೆ ಕರೆದುಕೊಂಡು ಹೋಗುವ ಮೊದಲು ಎಣಿಸಿ ನೋಡಿದರೆ, ಒಂದು ಜೇನುಹುಳು ಕಡಿಮೆಯಿತ್ತು. ಎಲ್ಲಿ ಹೋಯಿತೋ ಎಂದು ನಾನು ಚಂದ್ರಲೋಕಕ್ಕೆ ಹೋಗಿದ್ದೆ ೨೯ ಸುತ್ತಲೂ ನೋಡಿದರೆ, ಎರಡು ಭಾರಿ ಕರಡಿಗಳು ಅದನ್ನು ಅಟ್ಟಿಸಿ ಕೊಂಡು ಕಾಡುತ್ತಿದ್ದುವು. ಆ ಸಣ್ಣ ಜೇನುಹುಳು ಹೊತ್ತುಕೊಂಡು ಹಿಂದಿರುಗುತ್ತಿದ್ದ ಮಕರಂದವನ್ನು ಕದ್ದು ತಿಂದುಬಿಡಬೇಕೆಂದು ಆ ಕರಡಿಗಳು ತಂತ್ರಮಾಡಿಕೊಂಡಿದ್ದುವು. ಕರಡಿಗಳನ್ನು ಓಡಿ ಸೋಣವೆಂದರೆ ಕೈಯಲ್ಲಿ ಯಾವ ಆಯುಧವೂ ಇರಲಿಲ್ಲ. ಟರ್ಕಿ ದೇಶದ ರಾಜಗುಲಾಮನುರಿಗೆ ಚಿಹ್ನೆಯಾದ ಒಂದು ಬೆಳ್ಳಿಯ ಕೊಡಲಿ ಮಾತ್ರ ಕೈಯಲ್ಲಿತ್ತು. ಅದರಿಂದ ಏನೂ ಅಂಥ ಗಾಯವಾಗುವ ಹಾಗಿರಲಿಲ್ಲವಾದರೂ ಕರಡಿಗಳಿಗೆ ಹೆದರಿಕೆಯಾದರೂ ಆಗಿ ಜೇನು ಹುಳು ಬದುಕಿಕೊಳ್ಳ ಬಹುದೆಂಬ ಆಸೆಯಿಂದ ಆ ಕೊಡಲಿಯನ್ನೇ ಕರಡಿಗಳ ಕಡೆಗೆ ಎಸೆದೆ. ಎಸೆದಾಗ ಕ್ರೈ ಅದು ಹೇಗೋ ಸ್ವಲ್ಪ ತಿರುಗಿ, ಕೊಡಲಿ ಕರಡಿಗಳಿಗೆ ತಗಲುವ ಬದಲು ಮೇಲುಗಡೆಗೆ ಹಾರಿ, ಬೆಳ್ಳಿಗೆ ಬೆಳಗುತ್ತಿದ್ದ ಚಂದ್ರನಲ್ಲಿ ಹೋಗಿ ಸಿಕ್ಕಿ ಕೊಂಡಿತು. ನನ್ನ ಗುಲಾಮಚಿಹ್ನೆ ಯಾದ ಬೆಳ್ಳಿಯ ಕೊಡಲಿಯಿಲ್ಲದ ನಾನು ಅರಮನೆಗೆ ಹಿಂದಿರುಗುನಂತಿಲ್ಲ. ಏನು ಮಾಡಲಿ? ಆಗ ಥಟಕ್ಕನೆ ಜ್ಞಾಪಕ ಬಂತು. ಟರ್ಕಿದೇಶದ ಒಂದು ಜಾತಿಯ ಅವರೆ ನೆಲದಲ್ಲಿ ನೆಟ್ಟಿ ಗಳಿಗೆಯೆ ಬುಳುಬುಳನೆ ಬೆಳೆದು ಅಸಾಧ್ಯವಾದ ಎತ್ತರಕ್ಕೆ ಏರುತ್ತಿತ್ತು. ಅಂಥ ಅವರೆ ನನ್ನ ಜೇಬಿನಲ್ಲೂ ಎರಡು ಕಾಳಿತ್ತು. ನಾನು ಅದನ್ನು ಆಗಲೇ ನೆಟ್ಟು, ನೀರು ಬಿಟ್ಟೆ. ಅದು ಒಡನೆಯೇ ಮೊಳೆತು, ಚಿಗುರಿ, ಬಳ್ಳಿ ಬೆಳೆಯತೊಡಗಿ, ಮೇಲೆ ಮೇಲೆ ಇನ್ನೂ ಮೇಲೆ ಚಂದ್ರನವರೆಗೂ ಬೆಳೆದು, ಚಂದ್ರನ ಒಂದು ಕೊಂಬಿಗೆ ಸಿಕ್ಕಿಕೊಂಡಿತು. ನಾನೂ ತಡಮಾಡದೆ ಆ ಬಳ್ಳಿ ಯನ್ನು ಹತ್ತಿಕೊಂಡು ಹೋಗಿ, ಚಂದ್ರಲೋಕವನ್ನು ಸೇರಿ, ನನ್ನ ಕೊಡಲಿ ಯನ್ನು ಹುಡುಕಿದೆ. ೩೦ ಮಕ್ಕಳ ಮಂಛೌಸನ್‌ ಆದರೆ ಸುತ್ತಲೂ ಸರ್ವವೂ ಬೆಳ್ಳಿಯ ಹಾಗೆ ಬೆಳಗು ತ್ತಿದ್ದ ಆ ಚಂದ್ರಲೋಕದಲ್ಲಿ ಬೆಳ್ಳಿಯ ಕೊಡಲಿ ಬೇಗ ಕಣ್ಣಿಗೆ ಕಾಣಿಸೀತೆ? ಬಹಳ ಶ್ರಮಪಟ್ಟು ಹುಚುಕಿದ ಮೇಲೆ, ಎಲ್ಲೋ ಒಂದು ಕಡೆ, ಹಿಂದು ಹುಲ್ಲಿನ ಮೆದೆಯ ಮಧ್ಯೆ ಸಿಕ್ಕಿತು. ಸರಿ, ಅದನ್ನು ತೆಗೆದುಕೊಂಡು ಕೆಳಗಿಳಿದು ಬರೋಣವೆಂದು ಬಳ್ಳಿ ಯನ್ನು ಚಂದ್ರಲೋಕದಿಂದ ಇಳಿದೆ ನಾನು ಚಂದ್ರಲೋಕಕ್ಕೆ ಹೋಗಿದ್ದೆ ೩೧ ಹುಡುಕಿದರೆ, ಬಳ್ಳಿಯೇ ಇಲ್ಲ! ನಾನು ಕೊಡಲಿಯನ್ನು ಹುಡುಕು ತ್ರಿದ್ದಾಗ ಸೂರ್ಯ ಮೇಲೇರಿ ಬಂದು, ಅವನ ಬಿಸಿಲಿನ ಕಾಖವನ್ನು ತಡೆಯಲಾರದೆ ಆ ಬಳ್ಳಿ ಒಣಗಿ ಸೀದುಹೋಗಿತ್ತು. ಆದರೂ ನಾನೇನೂ ಧ್ರೈರ್ಯಗೆಡಲಿಲ್ಲ. ಪಕ್ಕ ದಲ್ಲಿಯೇ ಇದ್ದ ಮೆದೆಯಿಂದ ಒಂದಿಷ್ಟು ಹುಲ್ಲು ಕಿತ್ತುಕೊಂಡು, ಹೊಸೆದು, ಒಂದು ಮಾರುದ್ದ ಹಗ್ಗ ಮಾಡಿಕೊಂಡೆ. ಅದರ ಒಂದು ತುದಿಯನ್ನು ಚಂದ್ರನ ಕೊಂಬಿಗೆ ಕಟ್ಟಿ, ಅದರ ಮೂಲಕವಾಗಿ ಕೆಳಗಿಳಿದೆ. ಹಗ್ಗದ ಫೆಳಕೊನೆಯ ವರೆಗೂ ಬಂದಾಗ, ಚಂದ್ರನಿಗೂ ನನ್ನ ಕೈಗೂ ಮಧ್ಯೆ ವ್ಯರ್ಥವಾಗಿ ಇದ್ದ ಹಗ್ಗವನ್ನು ಕೊಡಲಿಯಿಂದ ಕತ್ತರಿಸಿ ನನ್ನ ಕೈಲಿದ್ದ ಹಗ್ಗದ ತುಂಡಿಗೆ ಗಂಟುಹಾಕಿ, ಪುನಃ ಕೆಳಗಿಳಿದೆ. ಹೀಗೇ ಮೇಲಿನ ಹಗ್ಗವನ್ನು ಕಡಿದು, ಕೆಳಗಿನ ಚೂರಿಗೆ ಗಂಟು ಹಾಕುವ ಕೆಲಸದಿಂದ ಹಗ್ಗದ ಉದ್ದ ಬರುಬರುತ್ತ ಕಡಿಮೆ ಯಾಯಿತು. ನಾನು ಭೂಮಿಯಿಂದ ಇನ್ನೂ ನಾಲ್ಕೈದು ಮೈಲಿ ಎತ್ತರದಲ್ಲಿರುವಾಗಲೇ ಹಗ್ಗವೆಲ್ಲಾ ಮುಗಿದು ಹೋಯಿತು. ಧೊಪ್ಪನೆ ದುಮುಕಿಬಿಟ್ಟೆ. ನಾನು ಅಷ್ಟು ಎತ್ತರದಿಂದ ದುಮುಕಿ ದಾಗ, ನನ್ನ ಭಾರವನ್ನು ತಡೆಯಲಾರದೆ ಭೂಮಿ ಅರ್ಧ ಮೈಲಿ ಹಳ್ಳವಾಗಿಹೋಯಿತು. ಹಳ್ಳದಿಂದ ಮೇಲೆ ಬರುವುದಾದರೂ ಸುಲಭವಾಗಿರಲಿಲ್ಲ. ಕೈಯ ಉಗುರುಗಳಿಂದಲೇ ಹಳ್ಳದ ಗೋಡೆ ಗಳನ್ನು ಕೆತ್ತಿ ಅಗೆದು, ಅದನ್ನೇ ಮೆಟ್ಟಲು ಮಾಡಿಕೊಂಡು ಮೇಲೆ ಹತ್ತಿ ಬಂದೆ. ತುತ್ತೂರಿಯ ಫುಟ್ಟ ಸ್ಪಲ್ಪ ಕಾಲದಲ್ಲಿಯೇ ನಮಗೂ ಟರ್ಕಿಯವರಿಗೂ ಸಂಧಿ ಯಾಯಿತು. ಆಗ ನನಗೆ ಸೆರೆಯಿಂದ ಬಿಡುಗಡೆಯಾಯಿತು, ೩೨ ಮಕ್ಕಳ ಮಂಛೌಸನ್‌ ನನಗೆ ಓರ್ಕಿಯವರೇ ಒದಗಿಸಿದ ಜೋಡುಕುದುರೆಯ ರಥದಲ್ಲಿ ನಾನು ಸೆಯಿಂಟ್‌ ಪೀಟರ್ಸ೯ಬರ್ಗಿಗೆ ಹೊರಟಿ. ಒಂದು ಕಡೆ ದಾರಿ ಬಹಳ ಕಿರಿದಾಗಿತ್ತು. ಎದುರಿಗೆ ಬೇರೆ ಯಾವುದಾದರೂ ರಥ ಬಂದರೆ, ಮುಂದೆ ಹೋಗುವುದಕ್ಕಾಗಲಿ ಹಿಂದೆ ತಿರುಗುವುದಕ್ಕಾಗಲಿ ಸಾಧ್ಯವಾಗುವುದಿಲ್ಲವೆಂದು " ತುತ್ತೂರಿ ಯನ್ನು ಆಗಾಗ್ಗೆ ಊದುತ್ತಿರು' ಎಂದು ನನ್ನ ಸಾರಥಿಗೆ ಹೇಳಿದೆ. ಅವನೂ ತನ್ನ ಶಕ್ತಿಯನ್ನೆಲ್ಲ ಬಿಟ್ಟು ಊದಿದ. ಏನೂ ಸದ್ದೇ ಆಗಲಿಲ್ಲ. ಏಕೋ ಏನೋ ಅರ್ಥವಾಗಲಿಲ್ಲ. ಹಾಗೇ ಮುಂದೆ ಹೋದೆವು. ಸ್ವಲ್ಪ ದೂರ ಹೋಗುವುದರೊಳಗಾಗಿ ನಾನು ಹೆದರಿ ಕೊಂಡಿದ್ದ ಹಾಗೆಯೇ ಎದುರುಗಡೆಯಿಂದ ಒಂದು ರಥ ಬಂತು. ಎರಡು ರಥಗಳ ಕುದುರೆಗಳೂ ಮೂತಿಗೆ ಮೂತಿ ತಾಗಿಸಿ ನಿಂತುವು. ಯಾವ ರಥವೂ ಮುಂದೆ ಹೋಗುವ ಹಾಗಿರಲಿಲ್ಲ, ಯಾವುದೂ ಹಿಂದೆ ತಿರುಗುವ ಹಾಗಿರಲಿಲ್ಲ. ಆದರೆ ಎಷ್ಟು ಹೊತ್ತು ಸುಮ್ಮನೆ ಕುಳಿತಿರುವುದು? ನಾನೇ ಎದ್ದು, ನನ್ನ, ರಥದ ಕುದುರೆಗಳನ್ನು ಬಿಚ್ಚಿದೆ. ಬರಿಯ ರಥವನ್ನು ಸಾರಥಿ ಸಮೇತವಾಗಿ ತಲೆಯ ಮೇಲಿಟ್ಟುಕೊಂಡು, ಒಂದೇ ಏಟಿಗೆ ಹಾರಿ, ಎದುರು ಗಾಡಿಯನ್ನು ದಾಟ್ಕ ಆಚೆ ಕಡೆ ರಥವನ್ನು ಕೆಳಗಿಳಿಸಿದೆ. ಪುನಃ ಇನ್ನೊಂದು ಬಾರಿ ಹಿಂದಕ್ಕೆ ಹಾರಿ, ನನ್ನ ಜೋಡುಕುದುರೆಗಳಲ್ಲಿ ಒಂದು ಕುದುರೆಯನ್ನು ಎಡಹೆಗಲ ಮೇಲೆ ಎತ್ತಿಕೊಂಡು, ಇನ್ನೊಂದನ್ನು ಬಲಕಂಕುಳಲ್ಲಿ ಅಮುಕಿಕೊಂಡು, ಪುನಃ ಹಾರಿ ಎದುರು ಗಾಡಿ ಯನ್ನು ದಾಟದೆ. ಬಲಕಂಕುಳಲ್ಲಿದ್ದ ಕುದುರೆ ಸ್ವಲ್ಪ ಬೆಚ್ಚಿ ಕಾಲು ರಭಾಡಿಸಿದುದರಿಂದ ನನ್ನ ಅಂಗಿಯ ಜೇಬು ಹರಿದುಹೋಯಿತು. ಇದು ಹೊರತು ಬೇರೆ ಯಾವ ಕಷ್ಟನಷ್ಟಗಳನ್ನೂ ಅನುಭವಿಸದೆ, ತುತ್ತೂರಿಯ ಘಟ್ಟ ೩೩ ನಾನು ಆ ಕುದುರೆಗಳನ್ನು ಪುನಃ ರಥಕ್ಕೆ ಹೂಡಿಕೊಂಡು ನಮ್ಮ ಊರಿನ ದಾರಿಯನ್ನು ಹಿಡಿದೆ. ದಾರಿಯಲ್ಲಿ ಒಂದು ಊಟದ ಮನೆ ಸಿಕ್ಕಿತು. ಅಲ್ಲಿ ಬಿಸಿ ಯಾಗಿ ಕುಡಿಯುವುದಕ್ಕೂ ಏನಾದರೂ ಸಿಕ್ಕುತ್ತಿತ್ತು. ದಾರಿಯ ಉದ್ದಕ್ಕೂ ಚಳಿ ಬಹಳವಾಗಿದ್ದು ದರಿಂದ ಬೆಚ್ಚಗೆ ಏನಾದರೂ ಕುಡಿಯೋಣವೆಂದು ಆ ಊಟದ ಮನೆಯ ಎದುರಿಗೆ ರಥವನ್ನು ನಿಲ್ಲಿಸಿ, ನಾವು ಒಳಗೆ ಹೋದವು. ಒಳಗೆ ದೊಡ್ಡದೊಂದು ಒಲೆ ಯಲ್ಲಿ ಬೆಂಕಿ ಉರಿಯುತ್ತಿತ್ತು. ಬೆಂಕಿಯ ಹತ್ತಿರ ಕ್ಸ ಕಾಯಿಸಿ ಕೊಳ್ಳುತ್ತ ಕುಳಿತೆವು. ಸಾರಥಿ ತನ್ನ ತುತ್ತೂರಿಯನ್ನು ಒಲೆಯ ಪಕ್ಕದ ಮೊಳೆಗೆ ತೂಗಿಹಾಕಿ, ತಾನು ಬೆಂಕಿಯ ಹತ್ತಿರ ಬಂದ. ಸುಮಾರು ಐದಾರು ನಿಮಿಷ ಆಗಿರಬಹುದು. ಇದ್ದಕ್ಕಿದ್ದ ಹಾಗೆ ತುತ್ತೂರಿಯ ಶಬ್ದ ಕೇಳಿಬಂತು. ತಲೆಯೆತ್ತಿ ನೋಡಿದರೆ, ನಮ್ಮ ಸಾರಥಿಯ ತುತ್ತೂ ರಿಯಿಂದಲೇ ಆ ಶಬ್ದ ಹೊರಡುತ್ತಿತ್ತು. ಸಾರಥಿ ಅದನ್ನು ಮುಟ್ಟಿ ದಿದ್ದರೂ ಅದು ಮೊಳೆಯ ಮೇಲಿಂದಲೇ ಹೇಗೆ ಶಬ್ದಮಾಡುತ್ತಿತ್ತು? ಹಾಗೇ ಕುಳಿತು ಸ್ವಲ್ಪ ಯೋಚನೆ ಮಾಡಿದ ಮೇಲೆ ತುತ್ತೂರಿಯ ಆ ವಿಚಿತ್ರವಾದ ವರ್ತನೆ ಅರ್ಥವಾಯಿತು. ಸಾರಥಿ ದಾರಿಯ ಉದ್ದಕ್ಕೂ ತುತ್ತೂರಿಯಲ್ಲಿ ಊದಿದ ರಾಗಗಳೆಲ್ಲ ಹೊರ ಗಿನ ಚಳಿಯಿಂದ ಫನಿಸಿ ಘಟ್ಟಿಯಾಗಿ ತುತ್ತೂರಿಯ ಒಳಗಡೆಯೆ ಸಿಕ್ಕಿಕೊಂಡಿದ್ದುವು. ಈಗ ಬೆಂಕಿಯ ಹತ್ತಿರ ಬಂದಾಗ, ಚಳಿ ಕಡಿಮೆಯಾಗಿ, ಫನಿಸಿ ಫಟ್ಟಿಯಾಗಿದ್ದ ರಾಗಗಳೆಲ್ಲ ಕರಗಿ ಸರಾಗ ವಾಗಿ ಹೊರಗೆ ಹರಿದು ಬರುತ್ತಿದ್ದುವು! ಆದ್ದರಿಂದಲೇ ಆ ತುತೂರಿ ಸಾರಥಿ ಹಿಂದೆ ಊದಿದ ರಾಗಗಳನ್ನೆಲ್ಲ ಈಗ ಪುನಃ ತಾನಾಗಿಯೇ ಊದುತ್ತಿತ್ತು! ಇದು ನನಗೆ ಬಹಳ ಆಶ್ಚರ್ಯವುಂಟುಮಾಡಿತು. ತ ೩೪ ಮಕ್ಕಳ ಮಂಛೌಸನ್‌ ನನ್ನ ಸಾರಥಿಯಂತೂ ಆಶ್ಚರ್ಯದಿಂದ ಮಾತೇ ಆಡಲಾರದೆ ಮೂಕ ನಾಗಿಹೋದ. ಮಹಾಮತ್ಸ್ಯದ ಹೊಟ್ಟಿ ಯಲ್ಲಿ ಒಂದು ಸಲ ಮೆಡಿಟಿರೇನಿಯನ್‌ ಸಮುದ್ರದಲ್ಲಿ ನಾನು ಸತ್ತೇ ಹೋಗಬೇಕಾಗಿತ್ತು. ಆದರೂ ಹೇಗೆ ಬದುಕಿದೆ ಎಂಬುದು ನಿಚಿತ್ರವಾಗಿದೆ. ಹೇಳುತ್ತೇನೆ, ಕೇಳಿ. ನಾನು ಮಾರ್ಸೆಲೆ ನಗರದ ಸಮುದ್ರತೀರದಲ್ಲಿ ಒಂದು ಸಲ ಸ್ನಾನಮಾಡುತ್ತಿದ್ದೆ. ಬಿಸಿಲಿನ ಬೇಗೆಯನ್ನು ಪರಿಹಾರಮಾಡಿ ಕೊಳ್ಳೋಣವೆಂದು ಬಟ್ಟೆಗಳನ್ನೆಲ್ಲ ಬಿಚ್ಚಿ, ದಡದಲ್ಲಿ ಮಡಿಸಿಟು, ಸಮುದ್ರದಲ್ಲಿ ಈಜಾಡುತ್ತಿದ್ದೆ. ಆಗ ಎದುರಿಗೆ ಒಂದು ಮಹಾ ಮತ್ತ, ದೊಡ್ಡದಾಗಿ ಬಾಯಿ ತೆರೆದುಕೊಂಡು ಅತಿವೇಗದಿಂದ ನನ್ನ ಕಡೆಗೆ ನುಗ್ಗಿ ಬರುತ್ತಿತ್ತು. ಅದಕ್ಕೆ ಸಿಕ್ಕದ ಹಾಗೆ ತನ್ಪಿಸಿ ಕೊಂಡು ಓಡುವುದು ಸಾಧ್ಯವೇ ಇರಲಿಲ್ಲ. "ಇರಲಿ, ದೇವರಿದ್ದಾನೆ' ಎಂದುಕೊಂಡು, ಕೈಗಳನ್ನು ದೇಹದ ಪಕ್ಕಕ್ಕೆ ಜೋಡಿಸಿ, ಕಾಲು ಗಳನ್ನು ಉದ್ದವಾಗಿ ನೀಡಿಕೊಂಡು ಸುಮ್ಮನೆ ಮಲಗಿಬಿಟ್ಟೆ. ಆ ಮಹಾಮತ್ಸ್ಯ ಆಯೆಂದು ಬಾಯಿ ತೆರೆದುಕೊಂಡು ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲಾ ನುಂಗುತ್ತ ಬಂದು ನನ್ನನ್ನೂ ನುಂಗಿಬಿಟ್ಟಿ ತು. ನಾನೂ ಅದರ ಹಲ್ಲುಗಳಿಗೆ ಸಿಕ್ಕದ ಹಾಗೆ ನುಣಿಚಿಕೊಂಡು ಅದರ ಹೊಟ್ಟೆಯೊಳಕ್ಕೆ ಹೋದೆ. ಅಲ್ಲಿಯೋ ತುಂಬ ಕತ್ತಲೆ, ಬಹಳ ಸೆಕೆ. ನನಗೆ ಒಳಗಿರು ವುದು ಸಾಧ್ಯವಾಗಲಿಲ್ಲ. ಏನಾದರೂ ಮಾಡಿ ಆ ಗುಹೆಯಿಂದ ತಪ್ಪಿಸಿಕೊಳ್ಳಬೇಕೆಂದು ಯೋಚಿಸಿ, ಆ ಮೀನಿಗೆ ಚಿತ್ರಹಿಂಸೆಮಾಡಿ, ಅದು ನನ್ನನ್ನು ಹೊರಕ್ಕೆ ಉಗುಳುವ ಹಾಗೆ ಮಾಡನೇಕೆಂದು 3 ಮಹಾಮತ್ಸ್ಯ ದ ಹೊಟಿ ಯಲ್ಲಿ ೩೫ ನಿಶ್ಚ ಯಿಸಿದೆ. ಒಳಗೆ ಸ್ಥ ಳ ಬೇಕಾದ ಹಾಗೆ ವಿಶಾಲವಾಗಿದ್ದು ದ: ರಿಂದ ನಾನು ಅದರ ಹೊಟ್ಟಿ ಯ ಒಳಗೆ ತುಳಿದೆ, ಕುಣಿದೆ, ನೆಗೆದ ತಪತಪ ತಪತಪ ಎಂದು bl ಗುದ್ದಿ ದೈ ಲಾಗ ಹಾಕಿದೆ. ನನ್ನ ಕಾಟಿಗಳನ್ನು ಸಹಿಸುವುದು ಮೀನಿಗೂ ಸುಲಭವಾಗಿ ರಲಿಲ್ಲ. ಆವಕ ನನ್ನನ್ನು ಉಗುಳಲು ಅದಕ್ಕೆ ಮನಸ್ಸು ಬರಲಿಲ್ಲ. ನನ್ನನ್ನು ಕೆಳಗೆ ಬೀಳಿಸಬೇಕೆಂದು ಅದು ನೀರಿನಲ್ಲಿ ಮಲಗಿರುವ ಬದಲು ನೇರವಾಗಿ ಎದ್ದು ನಿಂತುಕೊಂಡಿತು. ಹಾಗೆ ನಿಂತು ಕೊಂಡಾಗ ನೋವಿನಿಂದ ಅದರ ಅರ್ಧ ಮೈ ನೀರಿನ ಮೇಲೆ ಚಾಚಿ ಕೊಂಡಿತು. ದಾರಿಯಲ್ಲಿ ಹೋಗುತ್ತಿದ್ದ ಯಾವುದೋ ಹಡಗಿನ ವರು ಅದನ್ನು ಕಂಡು, ಈಟಯಿಂದ ಹೊಡೆದರು. ಮೀನು ಸತ್ತು ಹೋಗಿ, ನೀರಿನಲ್ಲಿ ಅಲ್ಲಾಡದೆ ಬಿದ್ದು ಕೊಂಡಿತು. " ಸತ್ತ ಮೀನಿನ ದೇಹದಿಂದ ನಾನು ಹೊರಗೆ ಬರುವುದು ಹೇಗೆ?” ಎಂದು ಯೋಚಿಸುತ್ತಿರುವಾಗಲೇ ಆ ಮೀನನ್ನು ಕೊಂದ ವರು ಅದನ್ನು ತಮ್ಮ ಹಡಗಿನ ಮೇಲೆ ಎಳೆದುಕೊಂಡರು. ಮೀನನ್ನು ಅವರೇ ಕತ್ತರಿಸುತ್ತಾರೆಂದು ನನಗೆ ಧೈರ್ಯವಾದರೂ ಚಚ ಕಡೆ ಕತ್ತರಿಸದೆ, ಎಲ್ಲಿ ಮಧ್ಯ ಕತ್ತರಿಸಿ ನನಗೆ ಗಾಯ ಮಾಡುವರೋ ಎಂದು ತುಂಬ ಹೆದರಿಕೆಯಾಗಿತ್ತು. ಆದ್ದರಿಂದ ನಾನು ನನ್ನ ಮೈಯನ್ನು ಆದಷ್ಟು ಸಂಕೋಚಮಾಡಿಕೊಂಡು ಮೀನಿನ ಮೈಯಿಂದ ದೂರವಾಗಿ ಹೊಟ್ಟೆಯ ಮಧ್ಯದಲ್ಲಿ ಬಂದು ನಿಂತೆ. ಕೊಂಚ ಹೊತ್ತಾದಮೇಲೆ ಸ್ಪಲ್ಪಸ್ಪಲ್ಪವಾಗಿ ಕತ್ತಲೆ ಕಡಿಮೆ ಯಾಗಿ ಬೆಳಕಿನ ಕಿರಣ ನುಸುಳಿ ಬಂತು. ಬರುಬರುತ್ತ ಕಂಡಿ ದೊಡ್ಡದಾದಾಗ ನಾನೂ ಬಹಳ ಎಚ್ಚರಿಕೆಯಿಂದ ಹೊರಗೆ ತಲೆ ಹಾಕಿದೆ, ಹಡಗಿನವರೆಲ್ಲ ನನ್ನನ್ನು ಭೂತವೆಂದೋ ಪಿಠಾಚಿ ೩೬ ಮಕ್ಕಳ ಮಂಛೌಸನ್‌ ಯೆಂದೋ ಮೊದಲು ತಿಳಿದುಕೊಂಡರು. ಆಮೇಲೆ ನಾನೂ ತಮ್ಮ ಹಾಗೆಯೇ ಮಾತನಾಡುವುದನ್ನು ಕೇಳಿ, ನನ್ನನ್ನು ಹೊರಕ್ಕೆ ಕರೆದುಕೊಂಡರು. ಮೀನು ನನ್ನನ್ನು ಹೇಗೆ ನುಂಗಿತು ಎಂಬ ಕತೆಯನ್ನೆಲ್ಲಾ ನಾನು ಅವರಿಗೆ ತಿಳಿಸಿದೆ. ಅವರು ಅದನ್ನು ಕೇಳಿ ತುಂಬ ಆಶ್ಚರ್ಯಪಟ್ಟರು. ಅಲ್ಲಿಯೇ ಹಡಗಿನಲ್ಲಿ ಅವರು ಕೊಟ್ಟಿ ತಿಂಡಿತೀರ್ಥಗಳನ್ನು ತೆಗೆದುಕೊಂಡು, ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸಿ ನಾನು ಪುನಃ ಸಮುದ್ರಕ್ಕೆ ನೆಗೆದೆ. ಮೀನಿನ ಹೊಟ್ಟೆಯಲ್ಲಿದ್ದು ಮೈಯೆಲ್ಲ ಹೊಲಸಾಗಿತ್ತು. ಸಮುದ್ರದ ನೀರಿನಲ್ಲಿ ಮೈ ತೊಳೆದುಕೊಂಡ್ಕು ದಡದ ಕಡೆಗೆ ಈಜಿಕೊಂಡು ಹೋಗಿ, ನಾನು ಮಡಿಸಿ ಇಟ್ಟಿದ್ದ ಬಟ್ಟೆಗಳನ್ನು ಹಾಕಿಕೊಂಡೆ. ಆ ದಿವಸದಿಂದ ಎಲ್ಲಿ ಸಮುದ್ರಸ್ನಾನಕ್ಕೆ ಹೋಗಬೇಕಾದರೂ ನನ್ನ ಕೈಯಲ್ಲಿ ಒಂದು ಜಾಕು ಇದ್ದೇ ಇರುತ್ತದೆ. ಸಮುದ್ರದ ಕುಡುರೆ ನನ್ನ ಹತ್ತಿರ ಕತ್ತಿ, ಚಾಕು, ಬಂದೂಕ ಮುಂತಾದ ಆಯುಧ ಗಳಲ್ಲದೆ ಒಂದು ಕವಣೆಯೂ ಇದೆ. ಇದು ನನ್ನ ವಶಕ್ಕೆ ಬರುವ ಮೊದಲು ನನ್ನ ತಂದೆ ಇದನ್ನು ಉಪಯೋಗಿಸುತ್ತಿದ್ದರು. ಅವ ರಿಗೂ ಈ ಕವಣೆಗೂ ಸಂಬಂಧಿಸಿದ ಒಂದು ಸಂಗತಿಯನ್ನು ಹೇಳುತ್ತೇನೆ, ಕೇಳಿ. ಒಂದು ದಿನ ನಮ್ಮ ತಂದೆ ಹಾರ್ವಿಜ್‌ ನಗರದ ಸಮೀಪ ದಲ್ಲಿರುವ ಸಮುದ್ರತೀರದಲ್ಲಿ ಸಂಜೆ ತಿರುಗಾಡುತ್ತಿದ್ದರು. ಅವರು ಸುಮಾರು ಒಂದು ಮೈಲು ನಡೆದಿರಬಹುದೆಂದು ತೋರ ತ್ತದೆ; ಆಗ ಒಂದು ಭಯಂಕರವಾದ ಸಮುದ್ರದ ಕುದುರೆ ನೀರಿ ಸಮುದ್ರದ ಕುದುರೆ ೩೭ ನಿಂದ ಮೇಲೆದ್ದು, ನೆಲದ ಕಡೆಗೆ ತಿರುಗಿ, ನಮ್ಮ ತಂದೆಯ ಮೇಲೆ ರೋಷದಿಂದ ನುಗ್ಗಿ ಬಂತು. ನಮ್ಮ ತಂದೆ ಒಂದು ಕ್ಷಣ ಬೆದರಿದರು. ಆದರೆ ಒಡನೆಯೇ, ಜೇಬಿನಲ್ಲಿ ಕವಣೆ ಇದ್ದುದನ್ನು ಜ್ಞಾಪಿಸಿ ಕೊಂಡು, ಕಾಲುಗಳ ಹತ್ತಿರ ಬಿದ್ದಿದ್ದ ಒಂದೆರಡು ಕಲ್ಲುಗಳನ್ನು ಎತ್ತಿಕೊಂಡು, ಬೇಗ ಬೇಗ ಆ ಪ್ರಾಣಿಗೆ ಬೀರಿದರು. ಸಸ ಹ್‌ ಇ ಯ. ದ್‌ Pond 4 ಡೆ ರರ ಹಾರು ಇ p. ಜು 5 ಇನ್ನು? ಕ \\ % 4 Y Ww \ « ಸ್ಕಿ ೩ ಸ 1%. ಇನ್ನ N ೨ a -, ಬು x ಸ 3): 8 1 MM 10. ರ್‌! SAN 7೧ರ ee" 1 ನ NT ಸೈ ಹ್‌ WY 7 Ne / 39 Ky ದ್‌ ತೆ ಗ್‌ | 9 ಜ್‌ 1 5 nde ಸ CaF KS ಮದ ಇ ಗ ಹ - ಡಂ ಬ್ರ. 444 ಪ್ರತಿ ಕ ೫) Wi 4 ತಾಸ, 35) } Ja ಒ್ಟ್ಮ್ಟ ವವ ದ ಹಾಹಾ K ಲೌ ಕಡೆ ಇರು ಕ Be ಸಮುದ್ರದ ಕುದುರೆ ಸಾಧುವಾಯಿತು ನಿಲೆ ಮಕ್ಕಳ ಮಂಛೌಸನ್‌ ಅವರ ಗುರಿ ಯಾವಾಗಲೂ ಬಹಳ ಚೆನ್ನಾಗಿತ್ತು. ಮೊದಲ ಸಲ ಕವಣೆ ಬೀರಿದಾಗ ಒಂದು ಕಲ್ಲು ತಗುಲಿ ಆ ಸಮುದ್ರದ ಕುದುರೆಯ ಒಂದು ಕಣ್ಣು ಕುರುಡಾಯಿತು. ಎರಡನೆಯ ಸಲ ಬೀರಿದಾಗ ಇನ್ನೊಂದು ಕಲ್ಲು ತಗುಲಿ ಇನ್ನೊಂದು ಕಣ್ಣು ಕುರುಡಾ ಯಿತು. ಎರಡು ಕಣ್ಣುಗಳೂ ಇದ್ದಕ್ಕಿದ್ದ ಹಾಗೆ ಕುರುಡಾಗಲು, ಆ ಸಮುದ್ರದ ಕುದುರೆ ದಾರಿ ತಿಳಿಯದೆ ಒದ್ದಾಡುತ್ತಿದ್ದಾಗ ನಮ್ಮ ತಂದೆ ಛಂಗನೆ ಎಗರಿ ಅದರ ಮೇಲೆ ಹತ್ತಿಕೊಂಡು, ಕೈಲಿದ್ದ ಕವಣೆಯನ್ನೇ ಅದರ ಬಾಯಿಗೆ ಕಡಿವಾಣದ ಹಾಗೆ ಇಟ್ಟು, ಅದನ್ನೇ ಸವಾರಿಮಾಡತೊಡಗಿದರು. ಅದುವರೆಗೆ ರೋಷದಿಂದ ಫುಡು ಘುಡಿಸುತ್ತಿದ್ದ ಆ ಕುದುರೆ ಒಡನೆಯೇ ಸಾಧುಪ್ರಾಣಿಯಾಯಿತು. ನಮ್ಮ ತಂದೆ ಅದನ್ನು ಸಮುದ್ರದ ಕಡೆಗೆ ಮುಖಮಾಡಿ ತಿರುಗಿಸಿದರು. ಅದು ಒಡನೆಯೆ ಅವರು ಹೇಳಿದ ಹಾಗೆ ಕೇಳಿ ತಿರುಗಿತು. ಆದರೆ ಅದಕ್ಕೆ ಸಮುದ್ರದ ನೀರಿನಲ್ಲಿ ಬಹುಕಾಲ ಇದ್ದು ಬೇಸರವಾಗಿತ್ತು. ನೆಲದ ಮೇಲೆ, ಸಮುದ್ರತೀರದ ಮರಳಿನ ಮೇಲೆ, ಕುಣಿದಾಡಬೇಕೆಂದು ಅದಕ್ಕೆ ಇಷ್ಟ. ಆದರೆ ನಮ್ಮ ತಂದೆ ಬಿಡಬೇಕಲ್ಲ! ಸಾಧ್ಯವಾದರೆ ಆ ಕುದುರೆಯನ್ನು ಹತ್ತಿಕೊಂಡೇ ತಮ್ಮ ತವರೂರಾದ ಹಾಲೆಂಡಿಗೂ ಹೋಗೋಣವೆಂದು ಅವರಿಗೆ ಮನಸ್ಸು. ಅಲ್ಲವೆ? ಅನಾವಶೃಕವಾಗಿ ಹಡಗಿನ ಪ್ರಯಾಣದ ವೆಚ್ಚ ಏಕೆ ಕೊಡಬೇಕು? ನಮ್ಮ ತಂದೆ ಆ ಕುದುರೆಯನ್ನು ಸಮುದ್ರದೊಳಕ್ಕೆ ನಡೆ ಸಿಯೇ ನಡೆಸಿದರು. ಹಾಲೆಂಡಿಗೂ ಆ ಕುದುರೆಯ ಮೇಲೆಯೇ ಬಂದು ಸೇರಿದರು. ದಾರಿಯಲ್ಲಿ ಸಮುದ್ರದೊಳಗೆ ಅವರು ಕಂಡ ಅದ್ಭುತವಾದ ಆಶ್ಚರ್ಯಕರವಾದ ದೃಶ್ಯಗಳನ್ನು ಅವರೇ ವರ್ಣಿಸ ಬೇಕು! ನೀವು ಕೇಳಬೇಕು! ಪರ್ವತಾಕಾರದ ಹವಳದ ರಾಶಿ ಸಮುದ್ರದ ಕುದುರೆ ೩೯ ಗಳಂತೆ! ಆನೆಯ ಗಾತ್ರದ ಮುತ್ತುಗಳಂತೆ! ನಮ್ಮಲ್ಲಿ ಮಾವಿನ ಮರ, ತೆಂಗಿನ ಮರ, ದ್ರಾ ಕ್ರಿಬಳ್ಳಿ ಮುಂತಾದುವು ಇರುವ ಹಾಗೆಯೇ ಅಲ್ಲಿಯೂ ಸಮುದ್ರದ ಅಡಿಯಲ್ಲಿ ಒಂದು ಮರದ ತುಂಬ ಮೀನು ಗಳು, ಇನ್ನೊಂದರ ತುಂಬ ಮತ್ಸ್ಸ್ಯಗಳು, ಮತ್ತೊಂದರ ತುಂಬ ತಿಮಿಂಗಿಲಗಳು, ಬೇರೊಂದರ ತುಂಬ ಏಡಿಗಳು-ಇನ್ನೂ ಹೀಗೆಯೇ ಚಿತ್ರವಿಚಿತ್ರ ವಾದ ನೀರಿನ ಪ್ರಾಣಿಗಳೆಲ್ಲ ಅಲ್ಲಿ ಗಿಡಮರಗಳ ಮೇಲೆ ಹೂವುಹಣ್ಣು ಗಳ ಹಾಗೆ ಟೀ ಜಟ ಬೀ ಇದ್ದು ನಂತೆ. ಅವುಗಳಲ್ಲಿ ಕೆಲವು ನಮ್ಮ ತಂದೆಯನ್ನೂ ಅವರ ಕುದುಕೆಯನ್ನೂ ಕಂಡೊಡನೆ, ತಮ್ಮ ಮರಗಳಿಂದ ಬಿಡಿಸಿಕೊಂಡು ಬೆನ್ನ ಟ್ರ ಬದು ವಂತೆ. ಕುದುರೆಗಂತೂ ಕಣ್ಣುಗಳೆರಡೂ ಕುರುಡಾಗಿದ್ದು ದರಿಂದ ಏನೂ ತಿಳಿಯುತ್ತಿರಲಿಲ್ಲ. ಆದರೆ ನಮ್ಮ ತಂದೆ ಮಾತ್ರ, ನಿದಾನ ವಾದರೆ ಆ ಪ್ರಾಣಿಗಳು ತಮ್ಮನ್ನು ಕೊಂದು ತಿಂದುಬಿಡುತ್ತವೆ ಎಂದುಕೊಂಡು, ಕುದುರೆಯನ್ನು ಬೇಗ ದೌಡಾಯಿಸಿಕೊಂಡು ಓಡಿ, ಹಾಲೆಂಡಿನ ದಡವನ್ನು ಸುರಕ್ಷಿತವಾಗಿ ಸೇರಿದರಂತೆ. ಈ ಕತೆಯನ್ನೆಲ್ಲಾ ನೀವು ನಮ್ಮ ತಂದೆಯ ಬಾಯಿಂದಲೇ ಕೇಳಬೇಕು. ಆದರೆ ಅವರು ಮರಣ ಹೊಂದಿದ್ದಾರೆ. ಏನು ಮಾಡುವುದು? ಅವರ ಹಾಗೆ ಕಥೆ ಹೇಳಿ ವರ್ಣಿಸುವ ಶಕ್ತಿ ನನಗೆ ಲ್ಪವೂ ಇಲ್ಲ. _ ಹಾಲೆಂಡಿಗೆ ಬಂದ ಮೇಲೆ, ನಮ್ಮ ತಂದಿ ತಮ್ಮ ಕುರುಡು ಕುದುರೆಯನ್ನು ಆ ಊರಿನ ನಗರಸಭೆಗೆ ಮಾರಿಬಿಟ್ಟಿರು. ನಗರ ಸಭೆಯನರು ಅಂಥ ವಿಚಿತ್ರವಾದ ಕುದುರೆಯನ್ನು ಅದುವರೆಗೆ ನೋಡಿರಲಿಲ್ಲವಾದ್ದರಿಂದ ಅದನ್ನು ಏಳು ಸಾವಿರ ಚಿನ್ನದ ನಾಣ್ಯ ಗಳಿಗೆ ಕೊಂಡುಕೊಂಡರು. ನಮ್ಮ ತಂದೆ ಸಾಯುವಾಗ ಆ ಏಳು ಸಾವಿರ ನಾಣ್ಯಗಳನ್ನೂ ಕವಣೆಯನ್ನೂ ನನಗೆ ಕೊಟ್ಟು ದಿವಂಗತ ೪೦ ಮಕ್ಕಳ ಮಂಛೌಸನ್‌ ರಾದರು. ಈಗ ನನ್ನ ಹತ್ತಿರ ಇರುವ ಕವಣೆ ಅವರು ಕೊಟ್ಟಿ ಅದೇ ಕವಣೆ. ಆದರೆ ಆ ಏಳು ಸಾವಿರ ನಾಣ್ಯ ಮಾತ್ರ, ಪ್ರತಿ ನರ್ಷವೂ ತಪ್ಪದೆ ಮರಿಹಾಕುತ್ತಿರುವುದರಿಂದ ಈಗ ಎಪ್ಪತ್ತು ಸಾವಿರ ನಾಣ್ಯವಾಗಿದೆ. ಧ್ರುವದ ಕರಡಿಗಳ ಧ್ವಂಸ ನಮ್ಮ ಭೂಮಿಗೆ ಉತ್ತರದಲ್ಲಿ ಒಂದು ಧ್ರುವ ಇದೆ, ದಕ್ಷಿಣ ದಲ್ಲಿ ಒಂದು ಧ್ರುವ ಇದೆ, ಎಂದು ನೀವು ಕೇಳಿದ್ದೀರಿ. ಒಂದು ಸಲ ನಾನು ಉತ್ತರ ಧ್ರುವಕ್ಕೆ ಹೋಗಿದ್ದೆ. ಅಲ್ಲಿ ನನಗೆ ಆದ ಸಂಗತಿ ಯನ್ನು ಹೇಳಿದರೆ ನೀವು ನಂಬುತ್ತಿರೋ ಇಲ್ಲವೊ! ನಾನಂತೂ " ನಂಬಿದರೆ ನಂಬಿ, ಬಿಟ್ಟರೆ ಬಿಡಿ' ಎಂದು ಹೇಳಿಯೇಬಿಡುತ್ತೇನೆ. ಇಲ್ಲಿ ನಡೆದುದನ್ನು ಹೇಳುವುದಕ್ಕೆ ಮೊದಲು ನನ್ನ ಹತ್ತಿರ ಇದ್ದ " ಟೆಲೆಸ್ಕೋಪ್‌ ' ಎಂಬ ದೂರದರ್ಶಕ ಯಂತ್ರದ ವಿಚಾರ ವನ್ನು ಸ್ವಲ್ಪ ಹೇಳಬೇಕು, ಈ ಯಂತ್ರದ ಮೂಲಕ ನೋಡಿದರೆ, ಅತಿ ದೂರದಲ್ಲಿರುವ ವಸ್ತುಗಳು ಕೂಡ ಅತಿ ಹತ್ತಿರದಲ್ಲಿ ಇದ್ದಂತೆ ದೊಡ್ಡದಾಗಿ ಕಾಣುತ್ತವೆ. ನಾನು ಹೋದ ಕಡೆಯಲ್ಲೆಲ್ಲ ನನ್ನ ಕವಣೆಯನ್ನು ತೆಗೆದು ಕೊಂಡು ಹೋಗುವ ಹಾಗೆಯೇ ಈ ದೂರದರ್ಶಕ ಯಂತ್ರವನ್ನೂ ತೆಗೆದುಕೊಂಡು ಹೋಗುವುದು ಪದ್ಧತಿ. ಒಂದು ಸಲ ನಾನು ಜಿಬ್ರಾಲ್ಪರಿಗೆ ಹೋಗಿದ್ದೆ. ಆಗ ಒಂದು ಯುದ್ಧ ನಡೆಯುತ್ತಿದ್ದು ದರಿಂದ, ನನ್ನ ಸ್ನೇಹಿತನಾದ ಸೈನ್ಯಾಧಿಕಾರಿ ಅಲ್ಲಿನ ದುರ್ಗದ ರಕ್ಷಣೆಗೆ ತಾನು ಮಾಡಿದ್ದ ಏರ್ಪಾಟುಗಳನ್ನು ನಾನು ಒಂದು ಸಲ ನೋಡಿ ಒಪ್ಪಬೇಕೆಂದು ನನ್ನನ್ನು ಕರೆದುಕೊಂಡು ಹೋಗಿದ್ದ. ನಾನು ಆ ದುರ್ಗದ ಮೇಲೆ ಓಡಿಯಾಡುತ್ತಿರುವಾಗ ನನ್ನ ದೂರ ಧ್ರುವದ ಕರಡಿಗಳ ಧ್ವಂಸ ೪೧ ದರ್ಶಕವನ್ನು ಸುಮ್ಮನೆ ಹಾಗೆಯೇ ಶತ್ರುಗಳ ಕಡೆ ತಿರುಗಿಸಿ ನೋಡಿದೆ. ಅವರು ಒಂದು ದೊಡ್ಡ ಫಿರಂಗಿಯನ್ನು ನಮ್ಮ ಕಡೆಗೆ ತಿರುಗಿಸಿ, ಅದರೊಳಕ್ಕೆ ಮೂನತ್ತಾರು ಪೌಂಡುಗಳ ಗುಂಡನ್ನು ತುಂಬುತ್ತಿದ್ದುದು ಕಣ್ಣಿಗೆ ಬಿತ್ತು. ಒಡನೆಯೆ ಅದನ್ನು ನನ್ನ ಸ್ನೇಹಿತನಾದ ಸೈನ್ಯಾಧಿಕಾರಿಗೆ ಹೇಳಿದೆ. ಅನನೂ ದೂರದರ್ಶಕ ದಿಂದ ಅದನ್ನು ಕಂಡು, "ಏನು ಮಾಡೋಣ?” ಎಂದ. ನಾನು ಸುತ್ತಲೂ ನೋಡಿದೆ. ನಮ್ಮ ದುರ್ಗದ ಗೋಡೆಯ ಮೇಲೂ ಒಂದು ಖಿರಂಗಿಯಿತ್ತು. ನನ್ನ ಸ್ನೇಹಿತನಿಗೆ ಹೇಳಿ, ಒಂದು ನಲುವತ್ತೆಂಟು ಪೌಂಡುಗಳ ಗುಂಡನ್ನು ತರಿಸಿ ಅದರೊಳಕ್ಕೆ ತುಂಬಿಸಿದೆ. ತುಂಬಿ ಸಿದನಂತರ ಆ ಥಿರಂಗಿಯನ್ನು ಶತ್ರುಗಳ ಕಡೆಗೆ ತಿರುಗಿಸಿ ಸಿದ್ಧ ವಾಗಿರುವಂತೆ ಹೇಳಿದೆ. ದೂರದರ್ಶಕದಿಂದ ಶತ್ರುಗಳ ಫಿರಂಗಿ ಯನ್ನೇ ನೋಡುತ್ತಿದ್ದು, ಅವರು ತಮ್ಮ ಫಿರಂಗಿಯ ಸಿಡಿಮದ್ದಿಗೆ ಬೆಂಕಿ ಮುಟ್ಟಿಸಿದ ಮರುಗಳಿಗೆಯೆ ನಮ್ಮ ಫಿರಂಗಿಯ ಸಿಡಿ ಮದ್ದಿಗೂ ಬೆಂಕಿ ಮುಟ್ಟಿ ಸುವಂತೆ ಆಜ್ಞೆ ಕೊಟ್ಟಿ. ಎರಡು ಗುಂಡು ಗಳೂ ಮಧ್ಯಮಾರ್ಗದಲ್ಲಿ ಒಂದನ್ನೊಂದು ತಾಕಿದುವು. ನಮ್ಮ ಗುಂಡು ಶತ್ರುಗಳ ಗುಂಡಿಗಿಂತ ಭಾರವಾಗಿದ್ದ ಕಾರಣದಿಂದ ನಮ್ಮ ಗುಂಡು ಶತ್ರುಗಳ ಗುಂಡನ್ನು ಹಿಂದಕ್ಕೆ ತಳ್ಳಿ ಕೊಂಡುಹೋಯಿತು. ಹಿಂದಕ್ಕೆ ಹೋದ ಆ ಗುಂಡು ಫಿರಂಗಿಯ ಪಕ್ಕದಲ್ಲಿ ಇದ್ದವನಿಗೆ ತಾಕಿ ಅವನನ್ನು ಕೊಂದಿತು. ಅದನ್ನು ಆಟ್ಟಸಿಕೊಂಡು ಹೋದ ನಮ್ಮ ಗುಂಡು ಶತ್ರುಗಳ ಸೈನ್ಯಾಧಿಕಾರಿಯನ್ನೂ ಅವನ ಹಿಂದೆ ಸಾಲಾಗಿ ನಿಂತಿದ್ದ ಐನತ್ತು ಮುಖ್ಯಾಧಿಕಾರಿಗಳನ್ನೂ ಒಂದೇ ಏಟಗೆ ತೀರಿಸಿಬಿಟ್ಟತು. ನಾಯಕರು ಹೀಗೆ ನಾಶವಾದುದನ್ನು ಕಂಡು ಶತ್ರುಗಳು ಚೆಲ್ಲಾನಿಲ್ಲಿಯಾಗಿ ಓಡಿಹೋದರು. ೪೨ ಮಕ್ಕಳ ಮಂಛೌಸನ್‌ ಹೀಗೆ ಜಿಬ್ರಾಲ್ಬರಿನ ಯುದ್ಧದಲ್ಲಿ ಜಯವನ್ನು ಸುಲಭವಾಗಿ ಸಂಪಾದಿಸುವುದಕ್ಕೆ ನಮಗೆ ಸಹಾಯ ಮಾಡಿದ ನನ್ನ ದೂರ ದರ್ಶಕವನ್ನು ನಾನು ಉತ್ತರಧ್ರುವಕ್ಕೆ ಹೋದಾಗಲೂ ತೆಗೆದು ಕೊಂಡು ಹೋಗಿದ್ದೆ. ಆದ್ದರಿಂದಲೇ ನಾವು ಧ್ರುವದ ಹತ್ತಿರ ಹೋದಾಗ, ಒಂದು ದೊಡ್ಡ ಮಂಜಿನ ಬೆಟ್ಟಿದ ತುದಿಯಲ್ಲಿ ಎರಡು ಬಿಳಿಯ ಕರಡಿಗಳು ಕಾದಾಡುತ್ತಿದ್ದುದು ನನಗೆ ಗೋಚರವಾ ಯಿತು. ಹಿಡನೆಯೆ ನಾನು ನನ್ನ ಬಂದೂಕವನ್ನು ಹೆಗಲಿಗೆ ತೂಗುಹಾಕಿಕೊಂಡು ಆ ಮಂಜಿನ ಬೆಟ್ಟವನ್ನು ಹತ್ತಿದೆ. ತುದಿಗೆ ಬಂದಾಗ ಕಾಲು ಜಾರುತ್ತಿತ್ತು. ಎದುರಿಗೆ ದೊಡ್ಡ ದೊಡ್ಡ ಬಿರುಕುಗಳು ಬಾಯಿ ತೆರೆದುಕೊಂಡಿದ್ದುವು. ನಾನು ಅವುಗಳನ್ನೂ ದಾಟಿಕೊಂಡು ಹೋದೆ. ಹಿಮುದ ಮೈ ಕನ್ನಡಿಯ ಹಾಗೆ ನುಣು ಪಾಗಿ ಇದ್ದು ದರಿಂದ ಆಗಾಗ್ಗೆ ಜಾರಿ ಬೀಳುತ್ತಿದ್ದರೂ ನಾನೇನೂ ಬಿಡಲಿಲ್ಲ. ಕರಡಿಗಳ ಸಮಾಪಕ್ಕೆ ಬಂದು ಗಮನಿಸಿದರೆ, ಅವು ಜಗಳ ವಾಡುತ್ತಿರಲಿಲ್ಲ, ಆಟಿವಾಡುತ್ತಿದ್ದು ವು. ಅವು ಎರಡೂ ಚೆನ್ನಾಗಿ ತಿಂದು ಕೊಬ್ಬಿದ ಗೂಳಿಯ ಹಾಗೆ ಪುಷ್ಟವಾಗಿದ್ದು ವು. ಅವುಗಳ ಚರ್ಮವನ್ನು ಮಾರಿದರೆ ಎಸ್ಟು ಹಣ ಸಂಪಾದಿಸಬಹುದು ಎಂದು ಲೆಕ್ಕಾಚಾರ ಮಾಡುತ್ತ, ನನ್ನ ಬಂದೂಕವನ್ನು ಹೆಗಲಿಗೆ ಎತ್ತಿ ಗುರಿಯಿಟ್ಟು ಹೊಡೆಯಬೇಕೆಂದಿರುವ ಸಮಯಕ್ಕೆ ಸರಿಯಾಗಿ ನನ್ನ ಬಲಗಾಲು ಜಾರಿ, ದೊಪ್ಪನೆ ಬೆನ್ನಮೇಲೆ ಬಿದ್ದೆ. ಬಿದ್ದ ಖಟಿಗೆ ಮೂರ್ಛೆ ಹೋದೆ; ಎಚ್ಚರವಾಗಲು ಎರಡು ಗಂಟಿ ಬೇಕಾಯಿತು. ನನಗೆ ಎಚ್ಚರವಾದಾಗ ಯಾರೋ ನನ್ನನ್ನು ಹೊತ್ತು ಕೊಂಡು ಹೋಗುತ್ತಿರುವಂತೆ ಆಯಿತು. ಕಣ್ಣುಬಿಟ್ಟು ನೋಡಿದೆ. ನನ್ನನ್ನು ಯಾರೂ ಎತ್ತಿಕೊಂಡು ಹೋಗುತ್ತಿರಲಿಲ್ಲ; ನಾನು ಕೊಲ್ಲ ಧ್ರುವದ ಕರಡಿಗಳ ಧ್ವಂಸ ೪೩ ಬೇಕೆಂದಿದ್ದ ಎರಡು ಕರಡಿಗಳಲ್ಲಿ ಒಂದು ನನ್ನ ನಡುಪಟ್ಟಯನ್ನು ಬಾಯಲ್ಲಿ ಕಚ್ಚಿಕೊಂಡು, ನನ್ನನ್ನು ಹಿಮದಮೇಲೆ ಎಳೆದುಕೊಂಡು ಹೋಗುತ್ತಿತ್ತು. ಅದು ಕಚ್ಚಿಕೊಂಡಿದ್ದ ರೀತಿಯಲ್ಲಿ ನನ್ನ ತಲೆ ಅದರ ಹೊಟ್ಟಿಯ ಅಡಿಯಲ್ಲಿ ಇತ್ತು. ನಾನು ಮಹಾಮತ್ಸ್ಯದ ಹೊಟ್ಟೆಯಿಂದ ಬದುಕಿಬಂದ ಮೇಲೆ ಒಂದು ಚೂರಿಯನ್ನು ಸದಾ ಸೊಂಟದಲ್ಲಿ ಸಿಕ್ಕಿಸಿಕೊಂಡಿ ರುತ್ತೇನೆ ಎಂದು ಹಿಂದೆಯೇ ಹೇಳಿದ್ದೆ ನಷ್ಟೆ. ಈಗ ಆ ಚೂರಿಯ ಜ್ಞಾಪಕವಾಯಿತು. ಒಡನೆ ಅದನ್ನು ಹೊರಗೆಳೆದು, ನನ್ನನ್ನು ಕಚ್ಚಿಕೊಂಡಿದ್ದ ಕರಡಿಯ ಹೊಟ್ಟಿ ಯನ್ನು ಕುಯಿದುಬಿಟ್ಟಿ. ಕರಡಿ "ಕಿರ್ರೋ' ಎಂದು ಕಿರಿಚಿಕೊಂಡು ನನ್ನನ್ನು ಕೆಳಗೆ ಬೀಳಿಸಿ ಬಿಟ್ಟಿತು. ನಾನು ಥಟಕ್ಕನೆ ಎದ್ದು, ನನ್ನ ಬಂದೂಕವನ್ನೆತ್ತಿ ಹೊಡೆದು, ಅದನ್ನು ಅಲ್ಲಿಯೇ ಕೊಂದುಬಿಟ್ಟಿ. ನಾನು ಬಂದೂಕವನ್ನು ಹೊಡೆದ ಶಬ್ದವನ್ನು ಕೇಳಿ, ಅದು ವರೆಗೆ ಅಲ್ಲಿ ಮಲಗಿದ್ದ ನೂರಾರು ಕರಡಿಗಳು ಒಮ್ಮೆಗೇ ಎದ್ದು ನಿಂತುವು. ಅವು ಅಲ್ಲಿ ಮಲಗಿದ್ದು ದನ್ನು ನಾನು ಗಮನಿಸಿರಲಿಲ್ಲ. ಬಿಳಿಯ ಹಿಮದಲ್ಲಿ ಬಳಿಯ ಕರಡಿಗಳು ಗುರುತೇ ಆಗುತ್ತಿರಲಿಲ್ಲ. ಎದ್ದ ಕರಡಿಗಳ ಕಣ್ಣಿಗೆ ನಾನು ಬಿದ್ದರೆ, ನಾನು ಬೇರೆ ಉಳಿ ಯಾವ ಹಾಗಿರಲಿಲ್ಲ. “ಎನು ಮಾಡುವುದು? ಕಣ್ಣು ಮುಚ್ಚಿ ಕಣ್ಣು ತೆಗೆಯುವುದರೊಳಗೆ ನಾನು ಕೊಂದ ಕರಡಿಯ ಚರ್ಮವನ್ನು ಸುಲಿದು, ತಲೆಯಿಂದ ಕಾಲಿನವರೆಗೂ ಅದನ್ನೇ ಹೊದಿದು ತೆಪ ಗೆ ನಿಂತುಬಿಟ್ಟೆ. ಕರಡಿಗಳು ಒಂದೊಂದಾಗಿ ಹತ್ತಿರ ಬಂದು ಗ ನೋಡಿದುವು. ನಾನೂ ಉಸಿರಾಡದೆ ನಿಂತೆ. ಹಸಿಯ ಕರಡಿಯ ವಾಸನೆ ಇನ್ನೂ ಚರ್ಮಕ್ಕೆ ಅಂಟಕೊಂಡಿದ್ದು ದರಿಂದ ಕರಡಿಗಳು ನನ್ನನ್ನೂ ೫ ಕರಡಿ 1 ತಿಳಿದುಕೊಂಡವು. ಸುತ್ತಲೂ ೪೪ ಮಕ್ಕಳ ಮಂಛೌೌಸನ್‌ ಇದ್ದ ಗಡವ ಕರಡಿಗಳ ಹಾಗೆ ನನ್ನ ಮೈ ಬೆಳೆದಿರಲಿಲ್ಲವಾದರೂ ನನ್ನನ್ನು ನೋಡಿದರೆ ಮರಿಕರಡಿ ಎನ್ನ ಬಹುದಾಗಿತ್ತು. ಅಂತೂ ನನ್ನನ್ನೂ ತಮ್ಮವನೇ ಎಂದು ಅವು ಭಾವಿಸಿಕೊಂಡವು. ಆದರೆ ಅದೇನು ಗುದ್ದಾಟ! ಏನು ಗುರುಗುಟ್ಟಾಟ! ಆ ಆಟದಲ್ಲಿ ನಾನು ಅವುಗಳನ್ನು ಮಾರಿಸುವುದು ಸಾಧ್ಯವಾಗದಿದ್ದರೂ, ಅವು ಗಳು ನನ್ನಲ್ಲಿರಿಸಿದ್ದ ನಂಬಿಕೆಯಿಂದ ನಾನು ಹೇಗೆ ಹಣ ಸಂಪಾ ದಿಸಬಹುದಂದು ಎಣಿಕೆಮಾಡುತ್ತಿದ್ದೆ. ಹಿಂದೆ ನಾವು ಹುಡುಗರಾಗಿದ್ದ ಕಾಲದಿಂದಲೂ ನೆಮಗೆ ಒಂದು ವಿಷಯ ಕಲಿಸಿದ್ದರು. ನಿನೆಂದರಿ, ಕತ್ತಿನ ಮೇಲೆ ಒಂದು ಕತ್ತಿಯೇಟು ಕೊಟ್ಟರ ತಟ್ಟನೆ ಸಾಯುತ್ತಾರೆ ಎಂದು. ನಾನು ಅದನ್ನೇ ಜ್ಞಾಪಕದಲ್ಲಿಟ್ಟುಕೊಂಡು, ಒಂದೊಂದು ಕರಡಿಯೂ ಆಟವಾಡುತ್ತ ಒಂದೊಂದು ಏಟು ಗುದ್ದಿದಾಗಲೂ ನಾನೂ ನನ್ನ ಕೈಯ ಚಾಕುವಿನಿಂದ ಅದರ ಕುತ್ತಿಗೆಯ ಮೇಲೆ ಒಂದು ಕೆತ್ತು ತ್ತಿದೆ. ಅದು ತಟ್ಟನೆ ಸತ್ತು ಬೀಳುತ್ತಿತ್ತು. ಹೀಗೇ ಮಾಡಿ ಅಲ್ಲಿದ್ದ ನೂರಾರು ಕರಡಿಗಳಲ್ಲಿ ಒಂದನ್ನೂ ಬಿಡದ ಹಾಗೆ ಎಲ್ಲ ವನ್ನೂ ನಾನೊಬ್ಬನೇ ಒಂದೇ ಚಾಕುವಿನಿಂದ ಕೊಂದು ಕೆಡವಿದೆ. ಆ ನೇಳೆಗೆ ನನ್ನ ಹಡಗಿನವರು ನಾನು ಎಲ್ಲಿ ಹೋದೆನೋ ಎಂದು ಹುಡುಕುತ್ತ ಬಂದು, ನಾನು ನಡೆಸಿದ್ದ ಅದ್ಭುತ ಕಾರ್ಯ ವನ್ನು ಕಂಡು ಆಶ್ಚರ್ಯದಿಂದ ಮೂಗಿನಮೇಲೆ ಬೆರಳಿಟ್ಟು ಕೊಂಡರು. ನಾನು ಅವರ ಸಹಾಯದಿಂದ ಆ ಕರಡಿಗಳ ದೇಹಗಳನ್ನೆಲ್ಲಾ ಹಡಗಿಗೆ ಸಾಗಿಸಿಕೊಂಡು ಹೋದೆ. ನಾವು ಉತ್ತರದ್ರುನದಲ್ಲಿ ಇದ್ದ ಕಾಲದಿಂದ ಊರಿಗೆ ಹಿಂದಿರುಗಿ ಬರುವ ವರೆಗೂ ಕರಡಿಯ ಮಾಂಸವನ್ನು ದಿನಕ್ಕೆ ಮೂರು ಸಾರಿ ತೃಪ್ತಿಯಾಗುವ ತನಕ ತಿಂದೆವು... ಆದರೂ ಇನ್ನೂ ಬೆಟ್ಟದಷ್ಟು ಮಾಂಸ ನಾನು ಹಕ್ಕಿಯಂತೆ ಹಾರಿದ್ದು ೪೫ ಮಿಕ್ಕಿತ್ತು. ಊರಿಗೆ ಬಂದಮೇಲೆ ಅದನ್ನು ಅಲ್ಲಿನ ಬಡವರಿಗೆಲ್ಲಾ ಉಚಿತವಾಗಿ ಹಂಚಿಬಿಟ್ಟಿವು. ಆದರೆ ಕರಡಿಯ ಚರ್ಮಗಳನ್ನು ಮಾತ್ರ ಹಣಕ್ಕೆ ಮಾರಿ, ಬಂದುದನ್ನು ನಾವೆಲ್ಲರೂ ಹಂಚಿ ಕೊಂಡೆವು. ಹೀಗೆ ಕರಡಿಗಳ ಸಂಹಾರದ ಪ್ರಸಂಗದಿಂದ ಹಣ ಎಲ್ಲರಿಗೂ ಬಂದರೂ ಕೂಡ ಕಾಶ್ಚತವಾದ ಹೆಸರು ಬಂದದ್ದು ನನಗೆ ಒಬ್ಬನಿಗೆ ಮಾತ್ರ. ಅದನ್ನು ಮಾತ್ರ ಒಬ್ಬನು ಇನ್ನೊಬ್ಬನಿಗೆ ಹಂಚಿಕೊಡುವುದು ಸಾಧ್ಯವಿಲ್ಲ. ನಾನು ಹಕ್ಕಿಯಂತೆ ಹಾರಿದ್ದು ನಾನು ಹಕ್ಕಿಯ ಹಾಗೆ ರೆಕ್ಕೆ ಬೀಸಿಕೊಂಡು ಹಾರಿದ್ದು ನಿಮಗೆ ಗೊತ್ತೇನು? ಗೊತ್ತಿಲ್ಲವೆ? ಹೇಳುತ್ತೇನೆ, ಕೇಳಿ. ನಾನು ಜಿಬ್ರಾಲ್ಪರಿಗೆ ಹೋಗಿದ್ದು ದನ್ನು ಹಿಂದೆ ಹೇಳಿದ್ದೆ ನಲ್ಲವೆ; ಆ ಪ್ರವಾಸದಲ್ಲಿ ನಾನು ಫ್ರಾನ್ಸಿನ ಮೂಲಕವಾಗಿ ಇಂಗೆ ಂಡಿಗೆ ಹೋದೆ. ಹೋಗುವಾಗ ದಾರಿಯಲ್ಲಿ ಕೆಲೆ ಎಂಬ ಒಂದು ಬಂದರ ಇದೆ: ಅಲ್ಲಿದ್ದ ಒಂದು ಹಡಗಿನಲ್ಲಿ ಅನೇಕ ಜನ ಇಂಗ್ಲಿಷು ಸ್ಪೆನಿಕರನ್ನು ಸೆರೆ ಹಿಡಿದು ಇಟ್ಟಿದ್ದರೆಂದು ನನಗೆ ವರ್ತ ಮಾನ ಬಂತು. ಇಂಗ್ಲಿಸಿನವರೆಂದರೆ ನನಗೆ ಯಾವಾಗಲೂ ತುಂಬ ಅಭಿಮಾನ. ಅವರೂ ನನ್ನ ಹಾಗೆಯೇ ಶೂರರು, ವೀರರು. ಅಂಥವರು ಸೆರೆಯಾಳುಗಳಾಗಿ ಕೊಳೆಯುತ್ತ ಬಿದ್ದಿ ರುವುದು ನನಗೆ ಸರಿತೋರಲಿಲ್ಲ. ಹೇಗಾದರೂ ಮಾಡಿ ಅನರನ್ನು ಸೆರೆ ಯಿಂದ ಬಿಡಿಸಬೇಕೆಂದು ನಿಶ್ಚೆಯಮಾಡಿದೆ. ಅದಕ್ಕೋಸ್ಕರ ದೊಡ್ಡದೊಡ್ಡ ಮರದ ಪಟ್ಟಿಗಳನ್ನೂ ದಪ್ಪನಾದ ಬಟ್ಟೆಯನ್ನೂ ತಂದು, ನಲುವತ್ತು ಮೊಳ ಉದ್ದ ಹದಿನೆಂಟು ಮೊಳ ಅಗಲ ವಾದ ಎರಡು ರೆಕ್ಕೆಗಳನ್ನು ಮಾಡಿ, ಎರಡು ಭುಜಗಳಿಗೂ ಭದ್ರ ೪೬ ಮಕ್ಕಳ ಮಂಛೌಸನ್‌ ವಾಗಿ ಸಿಕ್ಕಿಸಿಕೊಂಡೆ. ಒಂದು ದಿನ ಇನ್ನೂ ಸೂರ್ಯ ಉದಯಿಸು ವುದಕ್ಕೆ ಮುಂಚಿತವಾಗಿಯೇ ಎದ್ದು, ರೆಕ್ಕೆಗಳನ್ನು ಸಿಕ್ಕಿಸಿಕೊಂಡು, ಬೀಸಿ ಬೀಸಿ, ಆಕಾಶಮಾರ್ಗದಲ್ಲಿ ಹೋಗಿ, ಆ ಇಂಗ್ಲಿಷು ಸೆರೆ ಯಾಳುಗಳು ಇದ್ದ ಹಡಗಿನ ಮೇಲುಭಾಗದಲ್ಲಿ ರೆಕ್ಕೆಯಾಡಿಸುತ್ತ ನಿಂತೆ. K \ ಖ್‌ ¥ ಖಿ pe 2 pa ಕ್ಮ pS LE 6 ರ್‌ ಹ ಹ ಸಾ ಗಾ ರಾರಾ ದಾ ವವನು ಹಡಗು ಮೇಲೆ ಬಂತು ನಾನು ಹೆಕ್ಕಿಯಂತೆ ಹಾರಿದ್ದು ೪೭ ಬರುವಾಗ ಜೊತೆಯಲ್ಲಿಯೇ ಎರಡು ಮೂರು ಕಬ್ಬಿಣದ ಸರಪಣಿಗಳನ್ನೂ ತಂದಿದ್ದ. ಅವುಗಳ ತುದಿಗೆ ಜೋಡಿಸಿದ್ದ ಕೊಕ್ಕೆ ಗಳನ್ನು ಹಡಗಿನ ಕಂಬಗಳಿಗೆ ತಗುಲಿಸಿ, ಎಳೆದು ನೋಡಿದೆ. ಅವು ಭದ್ರವಾಗಿ ಬಿಗಿದುಕೊಂಡಿದ್ದು ನೆಂದು ತಿಳಿದುಬಂದ ಮೇಲೆ, ರೆಕ್ಕೆಗ ಳನ್ನು ಬಡಿಯುತ್ತ ಮೇಲೆದ್ದೆ. ನಾನು ಮೇಲೆ ಹೋದಹಾಗೆಲ್ಲಾ ನನ್ನ ಕೈಯಲ್ಲಿದ್ದ ಸರಪಣಿಗಳ ತುದಿಗೆ ಸಿಕ್ಕಿದ್ದ ಸೆರೆಯಾಳುಗಳ ಹಡಗೂ ನೀರಿನಿಂದ ಮೇಲೆದ್ದು ಬಂತು. ಹಾಗೆಯೇ ಅದನ್ನು ಎತ್ತಿಕೊಂಡು ಹೋಗಿ ಇಂಗ್ಲಿಸಿನವರ ಒಂದು ಬಂದರಿನಲ್ಲಿ ಅದನ್ನು ಇಳಿಸಿದೆ. ಸೆರೆಯಾಳುಗಳು ಬೆಳಗ್ಗೆ ಕಣ್ಣುಬಿಟ್ಟು ನೋಡಿ, ನಿಜಸ್ಥಿತಿ ಯನ್ನು ತಿಳಿದಾಗ, ಅವರ ಆನಂದಕ್ಕೆ ಪಾರವೇ ಇಲ್ಲದೆ ಹೋಯಿತು. ನನ್ನನ್ನು ಅವರು ತುಂಬ ಹೊಗಳಿದರು, ಗೌರವಿಸಿದರು. ನನ್ನ ರೆಕ್ಕೆಗಳಿಂದ ಆಗಬೇಕಾಗಿದ್ದ ಕೆಲಸ ಆದಮೇಲೆ ಅದನ್ನು ಏನು ಮಾಡಬೇಕೋ ತಿಳಿಯಲಿಲ್ಲ. ಅದನ್ನು ಆ ಸೆರೆಯಾಳುಗಳಿಗೇ ಕೊಬ್ಬುಬಿಟ್ಟೆ. ಅವರು ಅದನ್ನು ತಮ್ಮ ಆಯುಧಕಾಲೆಯ ಒಂದು ಮಂಟಪದಲ್ಲಿಟ್ಟು ಈ ಹೊತ್ತಿಗೂ ಪೂಜೆ ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ. ನಾನಂತೂ ನೋಡಿಲ್ಲ, ಕೇಳಿದ್ದೇನೆ. ನನ್ನ ಜೀಟೆನಾಯಿ ನಾನು ಮೃಗಗಳ ಬೇಟಿಯಾಡುತ್ತೇನೆಂಬುದನ್ನೂ ಹಕ್ಕಿ ಗಳ ಬೇಟೆಯಾಡುತ್ತೇನೆ ಎಂಬುದನ್ನೂ ನೀವು ಇದುವರೆಗೆ ಆಗಲೇ ಕೇಳಿದ್ದೀರಿ. ಆದರೆ ನನ್ನ ಬೇಟಿ ಸಫಲವಾಗುವುದಕ್ಕೆ ನನಗೆ ಸಹಾಯಮಾಡುತ್ತಿದ್ದ ನನ್ನ ಬೇಟೆನಾಯಿಯ ವಿಚಾರವಾಗಿ ಇದು ವರೆಗೆ ಏನೂ ಹೇಳಿಲ್ಲ, ಅಲ್ಲವೆ? ಅದು ಅಗತ್ಯವಾಗಿ ನಾನು ಹೇಳಬೇಕಾದ ವಿಚಾರ, ನೀವು ಕೇಳಬೇಕಾದ ನಿಜಾರ, ೪೮ ಮಕ್ಕಳ ಮಂಛೌಸನ್‌ ಕೆಲವು ನಾಯಿಗಳು ನೆಲದ ಮೇಲೆ ಓಡಿಯಾಡುವ ಪ್ರಾಣಿ ಗಳ ವಾಸನೆಯನ್ನು ಕಂಡುಕೊಳ್ಳ ಬಲ್ಲವು, ಇನ್ನು ಕೆಲವು ನೀರಿನ ಒಳಗೆ ಓಡಿಯಾಡುವ ಪ್ರಾಣಿಗಳ ವಾಸನೆ ತಿಳಿಯಬಲ್ಲವು, ಮತ್ತೆ ಕೆಲವು ಆಕಾಶದಲ್ಲಿ ಹಾರುವ ಹಕ್ಕಿಗಳ ವಾಸನೆ ಹಿಡಿಯಬಲ್ಲವು. ಆದರೆ ನನ್ನ ಬೇಟೆನಾಯಿಗ ಮಾತ್ರ ಈ ಮೂರೂ ತೆರದ ಶಕ್ತಿ ಇತ್ತು. ಆದ್ದರಿಂದಲೇ ಅದಕ್ಕೆ ನಾನು “ನೋಸಿ” ಎಂದು ಹೆಸರಿಟ್ಟಿದ್ದೆ ವು. ಇಂಗ್ಲಿಸಿನಲ್ಲಿ " ನೋಸಿ'' ಎಂದರೆ "ಮೂಗಿರ ತಕ್ಕದ್ದು” ಎಂದು ಅರ್ಥ. ಬೇಕಾದರೆ, "ಮೂಗಣ್ಣ' ಎಂದು ನನ್ನ ನಾಯನ್ನು ನೀವು ಕರೆಯಬಹುದು. ಈ ನಾಯಿಯ ಅದ್ಭುತವಾದ ವಾಸನಾಶಕ್ಷಿಯನ್ನು ಕುರಿತು ನಿಮಗೆ ಒಂದು ಕಥೆ ಹೇಳುತ್ತೇನೆ, ಕೇಳಿ. ಒಂದು ಸಲ ನಾನು ನನ್ನ ಕೆಲವು ಸ್ನೇಹಿತರೊಡನೆ ಸಮುದ್ರ ಯಾನ ಹೊರಟದ್ದ. ನನ್ನ ನಾಯಿ ಮೂಗಣ್ಣ ಕೂಡ ನನ್ನ ಜೊತೆ ಯಲ್ಲಿಯೇ ಇತ್ತು. ಒಂದು ದಿವಸ ನಾವು ಸಮುದ್ರದ ಮಧ್ಯೆ, ನೆಲದಿಂದ ಮುನ್ನೂರು ಮೈಲಿಗಳ ದೂರದಲ್ಲಿ ಇರುವಾಗ ನನ್ನ ನಾಯಿ ಮೂಗಣ್ಣ ಆಕಾಶದಲ್ಲಿ ಏನನ್ನೋ ಮೂಸಿನೋಡುತ್ತ ಸುಮ್ಮನೆ ಓಡಿಯಾಡಿತು. ಆನಾಯಿಯ ಪದ್ಧತಿ ನನಗೆ ಗೊತ್ತಿತ್ತು. ನೆಲದ ಪ್ರಾಣಿಗಳ ಸುಳಿವು ತಿಳಿದರೆ, ಅದು ನೆಲವನ್ನು ಮೂಸಿನೋಡುತ್ತಿತ್ತು ; ನೀರಿನ ಪ್ರಾಣಿಗಳ ವಾಸನೆ ಕಂಡರೆ, ನೀರಿಗೆ ಮೂಗು ತಾಗಿಸುತ್ತಿತ್ತು ; ಪಕ್ಷಿಗಳ ಗಾಳಿ ಬೀಸಿದರೆ, ಆಕಾಶದಲ್ಲಿ ಮೂಸಿನೋಡುತ್ತಿತ್ತು. ಆದ್ದರಿಂದ, ಅದು ಆಕಾಶದಲ್ಲಿ ವಾಸನೆ ನೋಡುತ್ತಿದ್ದು ದನ್ನು ಕಂಡು, "ಇಲ್ಲಿ ಎಲ್ಲಿಯೋ ಹಕ್ಕಿ ಇರಬೇಕು? ಎಂದು ನನಗೆ ನನ್ನ ಬೇಟೆನಾಯಿ ೪೯ ಎನ್ನಿಸಿತು. ಆದರೆ ಆಕಾಶದಲ್ಲಿ ಎಲ್ಲಿ ನೋಡಿದರೂ ಹಕ್ಕಿಯೆನ್ನ ಬಹುದಾದ ಒಂದು ಚುಕ್ಕಿಯೂ ಕಾಣಿಸಲಿಲ್ಲ. ಇದೇನಿದು? ಮೂಗಣ್ಣ ಎಂದಿಗೂ ತಪ್ಪು ಮಾಡುವುದಿಲ್ಲ. ಈ ಹೊತ್ತು ಏಕೆ ಹೀಗೆ ಆಡುತ್ತಿದೆ?” ಎಂದು ನಾನು ಚಿಂತಿಸು ತ್ರಿರುವಾಗಲೇ, ಅದುವರೆಗೂ ಆಕಾಶದಲ್ಲಿ ಮೂಸಿನೋಡುತ್ತಿದ್ದ ನಾಯಿ ತಟಕ್ಕನೆ ಹಡಗಿನ ಅಂಚಿಗೆ ಹೋಗಿ, ನೀರಿನ ಕಡೆ ಮೂಸಿ ನೋಡತೊಡಗಿತು. ಆಗ ಅದರ ಮೂಗು ತೋರಿಸುತ್ತಿದ್ದ ಕಡೆ ಕುರಿತು ನೋಡಿದೆ. ಷಾರ್ಕ್‌ ಎಂಬ ಒಂದು ಜಾತಿಯ ರಾಕ್ಷಸ ಮೀನು ಹಡಗನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಆಗ ನನಗೆ ಶಿಹೋ! ಈ ರಾಕ್ಷಸ ಮೀನು ಯಾವುದೋ ಹಕ್ಕಿಯನ್ನು ಜೀವ ಸಹಿತವಾಗಿ ನುಂಗಿರಬೇಕು! ಆದ್ದರಿಂದಲೇ ನನ್ನ ಮೂಗಣ್ಣ ಹೀಗೆ ಮೂಸಿನೋಡುತ್ತಿದೆ!'' ಎಂದು ಹೊಳೆಯಿತು. "ನನ್ನ ಮೂಗಣ್ಣ ಎಂದಿಗೂ ತಪ್ಪುಮಾಡುವುದಿಲ್ಲ'' ಎಂದು ಸಂತೋಷ ವಾಯಿತು. ಒಡನೆಯೇ ಹಡಗಿನ ಯಜಮಾನನ ಹತ್ತಿರಕ್ಕೆ ಹಿಡಿದೆ. ಅವನು ನನ್ನ ಸ್ನೇಹಿತ. “ಅಯ್ಯಾ, ಈ ಹೊತ್ತಿನ ಮಧ್ಯಾಹ್ನದ ಊಟಕ್ಕೆ ಯಾವುದಾದರೂ ಹಕ್ಕಿಯನ್ನು ಹಿಡಿದು ಕೊಟ್ಟರೆ ನೀನು ನನಗೆ ಏನು ಕೊಡುತ್ತೀಯೆ?'' ಎಂದು ಕೇಳಿದೆ. ಅದಕ್ಕೆ ಅವನು "“ ನಿನಗೆ ಬುದ್ಧಿ ಸರಿಯಾಗಿ ಇದೆಯೋ, ಇಲ್ಲವೋ? ಭೂಮಿಯಿಂದ ಮುನ್ನೂರು ಮೈಲು ದೂರದಲ್ಲಿದ್ದೇನೆ, ಆಕಾಶದಲ್ಲಿ ಒಂದು ಚಿಕ್ಕ ಚುಕ್ಕಿಯೂ ಇಲ್ಲ. ನಿನಗೆ ಹಕ್ಕಿ ಎಲ್ಲಿಂದ ಬರಬೇಕು?'' ಎಂದ. "« ಅದೆಲ್ಲಾ ನಿನಗೇಕೆ? ಇನ್ನು ಅರ್ಥಗಂಟೆಯೊಳಗಾಗಿ ನಾನು ಅಡುಗೆಗೆ ಬೇಕಾದ ಹಕ್ಕಿ ಹಿಡಿದು ಕೊಟ್ಟರೆ ನೆನಗೆ ನೂರು 4 ೫೦ ಮಕ್ಕಳ ಮಂಛೌಸನ್‌ ತೊಲ ಚಿನ್ನ ಕೊಡುವೆಯ? ಹಿಡಿದು ಕೊಡದಿದ್ದರೆ ನಾನು ನಿನಗೆ ನೂರು ತೊಲ ಕೊಡುತ್ತೇನೆ'' ಎಂದೆ. ಅದಕ್ಕೆ ಅವನು ನಮ್ಮ ಸ್ನೇಹಿತರನ್ನೆಲ್ಲ ಕರೆದು, ""ಇವನಿಗೆ ಬುದ್ಧಿ ಭ್ರಮಣೆಯಾಗಿದೆ. ಆದರೂ ಇವನಿಟ್ಟ ಪಣವನ್ನು ನಾನು ಒಪ್ಪಿಕೊಳ್ಳುತ್ತೇನೆ. ಇವನ ಮೂರ್ಪತನವನ್ನು ಇವನಿಗೆ ತೋರಿ ನಿದ ಮೇಲೆ, ಇವನೆ ಚಿನ್ನವನ್ನು ಇವನಿಗೇ ಕೊಟ್ಟರಾಯಿತು 33 ಎಂದು ಒಪ್ಪಿಕೊಂಡನು. ನಾನೂ ಅವರ ಹತ್ತಿರ ಅದು ಇದು ಏನೇನೋ ಮಾತಾಡುತ್ತ ಇದ್ದು, ಹಡಗನ್ನು ಅಟ್ಟಬರುತ್ತಿದ್ದ ಷಾರ್ಕನ್ನು ಆಗ ತಾನೆ ಕಂಡವನ ಹಾಗೆ " ಅದೋ, ಅದೋ! ಭಾರಿ ಷಾರ್ಕ್‌! ಈಟ ತನ್ನಿ! ಅದನ್ನು ಹಿಡಿಯೋಣ!” ಎಂದು ಕೂಗಿದೆ. " ಹಿಹೊ! ಇದೇಯೋ ನೀನು ಹೇಳುತ್ತಿದ್ದ ಹಕ್ಕಿ!” ಎಂದು ಹಡಗಿನ ಯಜಮಾನನು ನನ್ನನ್ನು ನೋಡಿ ನಗುತ್ತ, «ಎಲ್ಲಿ! ಈಟ ತಂದು ಆ ಸಾರ್ಕನ್ನು ಹೊಡೆಯಿರಿ! ?' ಎಂದು ತನ್ನ ನಾವಿಕ ರಿಗೆ ಆಜ್ಜೆಮಾಡಿದ. ಐದು ಹತ್ತು ನಿಮಿಷಗಳೊಳಗಾಗಿ ಆ ಸಾರ್ಕ್‌ ಈಟಿಯ ಏಟಿಗೆ ಸತ್ತುಬಿತ್ತು. ಅದನ್ನು ಹಡಗಿನ ಮೇಲೆ ಎಳೆದು ಹಾಕಿ ದರು. ನಾನು ನನ್ನ ಪ್ರಸಿದ್ಧವಾದ ಚೂರಿಯನ್ನು ಒರೆಯಿಂದ ತೆಗೆದು ಆ ಷಾರ್ಕಿನ ಹೊಟ್ಟೆಯನ್ನು ಸೀಳಿದೆ. ಛಿಲ್ಲೆಂದು ಚಿಮ್ಮಿದ ರಕ್ತದೊಡನೆಯೇ ರಕ್ತದಲ್ಲಿ ಸ್ನಾನಮಾಡಿ ಕೆಂಪಗಾದ ಒಂದು ದೊಡ್ಡ ಬಾತುವೂ ಐದು ಮರಿಬಾತುಗಳೂ ಹೊರಗೆ ಬಂದುವು! ಹಡಗಿನ ಯಜಮಾನನ ಮುಖ ನೋಡಿದೆ. ಅವನು ತನ್ನ ಕಣ್ಣನ್ನೇ ತಾನು ನಂಬಲಾರದ ನಿಂತಿದ್ದ. ಕಡೆಗೆ ಬಾತುಗಳು + ನನ್ನ ಬೇಟೆನಾಯಿ ೫೧ ಶಬ್ದ ಮಾಡಿದುದನ್ನು ಕೇಳಿ, ತಾನು ಆಡಿದ ಮಾತಿನ ಪ್ರಕಾರ ನೂರು ತೊಲ ಚಿನ್ನವನ್ನು ನನಗೆ ಕೊಡಲು ಬಂದ. ನಾನು ಅದನ್ನು ತೆಗೆದುಕೊಳ್ಳಲಿಲ್ಲ. 4 ಸುಮ್ಮನೆ ವಿನೋದಕ್ಕಾಗಿ ಪಣ ತೊಟ್ಟಿದ್ದು'' ಎಂದುಬಿಟ್ಟೆ. 1 ಜಾ ಹೊಟ್ಟೆಯಲ್ಲಿ ಹಕ್ಕಿ ಯಿದ್ದುದು ನಿನಗೆ ಹೇಗೆ ಗೂತ್ತಾಯಿತು?'' ಎಂದು ಎಲ್ಲರೂ ಆಶ್ಚರ್ಯಪಟ್ಟಿರು. ಮೂಗಣ್ಣನ ಕಡೆಗೆ ನಾನು ಕೈ ತೋರಿಸಿದಾಗ ಅವರ ಆಶ್ಚರ್ಯಕ್ಕೆ ಮಿತಿಯಿಲ್ಲದೆ ಹೋಯಿತು. ಚೀಲಚೀಲ ಗಳಲ್ಲಿ ಚಿನ್ನವನ್ನು ಸುರಿದು, ಮೂಗಣ್ಣ ನನ್ನು ಕೊಂಡುಕೊಳ್ಳುವು ದಕ್ಕೆ ನಾನು ತಾನೆಂದು ಮುಂದೆ ಬಂದರು. ಆದರೆ ನಾನು ಅಂಥ ನಾಯನ್ನು ಮಾರಿಯೇನೆ! ಎಷ್ಟು ಚಿನ್ನ ಸುರಿದರೂ ಆಂಥ ನಾಯಿ ಎಲ್ಲಿ ದೊರಕೀತು! ಷಾರ್ಕಿನ ಹೊಟ್ಟಿಯಲ್ಲಿ ಸಿಕ್ಕಿದ ದೊಡ್ಡ ಬಾತನ್ನು ಆದಿನ ಮಧ್ಯಾಹ್ನದ ಅಡುಗೆಗೆ ಉಪಯೋಗಿಸಿಕೊಂಡೆವು. ಉಳಿದ ಮರಿಗಳು ಇನ್ನೂ ಬಹಳ ಸಣ್ಣವಾಗಿದ್ದುವು. ತಾಯಿಬಾತಿನ ಆರೈ ಕೆಯಿಲ್ಲದೆ ಅವು ಏನಾಗುವುವೋ ಎಂದು ನಾವು ಚಿಂತಿಸುತ್ತಿ ದ್ದಾಗ ಹಡಗಿನಲ್ಲಿದ್ದ ಬೂದುಬಣ್ಣದ ಬೆಕ್ಕು ಆ ಮರಿಗಳಿಗೆ ತಾನು ಹತ ಕುಡಿ] ಸುವುದಕ್ಕೆ ಮುಂದಿ ನಲ ಮರಿಗಳೂ ಅದನ್ನೇ ತಮ್ಮ ತಾಯಿಯೆಂದು ತಿಳಿದು, ಸುಖವಾಗಿ ಹಾಲು ಕುಡಿಯುತ್ತ ಬೆಳೆದುವು. ಚಂದ್ರಲೋಕದ ಪರಿಚಯ ನಾನು ಟರ್ಕಿದೇಶದಲ್ಲಿ ಸೆರಸಿಕ್ಕಿ ಗುಲಾಮನಾಗಿದ್ದಾಗ ನನ್ನ ಬೆಳ್ಳಿಯ ಕೊಡಲಿಯನ್ನು ಹುಡುಕಿಕೊಂಡು ಬರುವುದಕ್ಕಾಗಿ ನಾನು ಚಂದ್ರಲೋಕಕ್ಕೆ ಹೋಗಿದ್ದ ಕಥೆಯನ್ನು ನಿಮಗೆ ಈ ಮೊದಲೇ ಹೇಳಿದ್ದೇನೆ. ಆದರೆ ಆ ಸಲ ನನ್ನ ಕೊಡಲಿಯನ್ನು ಹುಡುಕುವ ೫೨ ಮಕ್ಕಳ ಮಂಛೌಸನ್‌ ಪರದಾಟಿದಲ್ಲಿ ನಾನು ಬೇರೆ ಏನನ್ನೂ ಗಮನಿಸಲಿಲ್ಲ. ಅದಕ್ಕೋ ಸ್ಕರ ಇನ್ನೊಂದು ಸಲ ಹೋಗಬೇಕೆಂಬ ಆಸೆಯಿತ್ತು. ಅದು ಹೇಗೋ ದೈವೇಚ್ಛೆಯಿಂದ ಈಡೇರಿತು. ಅಲ್ಲಿ ನಾನು ಕಂಡುದನ್ನು ಹೇಳುತ್ತೇನೆ, ಕೇಳಿ. ನಾನು ದೇಶ ದೇಕಾಂಶರಗಳನ್ನು ಸುತ್ತಿಬಂದು, ತುಂಬ ಅನುಭವ ಪಡೆದಿರುವ ಮಹಾ ಸಾಹಸಿಯೆಂದು ಹೆಸರು ಪಡೆದಿದ್ದ ಕಾರಣ, ನಮ್ಮ ಹಾಲೆಂಡ್‌ ಸರಕಾರವು ಹೊಸದೇಶಗಳನ್ನು ಕಂಡು ಹಿಡಿಯುವ ಕಾರ್ಯಕ್ಕೆ ನನ್ನನ್ನೇ ನೇಮಿಸಿತು. ಹೊಸ ಹೊಸ ದೇಶ ಗಳನ್ನು ಕಂಡುಹಿಡಿದರೆ ಅದರಿಂದ ನಮ್ಮ ದೇಶದ ಕೀರ್ತಿಯೂ ಹೆಚ್ಚುತ್ತದೆ ಎಂಬ ದೇಶಾಭಿಮಾನದಿಂದ ನಾನೂ ಒಪ್ಪಿಕೊಂಡೆ ಅದಕ್ಕಾಗಿಯೇ ಒಂದು ದೊಡ್ಡ ಹಡಗನ್ನು ಸಿದ್ಧಪಡಿಸಿಕೊಂಡು "ಸಮುದ್ರದ ನಡುವೆ ಹೊಸ ದೇಶಗಳು ಎಲ್ಲಿನೆ?' ಎಂದು ಹುಡುಕಿಕೊಂಡು ಮಹಾ ಪರಿವಾರದೊಡನೆ ಹೊರಟಿ. ಸುಮಾರು ಹದಿನೈದು ದಿವಸ ನಾವು ಕ್ಷೇಮವಾಗಿ ಪ್ರಯಾಣ ಮಾಡಿದೆವು. ಆದರೆ ಹದಿನಾರನೆಯ ಮಧ್ಯಾಹ್ನ ಒಂದು ಅಸಾಧ್ಯ ವಾದ ಸುಂಟಿರಗಾಳಿ ಹುಟ್ಟಿ, ಹಡಗನ್ನು ಬಲವಾಗಿ ಹಿಡಿದು, ಗಿರ್ರನೆ ತಿರುಗಿಸುತ್ತ ಮೇಲುಮೇಲಕ್ಕೆ ಆಕಾಶ ಮಾರ್ಗದಲ್ಲಿ ಎತ್ತಿ ಕೊಂಡು ಹೋಯಿತು. ಹೀಗೇ ಸುಮಾರು ಆರು ವಾರ ವಾಯುಮಾರ್ಗದಲ್ಲಿ ನಾವು ಮೇಲೆ ಹೋದ ಬಳಿಕ ಫಳಫಳನೆ ಹೊಳೆಯುವ ಒಂದು ಗುಂಡಾದ ಬೆಳ್ಳಿಯ ದ್ವೀಪ ಗೋಚರವಾಯಿತು. ಗಾಳಿ ಆ ದ್ವೀಪದ ಹತ್ತಿರಕ್ಕೆ ನಮ್ಮ ಹಡಗನ್ನು ತೂರಿಕೊಂಡು ಬಂದು, ಅಲ್ಲಿನ ಒಂದು ಬಂದರಿ ನಲ್ಲಿ ಇಳಿಸಿತು. ಚಂದ್ರ ಲೋಕದ ಪರಿಚಯ ಜಿ ನಾನು, ನಮ್ಮ ಭೂಮಿಯ ಮೇಲಿದ್ದಾಗ, "ಚಂದ್ರಲೋಕ ದಲ್ಲಿ ಜನರಿದ್ದಾರೆ” ಎಂದು ಹೇಳಿದರೆ, ನಂಬುತ್ತಿರಲಿಲ್ಲ. ಆದರೆ ಈಗ ಕಣ್ಣಾರೆ ಕಂಡ ಮೇಲೆ, ನಂಬಬೇಕಾಯಿತು. ಅಲ್ಲಿ ಚಂದ್ರ ಲೋಕದಲ್ಲಿ ನಿಂತು ಕೆಳಗಡೆ ನೋಡಿದರೆ ನಾವು ಬಿಟ್ಟು ಬಂದ ಭೂಮಿ ಒಂದು ದೊಡ್ಡ ಮಣ್ಣಿನ ಉಂಡೆಯಂತೆ ಕಾಣುತ್ತಿತ್ತು. ಅಲ್ಲಿನ ಊರು, ಬೆಟ್ಟಿ ಕಾಡು, ನದಿ ಮುಂತಾದುವು ಸಣ್ಣಸಣ್ಣಗೆ ಕಾಣುತ್ತಿದ್ದರೂ ಕೂಡ, ಅಲ್ಲಿ ಮನುಷ್ಯರಿದ್ದಾರೆ ಎಂದು ಹೇಳಿದರೆ ನಂಬುವ ಹಾಗಿರಲಿಲ್ಲ. ನಾವು ಚಂದ್ರಲೋಕದಲ್ಲಿ ಕಂಡ ಮೊದಲನೆಯ ದೃಶ್ಯ ಬಹಳ ಭಯಂಕರವಾಗಿತ್ತು. ಬೃಹದಾಕಾರದ ಹಕ್ಕಿಗಳ ಮೇಲೆ ಬೃಹದಾ ಕಾರದ ಮನುಷ್ಯರು ಸವಾರಿಮಾಡುತ್ತಿದ್ದರು. ಆ ಹಕ್ಕಿ ಹದ್ದಿನ ಹಾಗಿತ್ತು. ಒಂದೊಂದು ಹಕ್ಕಿಗೂ ಮೂರು ಮೂರು ತಲೆ. ಅದು ಹಾರಲು ರೆಕ್ಕೆ ಬಿಚ್ಚಿದಾಗ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಅಳೆದರೆ ಎರಡು ತೆಂಗಿನ ಮರದ ಎತ್ತರಕ್ಕೆ ಸಮನಾಗು ತ್ತಿತ್ತು. ನಾವು ಭೂಮಿಯಲ್ಲಿ ಕುದುರೆಯ ಮೇಲೆ ಸವಾರಿಮಾಡು ವಂತೆ ಚಂದ್ರಲೋಕದವರು ಇಂಥ ಹಕ್ಕಿಗಳನ್ನು ಹತ್ತಿಕೊಂಡು ಹೋಗುತ್ತಿದ್ದರು. ಚಂದ್ರಲೋಕದ ಜನರೂ ಅಷ್ಟ: ಒಂದೂವರೆ ತೆಂಗಿನ ಮರಕ್ಕಿಂತ ಕಡಿಮೆ ಎತ್ತರದವರೇ ಇಲ್ಲ. ಅಗಲ, ಅದಕ್ಕೆ ತಕ್ಕ ಹಾಗೆ. ಇವರ ತಲೆ ಇವರ ಕತ್ತಿನ ಮೇಲೆ ಇರುವುದಿಲ್ಲ. ಇವರು ತಮ್ಮ ತಲೆಗಳನ್ನು ಯಾವಾಗಲೂ ಎಡಕಂಕುಳಲ್ಲಿ ಇರುಕಿಕೊಂಡಿ ರುತ್ತ್ವಾರೆ. ಕತ್ತಿನ ಹತ್ತಿರ ಕಿವಿಗೆ ಬದಲಾಗಿ ಎರಡು ಸಣ್ಣ ರೆಕ್ಕೆ ಬೆಳೆದಿರುತ್ತದೆ. ಇವರ ಕಾಲುಗಳಲ್ಲಿ ಐದ್ವೆದು ಬೆರಳುಗಳಿದ್ದರೂ ಕೈಯಲ್ಲಿ ಮಾತ್ರ ಒಂದೊಂದೇ ಬೆರಳು. ಆದರೂ ನಾವು ಐದು ತಮಗೆ ತಲೆಗಳನ್ನು ಮನೆ € ಬಿಟ್ಟು ಹೋಗುತ್ತಾರೆ; ಅದು ಸುತ್ತ ನಡೆಯುವುದೆಲ್ಲ ವನ್ನೂ ಕಾಣುತ್ತದೆ. ನನ್ನು ಇವರು ಸಲ, ಎಲಿಯಾದರೂ ಇವರು ಊ ಒಂದೊಂದು ಬಿ pS ಸುತಾ ಶ್ರ ಗ ಮಕ್ಕಳ ಮಂಛೌಸನ್‌ ಅಥವಾ, ಬೆರಳುಗಳಿಂದ ಮಾಡುವುದಕ್ಕಿಂತ ಹೆಚ್ಚಿನ ಕೆಲಸ ಒಂದೇ ಬೆರಳಿನಿಂದ ಸಾಧಿ ಹೊರಗೆ ಸಂಜಾರ ಹೋಗಬೇಕಾದಾಗ ತ ಯಲೆ ೫೪ NY \ y ( 7 / NA AN ಬಾ ೫ | ಸಿ ಮುಖಿ ಸಾ / | hd \ NS NN | | | | | NSS Wy - ನ ಯ ಮು ಆ ನ | ಗ ಟೋ [ಮೀ ಯ್‌ ಸ್ಸ್‌ 2) ಸಕ್ಲಿ ಗ ಆ NN ಎಯ್‌ A ಶ್ರೌತ ಅಕೆ 32 ಭಾ pL, SS NNN ಸಜ We NSN 3 LT Me ತೆ ಬ ಪಾ ಬಾನಿನ ರ್‌ WN SAIN Jy TSA RSS WN ಜ್‌ ಜಲಸ್‌ SAE CT ಕ ಸಯ್‌ ಯ ಜಿಕೆ ರಸನ NNN #4 WN ಕ ಹ ಇನಿಯ ಷ್‌ ಮಿ | ಸ ` ಯಾಗೆ ಸಾಹಾ ರಿಯರ್‌ N ಭಾ ಅದ್‌ ವಮ ಮೆಮೆ ಜಿ NN ಗಃ ಕ ಒದ್ದು N ay Rue x NANI NANT ಶ್ರ ಕ 7 N AN ಸ್ನ ಗ್ಗ NN 77) ಸ A ಕ ಇ" At ಟಿ 1! K AN (i NNN ಚಂದ್ರಲೋಕ ನಿವಾಸಿ ಚೆಂದ್ರ ಲೋಕದ ಸರಿಚಯ ೫೫ ಹೋಗುವುದಕ್ಕೆ ಬೇಸರವಾದರೆ ತಮ್ಮ ತಲೆಯನ್ನು ಮಾತ್ರ ಕಳು ಹಿಸಿಕೊಡುತ್ತಾರೆ. ಅದು ಹೋಗಿ, ಬಂದು, ತಾನು ಕಂಡದ್ದನ್ನು ವರದಿ ಒಬ್ಬಿಸುತ್ತದೆ. ಇವರಿಗೆ ತಮ್ಮ ಕಣ್ಣುಗಳನ್ನು ಕಳಚಿ, ಪುನಃ ಕೀಲಿಸುವ ಅನುಕೂಲವಿರುವದರಿಂದ ಈ ಲೋಕದಲ್ಲಿ ಕಣ್ಣುಗಳ ತಯಾರಿ ಕೆಯೂ ವ್ಯಾಪಾರವೂ ಹೆಚ್ಚು. ಕೆಂಪ್ರು ಹಸಿರು, ನೀಲಿ, ಹಳದಿ, ಮುಂತಾದ ಬಣ್ಣ ಬಣ್ಣದ ಕಣ್ಣುಗಳನ್ನು ಇಲ್ಲಿ ತಯಾರಿಸುತ್ತಾರೆ. ಬೇಕಾದವರು ಬೇಕಾದ ಬಣ್ಣದ ಕಣ್ಣುಗಳನ್ನು ಬಳಸುತ್ತಾರೆ. ಇವರ ದೇಹದ ಒಳಗಡೆ ಹೃದಯ, ಶ್ಹಾಸಕೋಶ್ಕ ಹೊಟ್ಟೆ, ಕರುಳು ಮುಂತಾದ ಯಾವ ಅಂಗವೂ ಇಲ್ಲ. ಇನರ ಬಲ ಎದೆಯ ಹತ್ತಿರ ಒಂದು ಬಾಗಿಲಿದೆ. ಹಸಿವಾದಾಗ ಈ ಬಾಗಿಲನ್ನು ತೆರೆದು, ಆಹಾರವನ್ನು ಒಳಗೆ ಸುರಿದು, ಪುನಃ ಬಾಗಿಲು ಮುಚ್ಚು ತ್ತಾರೆ. ತಿಂದದ್ದೆಲ್ಲ ಹಾಗೇ ಅಲ್ಲೇ ಜೀರ್ಣವಾಗಿಹೋಗುತ್ತದೆ. ಇವರು ತಿನ್ನುವುದಾದರೂ ತಿಂಗಳಿಗೆ ಒಂದು ಸಲ ಮಾತ್ರ. ಇವರು ಮಿತಾಹಾರಿಗಳು, ವರುಷಕ್ಕೆ ಹನ್ನೆರಡು ಸಲ ಮಾತ್ರ ಇವರು ಊಟಮಾಡುವರು. ಇವರಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲ. ಇವರು ತರಕಾರಿ ಬೆಳೆದ ಹಾಗೆ ಗಿಡಗಳಲ್ಲಿ ಹುಟ್ಟ ಬೆಳೆಯುತ್ತಾರೆ. ಒಂದು ಗಿಡ ದಿಂದ ವಿಜ್ಞಾನಿ, ಇನ್ನೊಂದರಿಂದ ಕನಿ, ಮತ್ತೊಂದರಿಂದ ವೈದ್ಯ, ಬೇರೊಂದರಿಂದ ವ್ಯಾಪಾರಿ ಹೀಗೆಯೇ ಬೇರೆ ಬೇರೆ ವೃತ್ತಿಯ ಜನ ಈ ಲೋಕದಲ್ಲಿ ಬೇರೆ ಬೇರೆ ಗಿಡಗಳಿಂದ ಹುಟ್ಟುತ್ತಾರೆ. ಇವರು ಬದುಕಿ ಬಾಳಿ, ಆಯುಸ್ಸು ಮುಗಿದಾಗ ಸಾಯುವುದಿಲ್ಲ; ಹೊಗೆಯ ಹಾಗೆ ಕರಗಿ, ಕಣ್ಣಿಗೆ ಕಾಣದೆ ಹೋಗುತ್ತಾರೆ. ೫೬ ಮಕ್ಕಳ ಮಂಛೌಸನ್‌ ನಾನು ಚಂದ್ರಲೋಕಕ್ಕೆ ಹೋಗಿದ್ದಾಗ ಅಲ್ಲಿನ ರಾಜನಿಗೂ ಸೂರ್ಯನಿಗೂ ಯುದ್ಧ ಹತ್ತಿಕೊಂಡಿತ್ತು. ಚಂದ್ರರಾಜ ನನಗೂ ಒಬ್ಬ ಸೇನಾಧಿಪತಿಯ ಪಟ್ಟವನ್ನು ಕಟ್ಟುತ್ತೇನೆ ಎಂದ. ಆದರೆ ನಾನು ಬಹಳ ಉಪಾಯವಾಗಿ ಆ ಗೌರವದಿಂದ ತಪ್ಪಿಸಿಕೊಂಡೆ. ನಾನು ವೀರನೇ ಆದರೂ ಕೂಡ ಆ ಚಂದ್ರಲೋಕದವರ ಆಕಾರದ ಮುಂದೆ ನಾನು ಯಾವ ಮೂಲೆ? ಅಲ್ಲಿನ ಒಂದು ಸೊಳ್ಳೆ ನಮ್ಮಲ್ಲಿನ ಒಂದು ಕುರಿಯಷ್ಟು ದಪ್ಪ ಇತ್ತು! ಚಂದ್ರಲೋಕದವರು ಯುದ್ಧ ಮಾಡಬೇಕಾದ ಪ್ರಸಂಗ ಬಂದಾಗ, ತಮ್ಮ ಪಕ್ಕದ "ನಾಯಿ ನಕ್ಷತ್ರ'ದಲ್ಲಿ ಇದ್ದವರ ಸಹಾಯ ಕೋರುತ್ತಿದ್ದರು. ನಾನು ಹೋದ ಕಾಲದಲ್ಲಿ ಈ ನಾಯಿನಕ್ಷತ್ರವಾಸಿಗಳೂ ಕೆಲವರು ಅಲ್ಲಿ ಬಂದಿದ್ದರು. ಇವರಿಗೆ ನಾಯಿಯ ಹಾಗೆಯೇ ತಲೆ, ಬಾಲ, ಮೈಯ ಇವರ ಕಣ್ಣು ಮೂಗಿನ ಕೆಳಗೆ, ಮೇಲುತುಟಯ ಮೇಲೆ ಇತ್ತು. ಕಣ್ಣುಗಳಿಗೆ ರೆಪ್ಸೆಗಳಿರಲಿಲ್ಲ. ನಿದ್ರೆ ಬಂದಾಗ, ತಮ್ಮ ನಾಲಿಗೆಯಿಂದ ಕಣ್ಣು ಗಳನ್ನು ಮುಚ್ಚಿ ಕೊಳ್ಳುತ್ತಿದ್ದರು. ಅವರ ಎತ್ತರ ಕೂಡ ಒಂದು ಅಥವಾ ಒಂದೂಕಾಲು ತೆಂಗಿನ ಮರಕ್ಕೆ ಏನೂ ಕಡಿಮೆಯಿರ ಲಿಲ್ಲ. ಯುದ್ಧಕ್ಕೆ ನಿಂತಾಗ, ಇವರ ಅಮೋಫವಾದ ಆಯುಧ ವೆಂದರೆ ಬಿಳಿಯ ಮೂಲಂಗಿ! ಇದು ಯಾರಿಗೆ ತಗುಲುವುದೋ ಅವರು ಪುನಃ ತಲೆಯೆತ್ತುವ ಮಾತೇ ಇಲ್ಲ! ಬಿಳಿಯ ಮೂಲಂಗಿ ಮುಗಿದು ಹೋದರೆ, ಬೆಳ್ಳುಳ್ಳಿಯ ಗಡ್ಡೆಗಳನ್ನು ಬಾಂಬು ಎಸೆದ ಹಾಗೆ ಎಸೆಯುತ್ತಿದ್ದರು. ಅದು ತಗುಲಿದವರು ತಟ್ಟನೆ ಮೂರ್ಛೆ ಬಿದ್ದು ಸಾಯುತ್ತಿದ್ದರು. ಈ ಎರಡು ಆಯುಧಗಳಲ್ಲದೆ, ನಾಯಿ ನಕ್ಷತ್ರದವರು ನಾಯಿಕೊಡೆಗಳನ್ನು ಗುರಾಣಿಯ ಹಾಗೆ ಹಿಡಿದು ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದ ರು. ಚಂದ್ರರೋಕದ ಸರಿಚಯ | ನಾಯಿ ನಕ್ಷತ್ರ ನಿವಾಸಿ ೫೮ ಮಕ್ಕಳ ಮಂಛೌಸನ್‌ ಚಂದ್ರಲೋಕಕ್ಕೆ ಹೋಗಿ ಬನ್ನಿ. ಆಗ, ನನ್ನ ಮಾತು ಸುಳ್ಳೇ ನಿಜವೇ ಎಂಬುದು ನಿಮಗೇ ಗೊತ್ತಾಗುತ್ತದೆ. ಮಂಛೌಸನನ ಅಪ್ಪ ನನ್ನ ಮಗನಾದ ಮಂಛೌಸನ್‌ ತನ್ನ ಕೆಲವು ಅನುಭವ ಗಳನ್ನು ನಿಮಗೆ ಹೇಳಿದ್ದಾ ನಂತೆ. ನಾನೂ ಏನಾದರೂ ಹೇಳ ಬೇಕೆಂದು ಅನನ ಬಲವಂತ ಬಹಳ. ಆದ್ದರಿಂದ ನನ್ನದೂ ಒಂದು ಅನುಭವ ಹೇಳುತ್ತೇನೆ, ಕೇಳಿ. ನಾನು ಇನ್ನೂ ಚಿಕ್ಕ ಹುಡುಗನಾಗಿದ್ದಾಗ ಆಗಲೇ ಸ್ವಲ್ಪ ಮುದುಕನಾಗಿದ್ದ. ಗಡ್ಡ, ಮಾಸೆ, ಎಲ್ಲಾ ನರೆತುಹೋಗಿತ್ತು. ನಮ್ಮ ಮನೆಯ ತುಂಬ ಜೇನುಗೂಡುಗಳಿದ್ದುವು. ಅದ ರೊಳಗಿನ ಜೇನುಹುಳುಗಳನ್ನು ನಾನು ದಿನವೂ ಎಣಿಸಬೇಕಾಗಿತ್ತು. ಜೇನುಹುಳುಗಳು ಲೆಕ್ಕಕ್ಕೆ ಸಿಕ್ಕಿದರೂ, ಜೇನುಗೂಡುಗಳನ್ನು ಎಣಿಸುವುದಕ್ಕೇ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನೆ ಬೆಳಗ್ಗೆ, ಎಂದಿನ ಹಾಗೆಯೇ ಜೇನುಹುಳು ಗಳನ್ನು ಎಣಿಸುತ್ತಿದ್ದ. ಒಂದು ಜೇನುಹುಳು ಕಡಿಮೆಬಂತು. ಏನು ಮಾಡುವುದು? ನಮ್ಮ ಮನೆಯಲ್ಲಿ ದಿನಕ್ಕೆ ಮೂರು ಮೊಟ್ಟೆ ಯಿಡುತ್ತಿದ್ದ ಹುಂಜನನ್ನು ಸವಾರಿಮಾಡಿಕೊಂಡು ಆ ಜೇನುಹುಳು ವನ್ನು ಹುಡುಕಿಕೊಂಡು ಹೊರಟಿ. ಆ ಜೇನುಹುಳುನಿನ ರೆಕ್ಕೆಯ ಗುರುತುಗಳನ್ನೇ ಹಿಂಬಾಲಿ ಸುತ್ತ ಬಂದೆ. ಸಮುದ್ರತೀರದ ವರೆಗೂ ಬಂದು ನೋಡಿದರೆ, ಅದು ಸಮುದ್ರನನ್ನು ದಾಟತ್ತೆಂದು ಕಂಡುಬಂತು. ನೀರಿನ ಮೇಲೂ ಅದರ ರೆಕ್ಕೆಯ ಗುರುತು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಮಂಛೌಸನನ ಅಪ್ಪ ೬೯ ಸಮುದ್ರವನ್ನು ದಾಟ ಹೋದೆ. ಆಚೆಯ ದಡದಲ್ಲಿ ಒಬ್ಬ ರೈತ ನನ್ನ ಜೇನುಹುಳುವನ್ನು ತನ್ನ ನೇಗಿಲಿಗೆ ಹೂಡಿಕೊಂಡು ಗದ್ದೆಯನ್ನು ಉಳುತ್ತಿದ್ದ. “ಏಯ್‌! ಅದು ನನ್ನ ಜೇನು! ಕೂಡು ಇಲ್ಲಿ!” ಎಂದು ಕೂಗಿದೆ. ಅದಕ್ಕೆ ಅವನು " ನಿಮ್ಮ ದಾದರೆ ಅಗತ್ಯವಾಗಿ ತೆಗೆದುಕೊಳ್ಳಿ'' ಎಂದ. "" ಇಷ್ಟು ಹೊತ್ತೂ ಅದನ್ನು ದುಡಿಸಿದುದಕ್ಕೆ ಕೂಲಿ?” ಎಂದೆ. ಅವನು ಜೇನು ಹುಳುವಿನ ಕೂಲಿಗಾಗಿ ಒಂದು ಚೀಲ ರಾಗಿ ಕೊಟ್ಟಿ. ಆ ರಾಗಿಯ ಚೀಲವನ್ನು ಬೆನ್ನಿಗೆ ಬಿಗಿದುಕೊಂಡೆ. "ಪಾಪ, ನನ್ನನ್ನು ಹೊತ್ತೂ ಹೊತ್ತೂ ಹುಂಜ ಬಹಳ ಬಳಲಿದೆ' ಎಂದು, ಅದರ ಬೆನ್ನಿನಿಂದ ಕೆಳಗಿಳಿದು, ಜೇನುಹುಳುವಿನ ಮೇಲೆ ಏರಿ ಕೊಂಡೆ. ಹುಂಜ ನನ್ನ ಹಿಂದೆ ಹಾರಿ ಬರುತ್ತಿತ್ತು. ಮನೆಗೆ ಹಿಂದಿರುಗಿ ಹೋಗುವಾಗ ಪುನಃ ಸಮುದ್ರವನ್ನು ದಾಬಿದೆವು. ಸ್ಪಲ್ಪ ಸಂಜೆಗತ್ತಲು ಆಗುತ್ತಿದ್ದು ದರಿಂದ ಹುಂಜಕ್ಕೆ ಕಣ್ಣು ಸರಿಯಾಗಿ ಕಾಣದೆ, ಮುಂದೆ ಬಂದು ನನ್ನ ಬೆನ್ನಿಗೆ ಢಿಕ್ಕಿ ಹೊಡೆಯಿತು. ಬೆನ್ನಿಗೆ ಕಟ್ಟಿಕೊಂಡಿದ್ದ ರಾಗಿಯ ಚೀಲ ಹರಿದು ಹೋಯಿತು. ರಾಗಿಯೆಲ್ಲ ನೀರಿನಲ್ಲಿ ಸುರಿದುಹೋಯಿತು. ಆ ವೇಳೆಗೆ ಸಮುದ್ರವನ್ನು ದಾಟ, ದಡಕ್ಕೆ ಬಂದಿದ್ದೆ ವು. ನಾನೂ ಜೇನುಹುಳುವಿನ ಬೆನ್ನಿನಿಂದ ಇಳಿದು, ಅದಕ್ಕೆ ಹುಲ್ಲು ಮೇಯಿಸಿದೆ. ಹುಂಜವನ್ನು ನನ್ನ ಹತ್ತಿರದಲ್ಲಿಯೇ ಕಟ್ಟಿ ಹಾಕಿ, ಅದಕ್ಕೂ ನನ್ನ ಬುತ್ತಿಯಿಂದಲೇ ಸ್ವಲ್ಪ ಒಣರೊಟ್ಟಿ ಕೊಟ್ಟಿ. ಆ ಮೇಲೆ ನಾವು ಮೂವರೂ ನಿದ್ರೆಮಾಡಿದೆವು. ಬೆಳಗ್ಗೆ ಎದ್ದು ನೋಡಿದರ, ನನ್ನ ಆಶ್ಚರ್ಯವನ್ನು ಏನೆಂದು ವರ್ಣಿಸಲಿ! ರಾತ್ರೆ ನಾನು ಮಲಗಿದ್ದಾಗ ತೋಳಗಳ ಹಿಂಡು ಬಂದು ನನ್ನ ಜೇನುಹುಳುವನ್ನು ಸಿಗಿದು, ಸೀಳಿ, ನುಂಗಿಹಾಕಿ ೬6 ಮಕ್ಕಳ ಮಂಛೌಸನ್‌ ಬಿಟ್ಟದ್ದು ವು. ಸುತ್ತಲೂ ಇದ್ದ ಬೆಟ್ಟಗಳ ನಡುವಿನ ಕಣಿವೆಗಳಲ್ಲಿ ಜೇನುತುಪ್ಪ ಮೊಣಕಾಲುದ್ದ ಮಡುಗಟ್ಟಿ ನಿಂತಿತ್ತು. ಅನ್ಯಾಯವಾಗಿ ಇಷ್ಟು ಜೇನುತುಪ್ಪ ವ್ಯರ್ಥವಾಗು ! ಏನು ಮಾಡೋಣ?'' ಎಂದು ಯೋಚಿಸಿದೆ. ನನ್ನ ಯಾವುದೂ ಪಾತ್ರೆಯಿರಲಿಲ್ಲ. ಆದರೆ ಒಂದು ಕೊಡಲಿ ಇತ್ತು. ಅದನ್ನೇ ಹಿಡಿದುಕೊಂಡು ಪಕ್ಕದ ಕಾಡಿಗೆ ಹೋದೆ. ಅಲ್ಲಿ ಎರಡು ಜಿಂಕೆ ಒಂದೇ ಕಾಲಿನ ಮೇಲೆ ನರ್ತನಮಾಡುತ್ತಿ ದ್ದುವು. ನನ್ನ ಕೊಡಲಿಯನ್ನು ಬೀಸಿ ಎಸೆದು, ಅವುಗಳ ಕಾಲು ಮುರಿದು, ಅವುಗಳ ಮೂರು ಚರ್ಮದಿಂದ ಎರಡು ಚೀಲ ಮಾಡಿದೆ. ಅದರ ತುಂಬ ಆ ಜೇನುತುಪ್ಪ ತುಂಬಿಕೊಂಡು, ಅದನ್ನು ಹುಂಜದ ಮೇಲೆ ಹೇರಿ, ಮನೆಯ ಕಡೆಗೆ ಹೊರಟೆ. ನಾನು ಮನೆಯ ಹತ್ತಿರ ಬರುವ ವೇಳೆಗೆ ಆಗ ತಾನೆ ನಮ್ಮ ತಂದೆಯ ಜನನವಾಗಿ ಅವರಿಗೆ ನಾಮಕರಣ ಮಹೋತ್ಸವ ನಡೆ ಯುತ್ತಿತ್ತು. ಪುರೋಹಿತರು ಯಾರೂ ಬಂದಿರಲಿಲ್ಲ. " ಸ್ವರ್ಗಕ್ಕೆ ಹೋಗಿ ಪುರೋಹಿತರನ್ನು ಕರೆದುಕೊಂಡು ಬಾ' ಎಂದು ನನ್ನ ಮಗ ನನಗೆ ಆಜ್ಞೆಮಾಡಿದ. ಸ್ವರ್ಗಕ್ಕೆ ಹೋಗುವ ದಾರಿ ಯಾವುದೋ ನನಗೆ ಗೊತ್ತಿರಲಿಲ್ಲ. ಯಾರನ್ನಾದರೂ ಕೇಳೋಣ ವೆನ್ನುವ ಹೊತ್ತಿಗೆ ಸಮುದ್ರದಲ್ಲಿ ಸುರಿದುಹೋದ ನನ್ನ ರಾಗಿಯ ಜ್ಞಾಪಕ ಬಂತು. ಬೇಗ ಬೇಗ ಅಲ್ಲಿಗೆ ಓಡಿಹೋದೆ. ರಾಗಿ ಮೊಳೆತು, ಗಿಡ ವಾಗಿ, ಆಕಾಶದವರೆಗೂ ಬೆಳೆದು ನಿಂತಿತ್ತು. ನಾನೂ ಬರಬರನೆ ಅದನ್ನು ಹತ್ತಿ ಮೇಲೆ ಹೋದೆ. ಸ್ವರ್ಗವನ್ನು ನಾನು ಸೇರುವ ವೇಳೆಗೆ ರಾಗಿಯ ಗಿಡದ ತುದಿಯಲ್ಲಿ ತೆನೆ ಹಣ್ಣಾಗಿ ತಲೆದೂಗು ತ್ತಿತ್ತು. ಅಲ್ಲಿ ಒಬ್ಬ ಗಂಧರ್ವ ಸ್ವಲ್ಪ ರಾಗಿಯನ್ನು ಕುಯಿದು ತ್ತದ ಹ ಮಂಛೌಸನನ ಅಪ್ಪ ೬೧ ಕೊಂಡು, ಅದನ್ನು ಬೀಸಿ ಹಿಟ್ಟುಮಾಡಿ, ಕಲಸಿ, ತಟ್ಟಿ, ಸುಟ್ಟು, ರೊಟ್ಟಿ ಮಾಡಿಕೊಂಡು ತಿನ್ನುತ್ತಿದ್ದ. ನಾನು ಅವನಿಗೆ ನಮಸ್ಕಾರಮಾಡಿ, ಸ್ಪರ್ಗದಲ್ಲಿ ಇರುವವರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ, ಹೀಗೆ, ನಮ್ಮ ತಂದಿಗೆ ಈಗ ತಾನೆ ನಾಮಕರಣೋತ್ಸವ ನಡೆಯಬೇಕಾಗಿದೆ. ಮಂತ್ರ ಬಲ್ಲ ಪುರೋಹಿತರು ಯಾರನ್ನಾದರೂ ದಯಮಾಡಿ ಕಳುಹಿಸಿ ಕೊಡಬೇಕು'' ಎಂದು ಪ್ರಾರ್ಥಿಸಿದೆ. ಅದರಂತೆ ಒಬ್ಬ ಪುರೋ ಹಿತರು ನನ್ನ ಜೊತೆಯಲ್ಲಿ ಹೊರಟರು. ಆದರೆ ಒಳಗಡೆ ನಾನು ರಾಗಿಯ ರೊಟ್ಟಿ ತಿನ್ನುತ್ತಿರುವಾಗ ಹೊರಗಡೆ ಅಸಾಧ್ಯವಾಗಿ ಮಳೆ ಹುಯಿದು, ದೊಡ್ಡ ಪ್ರವಾಹ ಬಂದು, ನಾನು ಹತ್ತಿಕೊಂಡು ಬಂದಿದ್ದ ರಾಗಿಯ ಗಿಡ ಕೊಚ್ಚಿ ಕೊಂಡು ಹೋಗಿತ್ತು. ಅಯ್ಯಯ್ಯೋ! ಕೆಳಗೆ ಇಳಿಯುವುದು ಹೇಗೆ?'' ಎಂದು ತಲೆಯ ಮೇಲೆ ಕೈಯಿಟ್ಟುಕೊಂಡು ಕುಳಿತೆ. ನನ್ನ ಕೈತುಂಬ ನನ್ನ ತಲೆಕೂದಲು ಸಿಕ್ಕಿತು. ನನ್ನ ತಲೆ ಕೂದಲಾದರೋ ತುಂಬ ಉದ್ದ. ನಿಂತರೆ ನೆಲವನ್ನು ಗುಡಿಸು ತ್ತಿತ್ತು, ಕುಳಿತುಕೊಂಡರೆ ಕಿವಿಯನ್ನು ಮುಚ್ಚುತ್ತಿತ್ತು. ಒಡನೆಯೆ ಜೇಬಿನಲ್ಲಿದ್ದ ಚಾಕುವನ್ನು ತೆಗೆದು, ಒಂದೊಂದು ಕೂದಲನ್ನೂ ಕುಯಿದು, ಒಂದನ್ನು ಒಂದಕ್ಕೆ ಗಂಟುಹಾಕಿ, ಆ ಉದ್ದವಾದ ದಾರದ ಮೂಲಕ ನಾನೂ ಪುರೋಹಿತನೂ ಭೂಮಿಗೆ ಇಳಿದೆವು. ಇಳಿದೆವು, ಎಂದರೆ ಇಳಿಯಲು ತೊಡಗಿದೆವು. ನೀವು ತ್ರಿಶಂಕು ಸ್ವರ್ಗ ಎನ್ನುತ್ತೀರಲ, ಅದರ ಹತ್ತಿರ ಬಂದಿದ್ದೆವು. ಆ ವೇಳೆಗೆ ಬಹಳ ಕತ್ತಲೆಯಾಗಿಹೋಯಿತು. ಕಣ್ಣು ಕಾಣದ ಕತ್ತಲೆಯಲ್ಲಿ ಕೆಳಗಿಳಿಯುವುದು ತುಂಬ ಅಪಾಯವೆಂದು ಅಲ್ಲೇ ನಿಂತೆವು. ತ್ರಿಶಂಕು ನಮ್ಮನ್ನು ತನ್ನ ಸ್ವರ್ಗಕ್ಕೆ ಬರಹೇಳಿದ. ಆದರೆ ಅವನ ೬೨ ಮಕ್ಕಳ ಮಂಛೌಸನ್‌ ವಿಚಾರವಾಗಿ ಏನೇನೋ ಕಥೆ ಕೇಳಿದ್ದೆ ವಾದ್ದರಿಂದ ಅಲ್ಲಿ ಹೋಗಲು ಮನಸ್ಸು ಬರಲಿಲ್ಲ. ಅಲ್ಲಿಯೇ ಆ ಕೂದಲಿನ ಹಗ್ಗದಿಂದ ಒಂದು ತೊಟ್ಟಿಲನ್ನು ಹೆಣೆದು ಅದರೊಳಗೆ ಮಲಗಿಕೊಂಡೆವು. ಮಲಗಿಕೊಂಡರೂ ಬೇಗ ನಿದ್ರೆ ಬರಲಿಲ್ಲ... ಏನಾದರೂ ಪುಸ್ತಕ ಓದುತ್ತ ಮಲಗಿದರಾದರೂ ನಿದ್ರೆ ಬರುವುದೋ ಏನೋ ಎಂದು ನೋಡಿದರೆ, ದೀಪ ಎಲ್ಲಿಂದ ತರುವುದು? ನನ್ನ ಜೇಬಿನಲ್ಲಿ ಬೆಂಕಿಕಡ್ಡಿಯ ಸೆಟ್ಟಗೆಯೇನೋ ಇತ್ತು. ಆದರೆ, ದೀಪ? "ಏನು ಮಾಡುವುದು?” ಎಂದು ಚಿಂತಿಸುತ್ತ ಹಾಗೇ ಹೊರಳಿದಾಗ ಪಕ್ಕದಲ್ಲಿ ಏನೋ ಚುಚ್ಚಿದ ಹಾಗಾಯಿತು, ಕೈಹಾಕಿ ನೋಡಿದೆ. ಅಂಗಿಯ ಜೇಬಿನಲ್ಲಿದ್ದ ಒಂದು ಹೊಲಿಯುವ ಸೂಜಿ ಕೈಗೆ ಸಿಕ್ಕಿತು. ಅದನ್ನು ಹೊರಗೆಳೆದು, ಉಗುರುಗಳಿಂದ ಸಣ್ಣಗೆ ಸೀಳಿ, ಬೆಂಕಿಕಡ್ಡಿ ಗೀಚಿ, ಹತ್ತಿಸಿದೆ. ಬೆಂಕಿ ಬಹಳ ಚೆನ್ನಾಗಿ ಉರಿಯಿತು. ಓದುವುದಕ್ಕೆ ಬೆಳಕಾದುದು ಮಾತ್ರವಲ್ಲದೆ, ಆ ಚಳಿಯಲ್ಲಿ ಮೈಯೂ ಬೆಚ್ಚಗಾಯಿತು. ಬಹು ಬೇಗ ಸುಖವಾಗಿ ನಿದ್ರೆ ಬಂತು. ಆದರೆ ಮಾತ್ರ, ಅನ್ಯಾಯ! ನನಗೆ ಗಾಢವಾಗಿ ನಿದ್ರೆಹತ್ತಿ ರುವಾಗ, ನಾನು ಮಲಗಿದ್ದ ತೊಟ್ಟಿಲಿಗೆ ಬೆಂಕಿ ತಾಕಿ, ಅದು ಸುಟ್ಟು ಬೂದಿಯಾಗಿ ಹೋಯಿತು. ಹಿಂದಿ ನಿಮ್ಮ ತ್ರಿಶಂಕು ರಾಜ ಸ್ವರ್ಗದಿಂದ ಬಿದ್ದನಂತಲ್ಲ ಹಾಗೆ ನಾನೂ ತಲೆಕೆಳಗಾಗಿ ಉರುಳು ರುಳಿ ಬಿದ್ದು, ಭೂಮಿಯನ್ನು ತಾಗಿದೊಡನೆ ಸೊಂಟದವರೆಗೂ ಹೂತುಹೋದೆ. ಬಿಡಿಸಿಕೊಳ್ಳೋಣವೆಂದು ಎಷ್ಟೆಷ್ಟೋ ಒದ್ದಾಡಿದರೂ ಆಗ ಲಿಲ್ಲ. ಅಯ್ಯೋ, ಇದಕ್ಕೆ ಇಷ್ಟು ಆಯಾಸನೇಕೆ?'' ಎಂದು ಕೊಂಡು, ನೇರವಾಗಿ ಮನೆಗೆ ಓಡಿಹೋಗಿ, ಒಂದು ಗುದ್ದಲಿ ಮಂಛೌಸನನ ಅಪ್ಪ ೬೩ ತಂದು, ನನ್ನ ಸುತ್ತಲೂ ಒಂದು ಹಳ್ಳ ಅಗೆದು, ಸುಲಭವಾಗಿ ಮೇಲೆದ್ದು ಬಂದೆ. ಅದುವರೆಗೆ ನನ್ನ ತಲೆಯಮೇಲೆ ಕುಳಿತು ಕೊಂಡಿದ್ದ ಪುರೋಜತನನ್ನು ಕೆಳಗಿಳಿಸಿ ಅವನ ಕೈಹಿಡಿದು ಮನೆಗೆ ನಡೆಸಿಕೊಂಡು ಬಂದೆ. ನಾನು ಮನೆಯ ಹತ್ತಿರ ಬಂದಾಗ ನಮ್ಮ ತೆಂದೆ ತಾಯಿ ತಾತ ಮುತ್ತಾತ ಎಲ್ಲರೂ ಗದ್ದೆಯಲ್ಲಿ ಬಾವಿ ಅಗೆಯುತ್ತಿದ್ದರು. ಸೂರ್ಯನ ಬೆಳುದಿಂಗಳು ಅಲಿಕಲ್ಲಿನ ಹಾಗೆ ಭಯಂಕರವಾಗಿ ಸುಡುತ್ತಿತ್ತು. ಎಲ್ಲರ ಮುಖಗಳಿಂದಲೂ ಬೆವರು ಹೊಳೆಹೊಳೆ ಯಾಗಿ ಹರಿದು, ಅವರು ತೋಡುತ್ತಿದ್ದ ಬಾವಿಗಳಲ್ಲಿ ತುಂಬಿ ಕೊಳ್ಳು ತ್ತಿತ್ತು. 1 ಅವರ ಆಯಾಸವನ್ನು ನೋಡಲಾರದೆ "ಮೂರು ದಿನ ಉದ್ದವೂ ಎರಡು ಗಂಟಿ ಎತ್ತರವೂ ನಾಲ್ಕು ಸೇರು ಅಗಲವೂ ಆದ ನಮ್ಮ ಕುದುರೆಯನ್ನು ಏಕೆ ಕರೆದು ತರಲಿಲ್ಲ? ಅದರ ನೆರಳಿ ನಲ್ಲಿ ನೀವೆಲ್ಲರೂ ತಣ್ಣ ಗೆ ಕೆಲಸ ಮಾಡಬಹುದಾಗಿತ್ತ Di ಎಂದಿ. ಅದನ್ನು ಕೇಳಿದೊಡ ನೆ, ನಮ್ಮ ತಂಬಿ ಅರೇಶೇ | ನಮಗೆ ಇದು ಹೊಳೆಯಲೇ ಇಲ್ಲನಲ್ಲ!' ಎಂದು ತಟಕ್ಕನೆ ಮನೆಗೆ ಹೋಗಿ ಕುದುರಿಯನ್ನು ತಂದರು. ಅನಂತರ ಎಲ್ಲರೂ ಅದರ ನೆರಳಿನಲ್ಲಿ ಅಗೆಯತೊಡಗಿದರು. ಸ್ಪಲ್ಪ ಹೊತ್ತಾದ ಮೇಲೆ, "" ಮನೆಯ ಬಾವಿಯಿಂದ ಸಿಹಿ ನೀರು ತಾ?' ಎಂದರು. ನಾನು ನೀರು ತರುವುದಕ್ಕೆ ಒಂದು ಎಲೆ ತೆಗೆದುಕೊಂಡು ಹೊರಟೆ, ನೀರು ಕಲ್ಲಿನ ಹಾಗೆ ಗಟ್ಟ ಯಾಗಿ ಬಿಟ್ಟಿತ್ತು. ಅದನ್ನು ಒಡೆಯುವುದಕ್ಕೆ ಯಾವುದೂ ಕಲ್ಲು ಸಿಕ್ಕಲಿಲ್ಲ. ನನ್ನ ತಲೆಯನ್ನೇ ತೆಗೆದು, ಅಲ್ಲಿ ಹೆಪ್ಪುಗಟ್ಟಿದ್ದ ನೀರನ್ನು ಚೆಚ್ಚಿ, ಅದನ್ನು ಎಲೆಯಲ್ಲಿ ತುಂಬಿಕೊಂಡು ತಂದುಕೊಟ್ಟಿ. ೬೪ ಮಕ್ಕಳ ಮಂಛೌಸನ್‌ | ನಿನ್ನ ತಲೆ ಎಲ್ಲೊ?” ಎಂದು ನಮ್ಮ ತಂದೆ ಕೇಳಿದರು. ಮುಟ್ಟ ನೋಡಿಕೊಂಡೆ. ತಲೆಯೇ ಇರಲಿಲ್ಲ. ಆಗ್ಕ ಅದನ್ನು ಬಾವಿಯ ಹತ್ತಿರ ಬಿಟ್ಟದ್ದೆ ನೆಂದು ಜ್ಞಾಪಕನಾಯಿತು. ಒಡನೆಯೆ ಓಡಿಹೋದೆ. ಆ ವೇಳೆಗೆ ಒಂದು ನರಿ ಅಲ್ಲಿಗೆ ಬಂದು, ಅದನ್ನು ತಿನ್ನಲು ತೊಡಗಿತ್ತು. ನಾನು ಮೆಲ್ಲನೆ ಸದ್ದುಮಾಡದೆ ಒಂದೆ ಬಂದು, ಅದರ ಬೆನ್ನಿನ ಮೇಲೆ ಒಂದು ಒದೆ ಒದ್ದ. ಆ ನರಿ ಆಗ ತಾನೆ ಒಂದು ಸಿಂಹದ ತಲೆಯನ್ನು ನುಂಗಿ ಬಂದಿತ್ತು. ನಾನು ಒದೆ ಒದ್ದೊಡನೆ, ಅದು ತಾನು ನುಂಗಿದ್ದ ಸಿಂಹದ ತಲೆಯನ್ನು ಕಕ್ಕಿತು. " ಹೇಗೂ ನನ್ನ ತಲೆ ಹೋಯಿತು? ಎಂದು ಆ ಸಿಂಹದ ತಲೆಯನ್ನೇ ನಾನು ನನ್ನ ಕತ್ತಿನ ಮೇಲೆ ಸಿಕ್ಕಿಸಿಕೊಂಡೆ. ಅಂದಿನಿಂದ ನಾನು ನಿಮ್ಮ « ನರಸಿಂಹ'ನ ಹಾಗೆ " ನರ-ಸಿಂಹ'ನೇ ಆಗಿದ್ದೇನೆ. ಮಿ ವಾಸು ಸವಾಯ್‌ ಬೆಂಗಳೂರು ಸಿಟ ಕೆ, ಪಿ, ಎಚ್‌, ಪ್ರೆಸ್ಸಿನಲ್ಲಿ ಡಿವಿ ರಾಮಧಾಯರಿಂದ ಮುದ್ರಿತವಾದುದು..೫೯೦-೧೭-೭-೧೯೪೬....೨೦೦೦ ಮಕ್ಕಳಿಗೆ ಸಚಿತ್ರವಾದ ಕಥೆಗಳು ( ಜಿ. ಪಿ. ರಾಜರತ್ತಂ ಬರೆದುದು) ಈಗ ತಾನೆ ಅಚಾಗಿರುವ ೧. ಪಂಡಿತನ ನೆರಳು ೨. ತೆನಾಲಿ ರಾಮ ೩. ಮಕ್ಕಳ ಮೆಂಛೌಸನ್‌ ೪. ಪುಟಾಣಿ ಪಂಚತಂತ್ರ ಸದ್ಯದಲ್ಲಿಯೇ ಅಚ್ಚಾಗಿ ಬರುವ ೫. ವಾಸವದತ್ತೂ ೯. ಭಾಸನ ಭಾರತ ೬, ವಸಂತಸೇನಾ ೧೦. ಆಲಿವರ್‌ ಟ್ರಸ್‌ ಜೀಮೂತವಾಹನ ೧೧. ರಾಬಿನ್‌ ಹುಡ್‌ ಚಂದನದಾಸ ೧೨. ವಿಲಿಯಂ ಜಲ್‌ ಇದುವರೆಗೆ ಅಚ್ಚಾಗಿರುವ ಮಕ್ಕಳ ಪುಸ್ತಕಗಳ ಪಟ್ಟಿ ಬೇಕಾದರೆ ಒಳಗಿದೆ ಕೆ.ಸಿ, ಎಚ್‌, ಪ್ರೆಸ್‌, ಕೋಟಿ, ಬೆಂಗಳೂರು ಸಿಟ